Advertisement

ಬಂಟ್ವಾಳ : ಮಳೆಯಿಂದ ಹಲವೆಡೆ ಹಾನಿ, ಪೆರಾಜೆ ಗ್ರಾಮದಲ್ಲಿ 2 ಮನೆಗಳಿಗೆ ನುಗ್ಗಿದ ನೀರು

03:51 PM Jun 14, 2021 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮುಂಗಾರಿನ ಅಬ್ಬರ ಜೋರಾಗಿಯೇ ಕಂಡು ಬಂದಿದ್ದು, ಸೋಮವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದೆ.  ಮಳೆಯ ತೀವ್ರತೆಯ ಪರಿಣಾಮ ಹಲವು ಮನೆಗಳಿಗೆ ಹಾನಿ ಸಂಭವಿಸಿದ್ದು, ಪೆರಾಜೆ ಗ್ರಾಮ ನಿವಾಸಿ ನೆಬಿಸ್ಸಾ ಹಾಗೂ ಅವ್ವಮ್ಮ ಅವರ ಮನೆಗೆ ಗುಡ್ಡದ ನೀರು ನುಗ್ಗಿ ಕೃತಕ ನೆರೆಯ ಸ್ಥಿತಿ ಉಂಟಾಗಿತ್ತು‌.

Advertisement

ಪೆರಾಜೆ ಗ್ರಾಮದ ಅಬ್ದುಲ್ ಹಕೀಂ ಅವರ ಕಾಂಪೌಂಡ್ ಗೆ ಮಳೆಯಿಂದ ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದಲ್ಲಿ ಬರೆ ಕುಸಿದು ಬಚ್ಚಲು ಮನೆಗೆ ಹಾನಿಯಾಗಿದೆ. ಅನಂತಾಡಿ‌ ಗ್ರಾಮದ ಪೊಯ್ಯೆ ಮನೆ ಮಹಾಬಲ ಮಡಿವಾಳ ಅವರ ತೋಟದಲ್ಲಿ ಅಡಿಕೆ ಮರಗಳು ಗಾಳಿಯ ರಭಸಕ್ಕೆ ಧರೆಗುರುಳಿವೆ.

ತೆಂಕಕಜೆಕಾರು ಗ್ರಾಮದ ಕುರುವರಗೋಳಿಯಲ್ಲಿ ವೀರಪ್ಪ ಪೂಜಾರಿ ಅವರ ಕಚ್ಚಾ ಮನೆಯ ಹಿಂಭಾಗದ ತಡೆಗೋಡೆ ಕುಸಿದು ಮನೆಗೆ ಸಂಪೂರ್ಣ ಹಾನಿಯಾಗಿದೆ. ಸಜೀಪಮುನ್ನೂರು ಅಬ್ದುಲ್ ಹಮೀದ್ ಅವರ ಮನೆಗೂ ಮಳೆಯಿಂದ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next