ಮುಂಬಯಿ: ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಎ. 23 ರಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಹಯೋಗದಲ್ಲಿಯುವ ಪತ್ರಕರ್ತ, ಫ್ಯಾಶನ್ ಕೋರಿಯೋಗ್ರಾಫರ್ ಸನಿಧ್ ಪೂಜಾರಿ ಸಾರಥ್ಯದ ರುದ್ರ ಎಂಟರ್‌ಟೇನ್ಮೆಂಟ್ ಪ್ರಸ್ತುತಿಯಲ್ಲಿ ಆಯೋಜಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಾಂತ್ ಪೂಜಾರಿ ಉಡುಪಿ “ಮಿಸ್ಟರ್ ಬಿಲ್ಲವ’ ಮತ್ತು ದೀಕ್ಷಾ ಕೋಟ್ಯಾನ್ ಬಜ್ಪೆ “ಮಿಸ್ ಬಿಲ್ಲವ’ ಕಿರೀಟವನ್ನು ಮುಡಿಗೇರಿಸಿಕೊಂಡರು.
ಮಿಸ್ಟರ್ ಬಿಲ್ಲವ’ದ ದ್ವಿತೀಯ ಸ್ಥಾನವನ್ನು ಪ್ರೀತಂ ಕೋಟ್ಯಾನ್ ತನ್ನದಾಗಿಸಿಕೊಂಡರೆ, ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ವಿಶಾಲ್ ಸುವರ್ಣ ಹಾಗೂ “ಮಿಸ್ ಬಿಲ್ಲವ’ ದ್ವಿತೀಯ ಸ್ಥಾನವನ್ನು ಕಶ್ಮಿತಾ ಪೂಜಾರಿ ಮತ್ತು ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ಸುಚಿಖಾ ಸುವರ್ಣ ಅವರು ಪಡೆದರು.
ಕೆಲವು ಹಂತಗಳಲ್ಲಿ ನಡೆಸಲ್ಪಟ್ಟ ಸ್ಪರ್ಧೆಯಲ್ಲಿ ನೂರಾರು ಆಕಾಂಕ್ಷಿಗಳು ಸ್ಪರ್ಧಿಸಿದ್ದು, ಇಂದಿಲ್ಲಿ ನಡೆಸಲಾದ ಅಂತಿಮ ಸ್ಪರ್ಧೆಯ “ಮಿಸ್ಟರ್ ಬಿಲ್ಲವ’ ಕಣದಲ್ಲಿ ಪ್ರೀತಂ ಕೋಟ್ಯಾನ್, ತುಷಾಂತ್ ಕೋಟ್ಯಾನ್, ಆಕಾಶ್ ಪೂಜಾರಿ, ದೀಪಕ್ ಸುವರ್ಣ, ಸುಜೀತ್ ಅಮೀನ್, ವಿಕಾಸ್ ಅಮೀನ್, ನಿತಿನ್ ಪೂಜಾರಿ, ಶ್ರೇಯಸ್ ಕರ್ಕೇರ, ಅನಿಲ್ ಪೂಜಾರಿ, ರೀದಂ ಸಾಲ್ಯಾನ್, ಪ್ರಥ್ವಿ ಕುಕ್ಯಾನ್, ವಿಶಾಲ್ ಸುವರ್ಣ, ರೋಹಿತ್ ಸಾಲ್ಯಾನ್, ಲಖೀತ್ ಪೂಜಾರಿ, ಪ್ರಶಾಂತ್ ಪೂಜಾರಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಅಂತೆಯೇ “ಮಿಸ್ ಬಿಲ್ಲವ’ ವಿಭಾಗದಲ್ಲಿ ಐಶ್ವರ್ಯ ಪೂಜಾರಿ, ದೀûಾ ಕೋಟ್ಯಾನ್, ಶ್ರೀಜಾ ಕೋಟ್ಯಾನ್, ಶರಣ್ಯಾ ಪೂಜಾರಿ, ಸಿಶ್ಮಿತಾ ಪೂಜಾರಿ, ರಾಜ್‌ವಿ ಕೋಟ್ಯಾನ್, ಕವಿತಾ ಅಮೀನ್, ತೀರ್ಥ ಪೂಜಾರಿ, ಕಶ್ಮಿತಾ ಪೂಜಾರಿ, ಚೈತನ್ಯಾ ಪೂಜಾರಿ, ಸುಚಿಖಾ ಸುವರ್ಣ, ಪ್ರಿಯಶ್ರೀ ಪೂಜಾರಿ, ನಿಖೀತಾ ಪೂಜಾರಿ, ವಿಧಿತಾ ಪೂಜಾರಿ, ನಿಶಾ ಪೂಜಾರಿ ತಮ್ಮ ಸೌಂದರ್ಯ, ಮಾತುಗಾರಿಕೆ ಹಾಗೂ ಕೌಶಲ್ಯತೆ ಪ್ರಸ್ತುತಪಡಿಸಿದರು. ಸ್ಪರ್ಧೆಯಲ್ಲಿ ರ್‍ಯಾಂಪ್‌ವಾಕ್ ಮೂಲಕ ತಮ್ಮ ಅರ್ಹತೆಯನ್ನು ಅತ್ಯಾಕರ್ಷಕವಾಗಿ ಪ್ರದರ್ಶಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮೂಲ್ಕಿ ಇದರ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ. ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಅಸೋಸಿಯೇಶನ್‌ನ ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರು, ನೂತನ ಶ್ಯಾಮ ಪೂಜಾರಿ ಪುಣೆ, ಮೋಹನ್ ನಾಯರ್, ಡಾ| ರಾಜಶೇಖರ್ ಕೋಟ್ಯಾನ್, ವಿಶೇಷ ಸೆಲೆಬ್ರಿಟಿಗಳಾಗಿ ಮಿಸಸ್ ಇಂಡಿಯಾ ಹೆಸರಾಂತ ನೇಹಾ ಬೆನರ್ಜಿ, ತುಳು ಚಿತ್ರನಟಿ ಶ್ರದ್ಧಾ ಸಾಲ್ಯಾನ್, ನಟ ಕೋರಿಯೋಗ್ರಾಫರ್ ಸುಶಾಂತ್ ಪೂಜಾರಿ, ಸಂಘಟನಾ ಸಹಾಯಕ ಪ್ರಭಾಕರ್ ಬೆಳುವಾಯಿ, ಅಶೋಕ್ ಕೋಟ್ಯಾನ್, ಸಂತೋಷ್ ಪೂಜಾರಿ ಮಲಾಡ್, ಅಮƒತಾ ಕಾಮ್ಖರ್, ನವೀನ್ ಬಂಗೇರ, ಭಾಗ್ಯಲಕ್ಷಿ$¾à ನಾಯರ್, ಅಮಿತ್ ಪುಂನjವನಿ, ಸುಜಾನ್ ಪೂಜಾರಿ, ನೀತಾ ಕರ್ಕೇರ, ರಾಜನ್ ರಾಜ್‌ಪುತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಸ್ಪರ್ಧಾ ವಿಜೇತರಿಗೆ ಪಾರಿತೋಷಕ ಪ್ರದಾನಿಸಿ ಶುಭ ಹಾರೈಸಿದರು. ಅತಿಥಿ-ಗಣ್ಯರು ರುದ್ರ ಸಂಸ್ಥೆಯ ಸಾಧನೆ ಮತ್ತು ಕಾರ್ಯಕ್ರಮದ ಪ್ರಧಾನ ಸಂಘಟಕ ಸನಿಧ್ ಪೂಜಾರಿ ಪ್ರಶಂಸಿಸಿ ಸಮ್ಮಾನಿಸಿ ಸ್ಪರ್ಧಾಳು ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಶುಭಕೋರಿದರು. ದೀಪಕ್ ಶೆಟ್ಟಿ ಸ್ಪರ್ಧೆಯನ್ನು ನಿರ್ವಹಿಸಿ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್