Advertisement

ಶ್ರೀ ಕಾಲಭೈರವ ಮೂಲಮುದ್ರಾ ಜೀರ್ಣೋದ್ಧಾರ ಮಹೋತ್ಸವ

11:32 AM Mar 17, 2017 | |

ಮೂಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ಶ್ರೀ ಕಾಲಭೈರವ ಮೂಲಮುದ್ರಾ ಜೀರ್ಣೋದ್ಧಾರ ಮಹೋತ್ಸವ ಶ್ರೀ ಕಾಶೀಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

Advertisement

ಮುಂಜಾನೆ 4.30ಕ್ಕೆ ಜೀರ್ಣೋದ್ಧಾರ ಮಹೋತ್ಸವದ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಂಡವು. 8 ಗಂಟೆಗೆ ಶ್ರೀಗಳು ಕೋಟ ಮೊಕ್ಕಾಂನಿಂದ ದೇವಸ್ಥಾನಕ್ಕೆ ಆಗಮಿಸಿದ್ದು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ವಿವಿಧ ಬಿರುದಾವಳಿಯೊಂದಿಗೆ ಗೌರವದ ಸ್ವಾಗತ ಕೋರಿ ಪಾದಪೂಜೆ ನೆರವೇರಿಸಿದರು.

ಬಳಿಕ ಮಹಾ ಪ್ರಾರ್ಥನೆ, ಶ್ರೀ ಅಷ್ಟಭೈರವ ಹವನ, ಶ್ರೀ ಸಂಯಧಿಮೀಂದ್ರಧಿತೀರ್ಥ ಸ್ವಾಮೀಜಿ ಅವರಿಂದ ಮೂಲ ಮುದ್ರೆಗೆ ಸ್ವರ್ಣ ಕವಚ ಸಮರ್ಪಣೆ ನಡೆದು ವಿಶೇಷ ಅಭಿಷೇಕ ನೆರವೇರಿತು. ರಾತ್ರಿ ದೇವದರ್ಶನ ಸಹಿತ ಚಿನ್ನದ ಪಲ್ಲಕ್ಕಿಯಲ್ಲಿ ವಿಶೇಷ ನಿತ್ಯೋತ್ಸವ ಜರಗಿತು. ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ದಿನವಿಡೀ ಫಲಾಹಾರ ಮತ್ತು ಮಧ್ಯಾಹ್ನ ಭೂರಿ ಸಮಾರಾಧನೆ ನಡೆಯಿತು.

ಮಹಾ ಅನ್ನಸಂತರ್ಪಣೆ, ಶ್ರೀನಿವಾಸ ಕಲ್ಯಾಣ
ಮಾ. 17ರಂದು ದೇವಸ್ಥಾನದಲ್ಲಿ ಶ್ರೀ ತಿರುಪತಿ ತಿರುಮಲ ದೇವಸ್ಥಾನದವರಿಂದ ಕ್ಷೇತ್ರದಲ್ಲಿ ಮೊತ್ತಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಯುವುದು. ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಮತ್ತು ಭೂರಿ ಸಮಾರಾಧನೆ ನಡೆಯುವುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next