Advertisement

Employment ಬೇಡಿಕೆಗೆ ಎಂಆರ್‌ಪಿಎಲ್‌ ಸ್ಪಂದನೆ: 4ನೇ ಹಂತದ ಭೂ ನಿರ್ವಸಿತರ ಪುನರ್‌ವಸತಿ

12:38 AM Jul 15, 2024 | Team Udayavani |

ಕುತ್ತೆತ್ತೂರು: ಎಂಆರ್‌ಪಿಎಲ್‌ 4ನೇ ಹಂತದ ಭೂ ನಿರ್ವಸಿತ ರಾಗುವ ಕುತ್ತೆತ್ತೂರು, ಪೆರ್ಮುದೆ, ಎಕ್ಕಾರು ಗ್ರಾಮದ ನಿವಾಸಿಗಳಿಗೆ ಸಿಗಬೇಕಾದ ಪುನರ್ವಸತಿ ಪುನರ್‌ ನಿರ್ಮಾಣ ಯೋಜನೆಯ ಉದ್ಯೋಗ ಮತ್ತಿತರ ಬೇಡಿಕೆಗಳ ಈಡೇರಿಸುವ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಎಂ.ಪಿ. ಮುಲ್ಲೈ ಮುಗಿಲನ್‌ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರಗಿತು.

Advertisement

ಭೂ ನಿರ್ವಸಿತರ ಹಿತ ರಕ್ಷಣ ಸಮಿತಿಯು ನಿರ್ವಸಿತ ಕುಟುಂಬದ 436 ಯುವಕರಿಗೆ ಉದ್ಯೋಗ ನೀಡು ವುದು, ಭೂಮಿ ಕಳೆದುಕೊಳ್ಳುವವರಿಗೆ ಅವರು ಈಗ ನೆಲೆಸಿರುವ ಪ್ರದೇಶದ ಸಮೀಪದಲ್ಲೇ ಪುನರ್ವಸತಿ ಕಲ್ಪಿಸುವುದು ಸಹಿತ ವಿವಿಧ ಬೇಡಿಕೆಯನ್ನು ಮುಂದಿ ಟ್ಟಿದ್ದು, ಇದರ ಬಗ್ಗೆ ಚರ್ಚೆ ನಡೆಯಿತು.

ನಮ್ಮ ಕೆಲವು ಬೇಡಿಕೆ ಈಡೇರಿದ್ದು, ಉದ್ಯೋಗ, ಪುನರ್ವಸತಿ ನೀಡುವಲ್ಲಿ ವಿಳಂಬವಾಗಿದೆ.ಅದನ್ನು ಶೀಘ್ರ ಈಡೇರಿಸುವಂತೆ ಹಿತರಕ್ಷಣ ಸಮಿತಿ ಗೌರವಾಧ್ಯಕ್ಷ ಡೋನಿ ಸುವಾರಿಸ್‌ ಆಗ್ರಹಿಸಿದರು.

ಇವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಿರ್ವಸಿತರಿಗೆ ಸಿಗಬೇಕಾದ ಸವಲತ್ತು ಒದಗಿಸಲು ಕಾಲಮಿತಿ ಹಾಕಿಕೊಳ್ಳಿ ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಆರ್‌ಪಿಎಲ್‌ ಗ್ರೂಪ್‌ ಜನರಲ್‌ ಮ್ಯಾನೇಜರ್‌ ಕೃಷ್ಣ ಹೆಗ್ಡೆ ಅವರು, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Advertisement

ಪುನರ್ವಸತಿ, ಉದ್ಯೋಗ ಸಹಿತ ಇತರ ಸವಲತ್ತು ನೀಡುವ ಬಗ್ಗೆ ಸ್ಪಷ್ಟ ಭರವಸೆಯನ್ನು ಎಂಆರ್‌ಪಿಎಲ್‌ ಅಧಿಕಾರಿಗಳು ಜಿಲ್ಲಾಧಿಕಾರಿ ಸಮ್ಮುಖ ವೇ ನೀಡಬೇಕು ಎಂದು ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಮನವಿ ಮಾಡಿದರು.

ಸಭೆಯಲ್ಲಿದ್ದ ಸಂಸದ ಬ್ರಿಜೇಶ್‌ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಎಂಆರ್‌ಪಿಎಲ್‌ ವಿಸ್ತರಣೆಗಾಗಿ ಸ್ಥಳೀಯರು ಭೂಮಿ ತ್ಯಾಗ ಮಾಡುತ್ತಿದ್ದು, ಅವರಿಗೆ ದೊರಕಬೇಕಾದ ಸೌಲಭ್ಯವನ್ನು ನೀಡಲು ಕಂಪೆನಿ ವಿಳಂಬ ಮಾಡಬಾರದು ಎಂದರು.

ವಿಶೇಷ ಭೂಸ್ವಾಧೀನ ಅಧಿಕಾರಿ ರಾಜು ಕೆ., ಎಂಆರ್‌ಪಿಎಲ್‌ ಅಧಿಕಾರಿಗಳಾದ ಮನೋಜ್‌ ಕುಮಾರ್‌, ಕಣ್ಣನ್‌ ಡಿ., ರೋಷನ್‌ ಕ್ಯಾಸ್ತಲಿನೋ, ಪೆರ್ಮುದೆ ಗ್ರಾ. ಪಂ. ಉಪಾಧ್ಯಕ್ಷ ಸಂದೇಶ್‌ ಪೂಜಾರಿ, ಕೇಶವ ಶೆಟ್ಟಿ, ಕೃಷ್ಣಮೂರ್ತಿ, ರೊನಾಲ್ಡ್‌ ಫೆರ್ನಾಂಡಿಸ್‌, ಜಿ.ಕೆ. ಪೂವಪ್ಪ, ಮಾರ್ಕೋ ಡಿ’ ಸೋಜಾ, ಲಲಿತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next