Advertisement

ಎಂಆರ್‌ಪಿಎಲ್‌ 4ನೇ ಹಂತ ವಿಸ್ತರಣೆ: ಪೆಟ್ರೋ ಕೆಮಿಕಲ್ಸ್‌ ಉತ್ಪಾದನೆಗೆ ಮೊದಲ ಆದ್ಯತೆ

01:06 AM Jan 14, 2023 | Team Udayavani |

ಮಂಗಳೂರು: ಭಾರತವು ಪ್ರಸಕ್ತ ಬಹುತೇಕ ಪೆಟ್ರೋ ಕೆಮಿಕಲ್ಸ್‌ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡುತ್ತಿದೆ. ಇದರ ಬದಲು ಬೇಡಿಕೆಗೆ ಅನುಗುಣವಾಗಿ ಭಾರತದಲ್ಲೇ ಪೆಟ್ರೋ ಕೆಮಿಕಲ್ಸ್‌ ಉತ್ಪಾದನೆಗೆ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಎಂಆರ್‌ಪಿಎಲ್‌ ತನ್ನ ನಾಲ್ಕನೇ ಹಂತದ ವಿಸ್ತರಣೆಯ ಸಂದರ್ಭ ಪೆಟ್ರೋಕೆಮಿಕಲ್ಸ್‌ ಉತ್ಪಾದನೆಗೆ ಮೊದಲ ಆದ್ಯತೆ ನೀಡಲು ಉದ್ದೇಶಿಸಿದೆ ಎಂದು ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್‌ ಎಂ. ತಿಳಿಸಿದ್ದಾರೆ.

Advertisement

ಶುಕ್ರವಾರ ಎಂಆರ್‌ಪಿಎಲ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, ಡೀಸೆಲ್‌ ಹಾಗೂ ಪೆಟ್ರೋಲ್‌ ಬಳಕೆ ಕಡಿಮೆ ಮಾಡಿ ಎಥೆನಾಲ್‌, ಎಲೆಕ್ಟ್ರಿಕ್‌ ಸಹಿತ ಪರ್ಯಾಯ ಇಂಧನ ಕ್ಷೇತ್ರಗಳ ಬಗ್ಗೆ ಕೇಂದ್ರ ಸರಕಾರ ಆದ್ಯತೆ ನೀಡಿದೆ. ವಿಶೇಷವಾಗಿ, ಅಗತ್ಯ ವೈದ್ಯಕೀಯ ವಸ್ತುಗಳ ಖರೀದಿಗೆ ಕೊರೊನಾ ಸಂದರ್ಭ ವಿದೇಶದತ್ತ ಚಿತ್ತ ಹರಿಸಬೇಕಾದ ಪರಿಸ್ಥಿತಿಯೂ ಇತ್ತು. ಹೀಗಾಗಿ ಪೆಟ್ರೋ ಕೆಮಿಕಲ್ಸ್‌ ಉತ್ಪನ್ನಗಳನ್ನು ದೇಶೀಯವಾಗಿಯೇ ಉತ್ಪಾದಿಸಿ, ರಫ್ತು ಮಾಡುವ ನಿಟ್ಟಿನಲ್ಲಿ ಅವಕಾಶ ಬಹಳಷ್ಟಿದೆ ಎಂದರು.

ಎಂಆರ್‌ಪಿಎಲ್‌ 4ನೇ ಹಂತದ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಕುತ್ತೆತ್ತೂರು ಹಾಗೂ ಪೆರ್ಮುದೆ ಪ್ರದೇಶದಲ್ಲಿ ಪ್ರಗತಿಯಲ್ಲಿದೆ. ಸುಮಾರು 850 ಎಕರೆ ಪ್ರದೇಶ ಭೂಸ್ವಾಧೀನಕ್ಕೆ ಉದ್ದೇಶಿಸಲಾಗಿದ್ದು, ಕೆಲವು ಕಡೆ ಭೂಮಾಲಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ವಿಚಾರಣ ಹಂತದಲ್ಲಿದೆ ಹಾಗೂ ಸಂತ್ರಸ್ತರಿಗೆ 15 ಕಿ.ಮೀ. ದೂರದ ಮೂಳೂರು ಎಂಬಲ್ಲಿ 120 ಎಕರೆ ಪ್ರದೇಶ ನಿಗದಿ ಮಾಡಲಾಗಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹರಿಹರದಲ್ಲಿ ಎಥೆನಾಲ್‌ ಘಟಕ
ಕರ್ನಾಟಕದ ಹರಿಹರದಲ್ಲಿ 2 ಜಿ ಎಥೆನಾಲ್‌ ಘಟಕ ಸ್ಥಾಪನೆಗೆ ಈಗಾಗಲೇ ನಿರ್ಧರಿಸಲಾಗಿದೆ. ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇದ್ದು, 2025ರಲ್ಲಿ ಘಟಕದಲ್ಲಿ ಎಥೆನಾಲ್‌ ಉತ್ಪಾದನೆ ಆರಂಭವಾಗಲಿದೆ ಎಂದವರು ವಿವರಿಸಿದರು.

ಪತ್ರಿಕಾ ಸಂವಾದದಲ್ಲಿ ಎಂಆರ್‌ಪಿಎಲ್‌ ನಿರ್ದೇಶಕ (ರಿಫೈನರಿ) ಸಂಜಯ ವರ್ಮಾ, ಕಾರ್ಯನಿರ್ವಾಹಕ ನಿರ್ದೇಶಕರಾದ (ಪ್ರಾಜೆಕ್ಟ್) ಬಿ.ಎಚ್‌.ವಿ.ಪ್ರಸಾದ್‌, (ರಿಫೈನರಿ) ಶ್ಯಾಮ್‌ ಕಾಮತ್‌, ಜಿಜಿಎಂ (ಎಚ್‌ ಆರ್‌) ಕೃಷ್ಣ ಹೆಗ್ಡೆ, ಜಿಎಂ (ಕಾರ್ಪೊರೇಟ್‌ ಕಮ್ಯನಿಕೇಶನ್‌) ರುಡಾಲ್ಫ್ ನೊರೋನ್ಹಾ ಉಪಸ್ಥಿತರಿದ್ದರು.

Advertisement

ಮಾಲಿನ್ಯ ನಿಯಂತ್ರಣಕ್ಕೆ
250 ಕೋ.ರೂ ವೆಚ್ಚ
ಪರಿಸರಕ್ಕೆ ಹಾನಿಯಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನ್ಯಾಶನಲ್‌ ಎನ್ವೆ$çರ್ನಮೆಂಟಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ನೀರಿ) ತಜ್ಞರ ಸಮಿತಿಯು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ನೀಡುವ ಸಲಹೆ ಸೂಚನೆಗಳನ್ನೂ ಪಾಲಿಸಲಾಗುತ್ತಿದೆ. ಘಟಕದ 10 ಕಿ.ಮೀ. ವ್ಯಾಪ್ತಿಯಲ್ಲಿ ಎಂಟು ಹಳ್ಳಿಗಳಿಂದ ನೀರಿನ ಸ್ಯಾಂಪಲ್‌ ಪಡೆದು ತಪಾಸಣೆ ನಡೆಸಲಾಗಿದೆ. ಪರಿಸರ ಮಾಲಿನ್ಯದಂತಹ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ವೆಂಕಟೇಶ್‌ ಎಂ. ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next