Advertisement
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
Related Articles
ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಅನುಮತಿಯನ್ನು ಏಕೆ ಕೊಡಲಾಗಿದೆ ಎಂಬ ಅಂಶವೇ ರಾಜ್ಯಪಾಲರ ಆದೇಶದಲ್ಲಿ ಇಲ್ಲ. ಸಿದ್ದರಾಮಯ್ಯ ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದಾರೆ? ಅವರು ಪರಿಶೀಲಿಸಿದ ಕಡತಗಳ ಉಲ್ಲೇಖವಿಲ್ಲ. ಯಾವ ಟಿಪ್ಪಣಿಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಿದ್ದೇನೆಂದು ಹೇಳಿಲ್ಲ. ಸಿಎಂ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಬಗ್ಗೆಯೂ ಉಲ್ಲೇಖಿಸಿಲ್ಲ.
Advertisement
ಪಕ್ಷಪಾತದಿಂದ ರಾಜ್ಯಪಾಲರು ಕೇವಲ 6 ಪುಟಗಳ ಆದೇಶ ನೀಡಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಗೆ ಸೆಕ್ಷನ್ 17ಎ ಸೇರ್ಪಡೆಗೆ ಕಾರಣವಿದೆ ಮೊದಲಿಗೆ ಲೋಕಾಯುಕ್ತ, ಲೋಕಪಾಲರ ಅನುಮತಿಗೆ ಪ್ರಸ್ತಾಪವಿತ್ತು. ಆದರೆ ಅನಂತರ ಸಕ್ಷಮ ಪ್ರಾಧಿಕಾರಕ್ಕೆ ಇದರ ಹೊಣೆ ನೀಡಲಾಯಿತು. ತನಿಖಾಧಿಕಾರಿಯಿಂದ ಮಾತ್ರ 17ಎ ಅನುಮತಿ ಕೇಳಬೇಕು. ಅದನ್ನು ಮೀರಿ ಆದೇಶ ಮಾಡಲು ಸಾಧ್ಯವಿಲ್ಲ. ರಾಜ್ಯಪಾಲರು ಅತಿ ವಿರಳ ಸಂದರ್ಭದಲ್ಲಿ ಮಾತ್ರ ವಿವೇಚನಾಧಿಕಾರ ಬಳಸಬೇಕು ಎಂದು ಸಿಂಘ್ವಿ ವಾದಿಸಿದರು.
ಎಲ್ಲವೂ ಬಿಜೆಪಿ ಆಡಳಿತದಲ್ಲಿ ನಡೆದಿದೆಕೆಸರೆ ಗ್ರಾಮದ ಜಮೀನು 1992ರಲ್ಲಿ ಮುಡಾಗೆ ಭೂಮಿ ಸ್ವಾಧೀನವಾಗಿತ್ತು. ದೇವರಾಜು ಅವರು ಜಮೀನಿನ ಮಾಲೀಕರಾಗಿದ್ದರು ಎಂದು ಸಿಂಘ್ವಿ ಹೇಳಿದಾಗ, ದೇವರಾಜು ಜಮೀನಿನ ಮಾಲಕರು ಹೇಗಾದರು ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಆಗ 10.04.1993ರಲ್ಲಿ ದೇವರಾಜುವಿನ ಹೆಸರಲ್ಲಿ ಪೌತಿ ಖಾತೆಯಾಗಿದೆ. ಅನಂತರ ಜಮೀನು ಕಾನೂನಿನ ಪ್ರಕ್ರಿಯೆಯಂತೆ ಡಿನೋಟಿಫೈ ಆಗಿದೆ. 23 ವರ್ಷಗಳ ಹಗರಣದಂತೆ ದೊಡ್ಡದಾಗಿ ಬಿಂಬಿಸಲಾಗಿದೆ. 2004ರಲ್ಲಿ ಭಾಮೈದನಿಗೆ ಕ್ರಯ ಪತ್ರವಾಗಿದೆ. 2005ರಲ್ಲಿ ಭೂಪರಿವರ್ತನೆ ಮಾಡಲಾಗಿದೆ. 2010ರಲ್ಲಿ ಸಿದ್ದರಾಮಯ್ಯ ಪತ್ನಿಗೆ ದಾನಪತ್ರವಾಗಿದೆ. ಅಕ್ರಮವಾಗಿದ್ದರೆ 5 ವರ್ಷಗಳ ಅನಂತರ ಯಾರಾದರೂ ದಾನಪತ್ರ ಮಾಡಿಸಿಕೊಳ್ಳುತ್ತಾರಾ? ಎಂದರು. ಇಡೀ ಪ್ರಕರಣ ಬಿಜೆಪಿಯ ಆಡಳಿತದಲ್ಲಿ ನಡೆದಿದೆ ಎಂದು ಸಿಂಘ್ವಿ ವಾದಿಸಿದರು. ಅಬ್ರಹಾಂ ಮೇಲಿನ ಪ್ರೀತಿ
ಸ್ನೇಹಮಯಿ ಮೇಲೆ ಯಾಕಿಲ್ಲ?
ದೂರುದಾರ ಟಿ.ಜೆ. ಅಬ್ರಹಾಂ ಅವರನ್ನು 90 ನಿಮಿಷ ಕೂರಿಸಿಕೊಂಡು ಮಾತನಾಡಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ. ಹಾಗಾದರೆ, ಸ್ನೇಹಮಯಿ ಕೃಷ್ಣ ಅವರ ಪಾಡೇನು ಎನ್ನುವುದೇ ನಮ್ಮ ಪ್ರಶ್ನೆ. ಅಬ್ರಹಾಂ ಮೇಲಿನ ಪ್ರೀತಿ ಸ್ನೇಹಮಯಿ ಮೇಲೆ ಯಾಕಿಲ್ಲ? ಸಿಎಂ ವಿರುದ್ಧದ ಆದೇಶದಲ್ಲಿ ರಾಜ್ಯಪಾಲರು 25 ಸೆಕ್ಷನ್‌ಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಅದು ಯಾವುದು ಅಂತ ಒಂದೂ ಹೇಳಿಲ್ಲ. ಕೆಸರೆ ಗ್ರಾಮ ಕಣ್ಮರೆ ಆಗಿಲ್ಲ. 2011ರಲ್ಲಿ ಜನಗಣತಿಯಲ್ಲಿ ಗ್ರಾಮದ ಜನಸಂಖ್ಯೆ ಮತ್ತಿತರ ವಿವರಗಳು ದಾಖಲಾಗಿವೆ ಎಂದು ಹಿರಿಯ ವಕೀಲ ಪ್ರೊ| ರವಿವರ್ಮ ಕುಮಾರ್ ಹೇಳಿದರು. ನಿವೇಶನ ಜುಜುಬಿ ಎಂದು ರವಿವರ್ಮ ಕುಮಾರ್ ಹೇಳಿದಾಗ, ಹಾಗೆಲ್ಲ ಹೇಳಬೇಡಿ, ಇಲ್ಲಿರುವುದು 55 ಕೋಟಿ ರೂ. ಹಣದ ಪ್ರಶ್ನೆ ಎಂದು ನ್ಯಾಯಪೀಠ ಹೇಳಿತು.