Advertisement

ಐಪಿಎಲ್ 2022: ಎಬಿ ಡಿವಿಲಿಯರ್ಸ್ ಸಿಕ್ಸರ್ ದಾಖಲೆ ಸರಿಗಟ್ಟಿದ ಮಹೇಂದ್ರ ಸಿಂಗ್ ಧೋನಿ

10:02 AM Apr 01, 2022 | Team Udayavani |

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಹೈವೋಲ್ಟೇಜ್ ಮುಖಾಮುಖಿಯಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ತಂಡ ಜಯ ಸಾಧಿಸಿದೆ. ಭರ್ಜರಿ ರನ್ ಮಳೆಗೆ ಸಾಕ್ಷಿಯಾದ ಪಂದ್ಯದಲ್ಲಿ ಚೆನ್ನೈ ತಂಡ 210 ರನ್ ಗಳಿಸಿದ್ದರೂ, ಲಕ್ನೋ ಅದನ್ನು ಚೇಸ್ ಮಾಡಿ ಜಯ ಗಳಿಸಿತು.

Advertisement

ಈ ಪಂದ್ಯದಲ್ಲಿ ಸಿಎಸ್ ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ದಾಖಲೆಯೊಂದನ್ನು ಸರಿಗಟ್ಟಿದರು. ಬ್ಯಾಟಿಂಗ್ ಗೆ ಆಗಮಿಸಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಧೋನಿ ಕೇವಲ ಆರು ಎಸೆತದಲ್ಲಿ 16 ರನ್ ಬಾರಿಸಿದರು.

ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಮಾಜಿ ಆರ್ ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಐಪಿಎಲ್ ಇನ್ನಿಂಗ್ಸ್ 19ನೇ ಓವರ್ ನಲ್ಲಿ ಎಬಿ ಡಿವಿಲಿಯರ್ಸ್ 36 ಸಿಕ್ಸರ್ ಬಾರಿಸಿದ್ದರು. ಗುರುವಾರದ ಪಂದ್ಯದಲ್ಲಿ ಆವೇಶ್ ಖಾನ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಮಹೇಂದ್ರ ಸಿಂಗ್ ಧೋನಿ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ:IPL 2022: ಇಂದು ಅಗರ್ವಾಲ್‌-ಅಯ್ಯರ್‌ ಪಡೆಗಳ ಮೇಲಾಟ

ಇದೇ ವೇಳೆ ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್ ನಲ್ಲಿ 7000 ರನ್ ಗಡಿ ದಾಟಿದರು.

Advertisement

19ನೇ ಓವರ್ ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದವರು

36 – ಎಂಎಸ್ ಧೋನಿ,

36 – ಎಬಿ ಡಿವಿಲಿಯರ್ಸ್,

26 – ಆಂಡ್ರೆ ರಸೆಲ್,

24 – ಕೀರಾನ್ ಪೊಲಾರ್ಡ್,

24 – ಹಾರ್ದಿಕ್ ಪಾಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next