Advertisement

ದೇಸಿ ಕ್ರೀಡೆಯತ್ತ ಆಕರ್ಷಣೆಗೆಸಚಿವ ಖೂಬಾ ಪ್ರಶಂಸೆ; ಸಚಿವ ಖೂಬಾ

06:05 PM Aug 15, 2022 | Team Udayavani |

ಬೀದರ: ಬಿದರಿ ಸಂಸ್ಥೆ ಸಂಗೀತದೊಂದಿಗೆ ಯುವ ಜನರನ್ನು ದೇಶಿ ಕ್ರೀಡೆಯತ್ತ ಆಸಕ್ತಿ ಮೂಡಿಸುವ ಕೆಲಸಕ್ಕೆ ಮುಂದಾಗಿರುವುದು ಪ್ರಶಂಸನೀಯ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

Advertisement

ನಗರದ ರಂಗ ಮಂದಿರದಲ್ಲಿ ರವಿವಾರ ಬಿದರಿ ಸಂಗೀತ ಸಂಭ್ರಮ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಒಂದು ಕಡೆ ಸಂಗೀತ ಇನ್ನೊಂದೆಡೆ ಯುವ ಜನತೆಗೆ ಕ್ರೀಡೆಗಳಲ್ಲಿ ಆಸಕ್ತಿ ವಹಿಸುವ ಕೆಲಸ ಸಂಸ್ಥೆ ಮಾಡುತ್ತಿದೆ. ವೇದಿಕೆ ಕೆಲಸದಿಂದ ಜಿಲ್ಲೆಯ ಪ್ರತಿಭೆ ಪ್ರದರ್ಶಿಸಲು ನೆರವಾಗುತ್ತಿದೆ ಎಂದರು.

ರಾಜ್ಯ ಬಿದರಿ ದತ್ತಿ ಪ್ರಶಸ್ತಿ ಪುರಸ್ಕೃತ ಡಾ| ಪಂಡಿತ ನರಸಿಂಹಲು ವಡವಾಟಿ ಮಾತನಾಡಿ, ನಮ್ಮ ಜೀವನ ಹಸನಾಗಿರಬೇಕಾದರೆ ನಿಷ್ಠೆ, ಭಕ್ತಿ ಗುರು ಹಿರಿಯರ ಬಗ್ಗೆ ಗೌರವ ಇದ್ದಾಗ ಮಾತ್ರ ಸಾಧ್ಯವಿದೆ. ಗುರು ಹಿರಿಯರನ್ನು ಗೌರವಿಸಿದರೆ ಎಲ್ಲರಿಗೂ ಗೌರವ ಎಂಬುದು ತನ್ನಿಂದ ತಾನೆ ಸಿಗುತ್ತದೆ. ಯಾವ ಶಿಷ್ಯ ನಿಷ್ಠೆಯಿಂದ ಇರುತ್ತಾರೆ ಅವರ ಮೇಲೆ ಗುರುಗಳ ಕೃಪೆ ಇರುತ್ತದೆ. ಆದ್ದರಿಂದ ತನಗೆ ವಿದ್ಯೆ ಕಲಿಸಿದವರನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಜಿಲ್ಲೆ ಯಾವುದೇ ಕ್ಷೇತ್ರದಲ್ಲಿ ಹಿಂದೆ ಇಲ್ಲ. ಜಿಲ್ಲೆಯಲ್ಲಿ ಸತತ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಜಿಲ್ಲೆಯಲ್ಲಿ ಯಾವುದೇ  ಕೆಲಸ ಮಾಡುವವರಿಗೆ ಪ್ರೇರಣೆ ಅಥವಾ ಅವರನ್ನು ಮುಂದೆ ದಬ್ಬುವ ಕೆಲಸ ಮಾಡದ ಕಾರಣ ಅನೇಕ ಪ್ರತಿಭೆಗಳು ಜಿಲ್ಲೆಗೆ ಮಾತ್ರ ಸೀಮಿತಗೊಂಡಿದ್ದಾರೆ ಎಂದರು.

ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಶಾಹೀನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್‌ ಖದೀರ್‌, ಉದ್ಯಮಿ ಪ್ರಕಾಶ ಟೊಣ್ಣೆ, ಬೀದರಿ ವೇದಿಕೆ ಅಧ್ಯಕ್ಷೆ ರೇಖಾ ಸೌದಿ ವೇದಿಕೆಯಲ್ಲಿದ್ದರು. ಅಪ್ಪಾರಾವ ಸೌದಿ ಸ್ವಾಗತಿಸಿದರು. ಇದಕ್ಕೂ ಮುನ್ನ ಉಷಾ ಪ್ರಭಾಕರ ಹಾಗೂ ರಾಣಿ ಸತ್ಯಮೂರ್ತಿ ಅವರ ತಂಡದಿಂದ ದೇಶಭಕ್ತಿ ಕುರಿತು ನೃತ್ಯ ಜರುಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next