Advertisement
ಗೇಮ್‌ಪ್ಲೇ ಮತ್ತು ಆರ್ಕಾ ಸ್ಪೋರ್ಟ್ಸ್, ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ (ಎಂಎಸ್‌ಡಿಸಿಎ) ಸಹಯೋಗದಲ್ಲಿ ಇದು ಕಾರ್ಯ ನಿರ್ವಹಿಸಲಿದ್ದು, ನ. 7ರಂದು ಉದ್ಘಾಟನೆಗೊಳ್ಳಲಿದೆ.
ಈ ಕುರಿತು ಮಾತನಾಡಿರುವ ಧೋನಿ, ಬೆಂಗಳೂರಿನಲ್ಲಿ ಅಕಾಡೆಮಿ ಪ್ರಾರಂಭಿಸಲು ತುಂಬ ಉತ್ಸುಕನಾಗಿದ್ದೇನೆ. ನಿಮ್ಮ ಕೌಶಲಗಳನ್ನು ಚುರುಕುಗೊಳಿಸಲು ಅತ್ಯುತ್ತಮ ತಂತ್ರಜ್ಞಾನದ ಸಹಾಯದಿಂದ 360 ಡಿಗ್ರಿ ತರಬೇತಿ ವಿಧಾನವನ್ನು ಒದಗಿಸುವುದು ಅಕಾಡೆಮಿಯ ಗುರಿ. ನಾವು ಅರ್ಹ ತರಬೇತುದಾರರು ಮತ್ತು ಫಿಟ್ನೆಸ್ ತಜ್ಞರನ್ನು ಕರೆತರುತ್ತೇವೆ. ನನ್ನ ಅಕಾಡೆಮಿಯ ಭಾಗವಾಗಲು ಸಿದ್ಧರಾಗಿ. ಇದು ಕೇವಲ ಕ್ರಿಕೆಟರ್ ಆಗಲಷ್ಟೇ ಅಲ್ಲ. ಮಾನಸಿಕ ಮತ್ತು ದೈಹಿಕ ಕೌಶಲಗಳನ್ನು ಕಲಿಯಲು ನಮ್ಮೊಂದಿಗೆ ಸೇರಿಕೊಳ್ಳಬಹುದು’ ಎಂದಿದ್ದಾರೆ.
Related Articles
Advertisement
ಫಲಿತಾಂಶಕ್ಕಿಂತ ಪ್ರಕ್ರಿಯೆ ಮುಖ್ಯ”ನನ್ನ ಒಂದೇ ಒಂದು ಸಲಹೆಯೆಂದರೆ, ಫಲಿತಾಂಶಕ್ಕಿಂತ ಪ್ರಕ್ರಿಯೆ ಮುಖ್ಯವಾದುದು. ಫಲಿತಾಂಶ ನಮ್ಮ ಪ್ರಕ್ರಿಯೆಯ ಫಲ ಅಷ್ಟೇ. ಆದರೆ ಇಂದಿನ ಜಗತ್ತಿನಲ್ಲಿ ನಾವು ಪ್ರಕ್ರಿಯೆಗಿಂತ ಹೆಚ್ಚಾಗಿ ಫಲಿತಾಂಶದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ. ಆದ್ದರಿಂದ ಪ್ರಕ್ರಿಯೆಯತ್ತ ಗಮನ ಕೊಡಿ. ಎಲ್ಲ ಸಣ್ಣ ವಿಷಯಗಳನ್ನು ನೋಡಿಕೊಳ್ಳಿ. ಅಂತಿಮವಾಗಿ ನೀವು ಬಯಸಿದ ಫಲಿತಾಂಶವನ್ನು ಖಂಡಿತ ಪಡೆಯುತ್ತೀರಿ’ ಎಂಬುದಾಗಿ ಧೋನಿ ಹೇಳಿದರು.
“ನಾವು ಇನ್ನೂ ಹೆಚ್ಚಿನದನ್ನು ಪಡೆಯಬೇಕಾಗಿತ್ತು ಎಂದು ದೂರುತ್ತಲೇ ಇರುತ್ತೇವೆ. ಆದರೆ ವಾಸ್ತವವಾಗಿ ನಾವು ಏನು ಮಾಡಿದ್ದೇವೆ ಎಂಬುದರ ಫಲವೇ ನಮಗೆ ಸಿಗುವ ಫಲಿತಾಂಶವಾಗಿರುತ್ತದೆ. ಆದ್ದರಿಂದ ನಾವು ಚೆನ್ನಾಗಿ ತಯಾರಾದರೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ನಾವು ನಮಗೇ ಪ್ರಾಮಾಣಿಕರಾಗಿದ್ದರೆ ನಾವು ಬಯಸಿದ ಫಲಿತಾಂಶವನ್ನು ಪಡೆಯುತ್ತೇವೆ. ಒಂದು ವೇಳೆ ಅಲ್ಲಿ ಯಾವುದೇ ನ್ಯೂನ್ಯತೆಗಳಿದ್ದರೆ ಅದು ನಮ್ಮ ಮುಂದಿನ ಕಲಿಕೆಯಾಗಿರುತ್ತದೆ’ ಎಂಬುದು ಧೋನಿಯ ಅನುಭವದ ಮಾತುಗಳು.