Advertisement

ದಾರಿದೀಪದ ಸುವ್ಯವಸ್ಥೆಗೆ ನಗರಸಭೆಯಿಂದ ಹೆಚ್ಚು ಒತ್ತು

04:42 PM Dec 23, 2017 | Team Udayavani |

ನಗರ: ನಗರಸಭಾ ವ್ಯಾಪ್ತಿಯ ದಾರಿದೀಪಗಳ ಸುವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದೆ. ದಾರಿದೀಪದ ನಿರ್ವಹಣೆ ಜವಾಬ್ದಾರಿಯನ್ನು ಹೊರಗುತ್ತಿಗೆ ಮೂಲಕ ಖಾಸಗಿಯವರಿಗೆ ನೀಡಲಾಗಿದೆ. ಗ್ರಾಮೀಣ ಪ್ರದೇಶ ವಾರ್ಡ್‌ಗಳಲ್ಲಿ ಹೊಸತಾಗಿ ದಾರಿದೀಪ ಅಳವಡಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು.

Advertisement

ನಗರಸಭಾ ವ್ಯಾಪ್ತಿಯ ದರ್ಬೆ ಬೆದ್ರಾಳ ಮುಖ್ಯರಸ್ತೆಯಲ್ಲಿ ಹಾಗೂ ಸಂಜಯನಗರ, ಮರೀಲು ಜಂಕ್ಷನ್‌ನಲ್ಲಿ ಅಳವಡಿಸಲಾಗಿರುವ ಹೈಮಾಸ್ಟ್‌ ದೀಪ ವ್ಯವಸ್ಥೆಯನ್ನು ಅವರು ಉದ್ಘಾಟಿಸಿದರು. ಪ್ರಾಸ್ತಾವಿಸಿದ ನಗರಸಭಾ ಹಿರಿಯ ಸದಸ್ಯ ಎಚ್‌. ಮಹಮ್ಮದ್‌ ಆಲಿ, ನಗರಸಭಾ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ ನಲ್ಲಿ ಹೈ ಮಾಸ್ಟ್‌ ದೀಪ ಅಳವಡಿಸಲು ಅನುದಾನ ಮಂಜೂರು ಮಾಡಲಾಗಿದೆ. ದರ್ಬೆ – ಬೆದ್ರಾಳ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು 3.50 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಈ ಚತುಷ್ಪಥ ರಸ್ತೆಗೆ ರಸ್ತೆ ವಿಭಾಜಕ ನಿರ್ಮಾಣವಾಗಲಿದ್ದು, ಡಿವೈಡರ್‌ಗಳ ಮಧ್ಯೆ ಹೈ- ಮಾಸ್ಟ್‌ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರಸಭಾ ಸದಸ್ಯರಾದ ಉಷಾ ಧನಂಜಯ ಆಚಾರ್ಯ, ಬಾಲಚಂದ್ರ ಕೆ., ಜೆಸಿಂತ ಹಿಲರಿ ಮಸ್ಕರೇನ್ಹಸ್‌, ಶಕ್ತಿಸಿನ್ಹ, ಕೂರ್ನಡ್ಕ ಮಸೀದಿ ಅಧ್ಯಕ್ಷ ಕೆ. ಅಬೂಬಕ್ಕರ್‌, ಕೆಮ್ಮಿಂಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಪೂಜಾರಿ, ಯುವ ಕಾಂಗ್ರೆಸ್‌ನ ಮಾಜಿ ಕಾರ್ಯದರ್ಶಿ ಮಹಮ್ಮದ್‌ ಹಾರೀಸ್‌, ನಗರ ಕಾಂಗ್ರೆಸ್‌ನ ಕಮರುದ್ದೀನ್‌ ಸಂಜಯ ನಗರ, ಸ್ಥಳೀಯರು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಮುಖೇಶ್‌ ಕೆಮ್ಮಿಂಜೆ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next