Advertisement

Mr. Rani: ಟ್ವಿಸ್ಟ್‌ ಕೊಟ್ಟ ನಟ(ಟಿ); ಟೀಸರ್‌ನಲ್ಲಿ ಮಿಸ್ಟರ್‌ ರಾಣಿ

02:09 PM Oct 24, 2024 | Team Udayavani |

ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ ಚಿತ್ರದ ನಿರ್ದೇಶಕ ಮಧುಚಂದ್ರ ಈಗ ಹೊಸ ಚಿತ್ರದೊಂದಿಗೆ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಕಾಮಿಡಿ ಜಾನರ್‌ ಮೊರೆ ಹೋಗಿದ್ದು, ಚಿತ್ರಕ್ಕೆ “ಮಿ.ರಾಣಿ’ ಎಂಬ ಟೈಟಲ್‌ ಇಡಲಾಗಿದೆ. ಕೆಲವು ದಿನಗಳ ಹಿಂದೆ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದ ಚಿತ್ರತಂಡ ಈಗ ಟೀಸರ್‌ ಬಿಡುಗಡೆ ಮಾಡಿದೆ.

Advertisement

ಟೀಸರ್‌ ಫ‌ನ್‌ ಆಗಿ ಕಟ್ಟಿಕೊಡುವ ಮೂಲಕ ಇದೊಂದು ಕಾಮಿಡಿ ಜಾನರ್‌ ಸಿನಿಮಾ ಎಂಬುದನ್ನು ಹೇಳಹೊರಟಿದೆ. ಹೀರೋ ಆಗಬೇಕು ಎಂದು ಸಿನಿಮಾ ರಂಗಕ್ಕೆ ಬಂದ ಹುಡುಗ ಆಕಸ್ಮಿಕವಾಗಿ ಹೀರೋಯಿನ್‌ ಆಗಿಬಿಟ್ಟಾಗ ಏನಾಗುತ್ತದೆ ಅನ್ನೋದನ್ನು ಟೀಸರ್‌ನಲ್ಲಿ ಹೇಳಲಾಗಿದೆ.

ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ದೀಪಕ್‌ ಸುಬ್ರಹ್ಮಣ್ಯ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್‌ನಲ್ಲಿನ ಅವರ ಹೀರೋಯಿನ್‌ ಗೆಟಪ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿರೋದು ಎದ್ದು ಕಾಣುತ್ತಿದೆ. ಪ್ರಸ್ತುತ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದೆ.

ನಟ ದೀಪಕ್‌ ಸುಬ್ರಹ್ಮಣ್ಯ ಅವರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ಪ್ರಯತ್ನ ನಡೆಯುತ್ತಿದೆ. ದೀಪಕ್‌ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ ಪಾರ್ವತಿ ನಾಯರ್‌ ನಟಿಸಿದ್ದಾರೆ. ಎಕ್ಸೆಲ್‌ ಆರ್ಬಿಟ್‌ ಕ್ರಿಯೇಶನ್ಸ್‌ನಡಿ ನೂರಕ್ಕೂ ಹೆಚ್ಚು ಜನರು ಬಂಡವಾಳ ಹೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next