Advertisement
ನಗರಸಭಾ ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಮಾತನಾಡಿ, ಪುತ್ತೂರು ನಗರದ ಸಮಗ್ರ ಅಭಿವೃದ್ಧಿಗಾಗಿ ನಗರೋ ತ್ಥಾನ ಯೋಜನೆಯಡಿಯಲ್ಲಿ ಹಲವಾರು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗು ವುದು. ಎಂ.ಟಿ. ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ಗುಂಡಿಗಳು ಬೀಳುತ್ತಿರುವುದರಿಂದ ಈ ರಸ್ತೆಯಲ್ಲಿ ಚರಂಡಿಗಳು ಇಲ್ಲದಿರುವುದರಿಂದ ರಸ್ತೆಯಲ್ಲಿ ನೀರು ಹರಿದು ಹೋಗಿ ತೊಂದರೆಯಾಗುತ್ತಿದೆ. ರಸ್ತೆ ಹಾಳಾಗು ತ್ತಿರುವುದನ್ನು ಮನಗಂಡು ನಗರಸಭಾ ಆಡಳಿತ ಎಂ.ಟಿ. ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್‌ಗೊಳಿಸಲು ನಗರ ಸಭಾ ಆಡಳಿತ ನಿರ್ಧರಿಸಿದೆ ಎಂದರು. ಈ ಸಂದರ್ಭ ನಗರೋತ್ಥಾನ ಯೋಜನೆಯ ಯೋಜನಾ ಸಮಾಲೋಚನ ಸಂಸ್ಥೆಯ ಎಂಜಿನಿಯರ್ ಭರತ್, ನಗರಸಭಾ ಸಹಾಯಕ ಎಂಜಿನಿಯರ್ ಅರುಣ್, ಮುಗರೋಡಿ ಕನ್‌ಸ್ಟ್ರಕ್ಷನ್ ನ ದಾಮೋದರ್ ಮತ್ತು ನವೀನ್ ಉಪಸ್ಥಿತರಿದ್ದರು.
ಮುಖ್ಯರಸ್ತೆಯಲ್ಲಿ ಕೂಡ ಆಯ್ದ ಭಾಗಗಳಲ್ಲಿ ಚರಂಡಿ ನಿರ್ಮಿಸಿ ಸುಸಜ್ಜಿತ ಫುಟ್‌ಪಾತನ್ನು ನಿರ್ಮಿಸಲಾಗುವುದು. ಬೊಳುವಾರು ಭಾಗದಲ್ಲಿ ರಸ್ತೆ ಅಗಲೀಕರಿಸಿ ರಸ್ತೆ ಮಧ್ಯಭಾಗದಲ್ಲಿ ರಸ್ತೆ ವಿಭಾಜಕವನ್ನು ರಚಿಸಿ ಅಭಿವೃದ್ಧಿಪಡಿಸಲಾಗುವುದು. ಒಟ್ಟು ಮುಖ್ಯರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಮಂಜೂರು ಮಾಡಲಾಗಿರುತ್ತದೆ ಎಂದು ನಗರಸಭಾ ಸದಸ್ಯ ಎಚ್. ಮಹಮ್ಮದ್ ಆಲಿ ಹೇಳಿದರು.