Advertisement

ಧೋನಿ ಕಾರಿಗೆ ಅಡ್ಡ ಬಂದ ಹುಡುಗಿ!

11:38 AM Mar 13, 2017 | |

ರಾಂಚಿ: ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಆಡುವುದಕ್ಕಾಗಿ ಪುಣೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹೇಂದ್ರ ಸಿಂಗ್‌ ಧೋನಿ ಸ್ವತಃ ಎಸ್‌ಯುವಿ ಕಾರು ಚಲಾಯಿಸಿ ಮನೆಯತ್ತ ಹೊರಟ್ಟಿದ್ದ ವೇಳೆ ಯುವತಿಯೊಬ್ಬಳು ಕಾರಿಗೆ ಅಡ್ಡ ಬಂದು ಸ್ವಲ್ಪದರಲ್ಲೇ ಬಚಾವ್‌ ಆದ ಘಟನೆ ನಡೆದಿದೆ. ಧೋನಿ ಕೂಡಲೇ ಬ್ರೇಕ್‌ ಹಾಕಿ ಸಮಯಪ್ರಜ್ಞೆ ತೋರಿದ್ದರಿಂದ ಸಂಭಾವ್ಯ ದುರಂತವೊಂದು ತಪ್ಪಿದೆ. 

Advertisement

ಏನಿದು ಘಟನೆ?
ಧೋನಿ ವಿಮಾನ ನಿಲ್ದಾಣ ದಿಂದ ಹೊರಕ್ಕೆ ಬರುತ್ತಿದ್ದಂತೆ ರಾಂಚಿಯ ಅಭಿಮಾನಿಗಳು ಸುತ್ತುವರಿದರು. ಆಟೋಗ್ರಾಫ್, ಸೆಲ್ಫಿಗಾಗಿ ಮುಗಿಬಿದ್ದರು. ಲಗು ಬಗೆಯಿಂದ ನಡೆದ ಧೋನಿ ಅಲ್ಲೇ ಇದ್ದ ಎಸ್‌ಯುವಿ ಕಾರನ್ನು ಏರಿದ್ದಾರೆ. ಈ ವೇಳೆ ಧೋನಿ ಕಾರಿನ  ಪಕ್ಕವೇ ಅಭಿಮಾನಿ ಯುವತಿಯೊಬ್ಬಳು ನಿಂತಿದ್ದಳು. ಧೋನಿ ಜತೆಗೆ ಮಾತನಾಡಲು ಮುಂದುವರಿದಿದ್ದಾಳೆ. ಕೂಡಲೇ ಭದ್ರತಾ ಸಿಬಂದಿಗಳು ಯುವತಿ ಯನ್ನು ತಡೆದಿದ್ದಾರೆ. 
ಈ ವೇಳೆ ಯುವತಿ ಕೈಯಲ್ಲಿದ್ದ ಬ್ಯಾಗ್‌ ಕೆಳಕ್ಕೆ ಬಿದ್ದಿದೆ. ಆಗ ಭದ್ರತಾ ಸಿಬಂದಿಗಳ ಕೈಯಿಂದ ಬಿಡಿಸಿಕೊಂಡು ಹುಡುಗಿ ಕಾರಿಗೆ ಅಡ್ಡ ಬಂದಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ಧೋನಿ ಕಾರು ಚಲಾಯಿಸಲು ಆರಂಭಿಸಿದ್ದರು. ಅಷ್ಟರಲ್ಲಿ ಈ ಹುಡುಗಿ ಅಡ್ಡಬಂದುದನ್ನು ಕಂಡು ಬ್ರೇಕ್‌ ಒತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next