ದುಬಾೖ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೂತನ ಇನ್ನಿಂಗ್ಸ್ ಒಂದನ್ನು ಆರಂಭಿಸಿದ್ದಾರೆ. ದುಬಾೖಯಲ್ಲಿ ಕ್ರಿಕೆಟ್ ಅಕಾಡೆಮಿಯೊಂದನ್ನು ಆರಂಭಿಸುವ ಮೂಲಕ ಯುಎಇಯಲ್ಲಿ ಕ್ರಿಕೆಟ್ ಬೆಳವಣಿಗೆಗೆ ಮುಂದಾಗಿದ್ದಾರೆ.
ದುಬಾೖ ಮೂಲದ “ಪೆಸಿಫಿಕ್ ಸೋರ್ಟ್ಸ್ ಕ್ಲಬ್’ ಮತ್ತು “ಅರ್ಕಾ ನ್ಪೋರ್ಟ್ಸ್ ಕ್ಲಬ್’ ಸಹಯೋಗದೊಂದಿಗೆ ಶನಿವಾರ ರಾತ್ರಿ ಉದ್ಘಾಟನೆಗೊಂಡ ಈ ಅಕಾಡೆಮಿ ಹೆಸರು “ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ’ (ಎಂ.ಎಸ್.ಡಿ.ಸಿ.ಎ.). ಕ್ರಿಕೆಟ್ ಅಭ್ಯಾಸಕ್ಕೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಆರಂಭದಲ್ಲೇ ಹೊಂದಿರುವುದು ಈ ಅಕಾಡೆಮಿಯ ವೈಶಿಷ್ಟé. 4 ಟಫ್ì, 3 ಸಿಮೆಂಟ್ ಪಿಚ್, 3 ಮ್ಯಾಟ್ ಪಿಚ್, ಬೌಲಿಂಗ್ ಯಂತ್ರ, ಸುರಕ್ಷತಾ ನೆಟ್ಸ್, ಹೊನಲು ಬೆಳಕು, ಕ್ರಿಕೆಟ್ ಪರಿಕರಗಳ ಅಂಗಡಿ, ವೀಡಿಯೋ ವಿಶ್ಲೇಷಣಾ ವ್ಯವಸ್ಥೆಗಳನ್ನೆಲ್ಲ ಇದು ಹೊಂದಿದೆ.
“ನನ್ನನ್ನು ಈ ಹಂತಕ್ಕೆ ಬೆಳೆಸಿದ ಕ್ರಿಕೆಟಿಗೆ ಪ್ರತಿಯಾಗಿ ಏನಾದರೂ ನೀಡಬೇಕು ಎಂಬುದು ನನ್ನ ಬಹು ದೊಡ್ಡ ಕನಸಾಗಿತ್ತು. ಇದು ಮೊದಲ ಹೆಜ್ಜೆ…’ ಎಂದು ಧೋನಿ ಹೇಳಿದರು.
ಉದ್ಘಾಟನಾ ಸಮಾರಂಭದ ಬಳಿಕ ಧೋನಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ, ಧೋನಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಯುವ ಆಟಗಾರರಿಗೆ ಹಾದಿ ಕಲ್ಪಿಸುವುದು ಒಳ್ಳೆಯದು ಎಂಬ ಮಾಜಿಗಳನೇಕರ ಹೇಳಿಕೆಗಳು ಪ್ರಸ್ತಾವಗೊಂಡವು. ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್ ಮೊದಲಾದವರೆಲ್ಲ ಧೋನಿ ನಿವೃತ್ತಿಯಾಗಲಿ ಎಂಬ ರೀತಿಯಲ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಧೋನಿ, “ಎಲ್ಲರಿಗೂ ಅವರದೇ ಆದ ದೃಷ್ಟಿಕೋನಗಳಿರುತ್ತವೆ. ಆ ಪ್ರಕಾರ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇದನ್ನು ನಾವು ಗೌರವಿಸಬೇಕು’ ಎಂದು ಹೇಳಿದರು. ಧೋನಿ ಅವರ ಈ ಹೇಳಿಕೆ ದುಬಾೖನಿಂದ ಹೊರಡುವ “ಖಲೀಜ್ ಟೈಮ್ಸ್’ ಪತ್ರಿಕೆಯಲ್ಲೂ ಪ್ರಕಟಗೊಂಡಿದೆ.