Advertisement

ಶ್ರೀ ಗುರುಕೊಟ್ಟೂರೇಶ್ವರ ಜಾತ್ರೆ: 18ರಿಂದ ಪಾದಯಾತ್ರೆ ಆರಂಭ

01:16 PM Feb 14, 2017 | |

ದಾವಣಗೆರೆ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕೊಟ್ಟೂರು ಗ್ರಾಮದ ಶ್ರೀ ಗುರುಬಸವರಾಜೇಂದ್ರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಫೆ. 18ರಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, 18ರ ಸಂಜೆ 6 ಗಂಟೆಗೆ ದೊಡ್ಡಪೇಟೆ ವಿರಕ್ತ ಮಠದಿಂದ 38ನೇ ವರ್ಷದ ಪಾದಯಾತ್ರೆಗೆ ಬೀಳ್ಕೊಡಲಾಗುವುದು.

Advertisement

ಹೆಬ್ಟಾಳಿನ ಶ್ರೀಮಹಾಂತರುದ್ರ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಇತರೆ ಮಠಾಧೀಶರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಚ್‌.ಎಸ್‌. ಶಿವಶಂಕರ್‌, ಎಚ್‌.ಪಿ. ರಾಜೇಶ್‌, ಸಂಸದ ಜಿ.ಎಂ. ಸಿದ್ದೇಶ್ವರ್‌, ಕೈಗಾರಿಕೋದ್ಯಮಿ ಅಥಣಿ ಎಸ್‌. ವೀರಣ್ಣ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. 

ದಾವಣಗೆರೆಯಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ನ ಶ್ರೀ ಗುರುಕೊಟ್ಟೂರೇಶ್ವರ ನಗರ, ಜಂಬುಲಿಂಗನಹಳ್ಳಿ, ಕಂಚಿಕೆರೆ, ಕ್ಯಾರಕಟ್ಟೆ ಕಾವಲಹಳ್ಳಿ ತಿರುವು, ತೌಡೂರು, ಅರಸಿಕೆರೆ ಮಾರ್ಗವಾಗಿ ಪಾದಯಾತ್ರೆ ತೆರಳಿದೆ. 19ರ ಸಂಜೆ 6 ಗಂಟೆಗೆ ಅರಸಿಕೆರೆಯ ಕೋಲಶಾಂತೇಶ್ವರ ವಿರಕ್ತ ಮಠದಲ್ಲಿ ಔಷದೋಪಚಾರ ನಡೆಯಲಿದೆ.

ಶ್ರೀ ಶಾಂತಲಿಂಗೇಶ್ವರ ದೇಶಿಕೇಂದ್ರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಅರಸಿಕೆರೆಯಿಂದ ಕಡಬಗೆರೆ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಕನ್ನಕಟ್ಟೆ, ಅಯ್ಯನಹಳ್ಳಿ ಮೂಲಕ ಕೊಟ್ಟೂರೇಶ್ವರ ಗಚ್ಚಿನ ಮಠಕ್ಕೆ ಯಾತ್ರೆ 20ರಂದು ತಲುಪಲಿದೆ.

ಮಾರ್ಗ ಮಧ್ಯೆ ಎಲ್ಲ ಕಡೆಗಳಲ್ಲಿ ಊಟ, ತಿಂಡಿ, ಉಪಾಹಾರ, ನೀರು, ತಂಪು ಪಾನೀಯ, ಔಷಧ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಒಟ್ಟು 25 ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಡನ್‌ ನ ಇಬ್ಬರು ಸಾಫ್ಟ್‌ವೇರ್‌ ಇಂಜಿನಿಯರ್‌ ಗಳು ಸಹ ಯಾತ್ರೆಯಲ್ಲಿ ತೆರಳಲಿದ್ದಾರೆ.

Advertisement

18ರ ಸಂಜೆಯಿಂದಲೇ ಯಾತ್ರೆ ಆರಂಭವಾಗುತ್ತದೆ. ಮೊದಲ ದಿನ ಮಾಗಾನಹಳ್ಳಿ ಬಳಿಯ ನಮ್ಮ ಸಮಿತಿಯ ದೇವಸ್ಥಾನ, ಸಮುದಾಯ ಭವನದಲ್ಲಿ ಯಾತ್ರಾರ್ಥಿಗಳು ವಿಶ್ರಾಂತಿ  ತೆಗೆದುಕೊಳ್ಳಲಿದ್ದಾರೆ ಅವರು ತಿಳಿಸಿದರು. ಟ್ರಸ್ಟ್‌ನ ಸಹ ಕಾರ್ಯದರ್ಶಿ ಬಿ. ಚಿದಾನಂದ, ಖಜಾಂಚಿ ಮಲ್ಲಬಾಗಿ ಗುರುಬಸವರಾಜ, ಸಿ.ಆರ್‌. ಜಯರಾಜ್‌, ದೇವರಮನಿ ಶಿವಕುಮಾರ, ಎಚ್‌. ಆರ್‌. ಗಂಗಾಧರ, ಮತ್ತಿಹಳ್ಳಿ ಕೊಟ್ರೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next