Advertisement

ತಪ್ಪದೇ ಎಂಆರ್‌ ಲಸಿಕೆ ಹಾಕಿಸಿ

12:12 PM Feb 10, 2017 | |

ಪಿರಿಯಾಪಟ್ಟಣ: ದಡಾರ, ರುಬೆಲ್ಲಾ ಮಾರಣಾಂತಿಕ ಕಾಯಿಲೆಯಾಗಿದ್ದು, ಇದನ್ನು ಹೋಗಲಾಡಿಸಲು ಪೋಷಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕಂಪಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ದಾರುಣಾವತಿ ತಿಳಿಸಿದರು.

Advertisement

ತಾಲೂಕಿನ ಕಂಪಲಾಪುರ ಗ್ರಾಮದ ನಾಗಾ ವಿದ್ಯಾಸಂಸ್ಥೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು, 9 ತಿಂಗಳಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಈ ಲಸಿಕೆ ಹಾಕಿಸಬೇಕು. ಕೆಮ್ಮು ಮತ್ತು ಸೀನುವುದರಿಂದ ಈ ರೋಗ ಹರಡುತ್ತದೆ. ಜೊತೆಗೆ ಮಕ್ಕಳಿಗೆ ನ್ಯುಮೋನಿಯ, ಅತಿಸಾರ ಭೇದಿ ಕಾಣಿಸಿಕೊಳ್ಳುತ್ತದೆ ಎಂದರು.

ಈ ಅಭಿಯಾನ ರಾಜ್ಯದೆಲ್ಲೆಡೆ ಫೆ.7ರಿಂದ 28ರ ವರೆಗೆ ನಡೆಯಲಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿಯೂ ಲಸಿಕೆ ನೀಡ ಲಾಗುವುದು, ಪೋಷಕರು ವದಂತಿಗಳಿಗೆ ಕಿವಿಗೊಡಬಾರದು ಎಂದರು. ಸಂಸ್ಥೆ ಕಾರ್ಯದರ್ಶಿ ಕೆ.ವಿ. ಜಯರಾಂ, ರಾಷ್ಟ್ರೀಯ ಭಾರತ ಸ್ವಾಸ್ಥ ಕಾರಕ್ರಮದ ಡಾ. ಪ್ರದೀಪ್‌, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಕೆ.ಎಸ್‌.ಲೋಕೇಶ್‌, ಮುಖ್ಯಶಿಕ್ಷಕ ಚಂದ್ರಶೇಖರ್‌, ಗಿರೀಶ್‌, ನಟರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next