Advertisement

ಪರಿಪೂರ್ಣ ವ್ಯಕ್ತಿತ್ವ ನಿರೂಪಿಸುವ ಶ್ರೀ ಭುವನೇಂದ್ರ ಬಾಲಕಾಶ್ರಮ

08:10 AM Jul 23, 2017 | Team Udayavani |

ಕುಂದಾಪುರ: ಬಾಲ್ಯದಲ್ಲೇ ಲೌಕಿಕ ಶಿಕ್ಷಣದೊಂದಿಗೆ ನೈತಿಕ, ಮೌಲಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ಸಿಕ್ಕಲ್ಲಿ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ. ಎನ್ನುವುದನ್ನು 52 ವರುಷಗಳ
ಮೊದಲೇ ಮನಗಡ ಶ್ರೀ ಕಾಶೀಮಠದ ಶ್ರೀಮತ್‌ ಸು ಧೀಂದ್ರತೀರ್ಥ ಶ್ರೀಗಳು ಬಸೂÅರಿನಲ್ಲಿ ಶ್ರೀ ಭುವನೇಂದ್ರ ಬಾಲಕಾಶ್ರಮ ಸ್ಥಾಪಿಸಿದರು.

Advertisement

ಇಲ್ಲಿ 4ನೇ ತರಗತಿ ಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಕನ್ನಡ – ಆಂಗ್ಲ ಮಾಧ್ಯಮಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಲೆ, ಸಂಗೀತ‌, ಸಂಧ್ಯಾವಂದನೆ‌, ಗಾಯತ್ರಿ ಜಪಾದಿಗಳ ಬಗ್ಗೆ ಮಾಹಿತಿ, ನಿತ್ಯ ಅನುಷ್ಠಾನ, ಯೋಗ, ಆಟೋಟಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಉನ್ನತ ಸ್ಥಾನ-ಮಾನ
ಇಲ್ಲಿ ಪಡೆದ ಶಿಕ್ಷಣದಿಂದ ನೂರಾರು ಮಕ್ಕಳು ದೇಶ  ವಿದೇಶಗಳಲ್ಲಿ  ಉದ್ಯೋಗ, ವ್ಯವಹಾರದಲ್ಲಿ ತೊಡಗಿಸಿಕೊಂಡು ಉನ್ನತ ಸ್ಥಾನ-ಮಾನ ಗಳಿಸಿ ಖ್ಯಾತರಾಗಿದ್ದಾರೆ. ಈ ಬಾಲಕಾಶ್ರಮ ಬಡವ- ಬಲ್ಲಿದ‌ ಎನ್ನದೇ ಎಲ್ಲರಿಗೂ ಉಚಿತವಾಗಿ ಸಕಲ ಸೌಕರ್ಯಗಳನ್ನು ಕಲ್ಪಿಸಿದ್ದು. ಸುಸಜ್ಜಿತ ಅಧ್ಯಯನ ಕೊಠಡಿ, ವಸತಿ ಕೊಠಡಿಗಳು, ಭೋಜನ ಶಾಲೆ, ಸ್ನಾನಗೃಹ, ಅಡುಗೆಕೋಣೆ, ಪ್ರಾರ್ಥನಾ ಮಂದಿರ, ಆಟದ ಸ್ಥಳಗಳಿಂದ ಕೂಡಿದ್ದು, 30ಕ್ಕೂ ಮಿಕ್ಕಿದ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜು. 23: ವಾರ್ಷಿಕೋತ್ಸವ
ಮಂಗಳೂರಿನ ಶ್ರೀನಿವಾಸ ನಿಗಮಾಗಮ ಪಾಠ ಶಾಲೆ, ಕಾರ್ಕಳದ ಶ್ರೀಸುಕೃತೀಂದ್ರ ಬಾಲಕಾಶ್ರಮ, ಶ್ರೀ ಭುವನೇಂದ್ರ ಬಾಲಕಾಶ್ರಮದ ಜಂಟಿ ವಾರ್ಷಿಕೋತ್ಸವದ ಸಂಭ್ರಮ ಜು. 23ರಂದು ಕೊಂಚಾಡಿಯ ಶ್ರೀ ಕಾಶೀ ಮಠದ ಶಾಖಾಮಠ, ಶ್ರೀ ವೆಂಕಟ ರಮಣ ಮತ್ತು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಆವರಣದಲ್ಲಿ  ಶ್ರೀಮತ್‌ ಸಂಯಮೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ಜಂಟಿ ವಾರ್ಷಿಕೋತ್ಸವ ನಡೆಯಲಿದೆ.

 ಈ ಬಾಲಕಾಶ್ರಮ ಶ್ರೀ ಸು ಧೀಂದ್ರತೀರ್ಥ ಶ್ರೀಪಾದರ ಕನಸಿನ ಸಾಕಾರರೂಪ. ಬಾಲಕಾಶ್ರಮದ ಪರಿಪೂರ್ಣ ಉದ್ದೇಶವೆಂದರೆ ಪುಟ್ಟ ಮಕ್ಕಳಲ್ಲಿ ಶಾಲೆಯ ಸಾಂಪ್ರದಾಯಿಕ ಶಿಕ್ಷಣದೊಂದಿಗೆ ನೈತಿಕ, ಆಧ್ಯಾತ್ಮಿಕ, ಜ್ಞಾನದ ಅರಿವು ಮೂಡಿಸುವುದು. ಮುಂದೆ ಈ ಎಲ್ಲ ಗುಣಗಳು ನಮ್ಮ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಲು ಸಹಕಾರಿಯಾಗುತ್ತವೆ.

Advertisement

– ಶ್ರೀಧರ ವಿಠಲ ಕಾಮತ್‌ ಸಂಚಾಲಕರು, ಶ್ರೀ ಭುವನೇಂದ್ರ ಬಾಲಕಾಶ್ರಮ

Advertisement

Udayavani is now on Telegram. Click here to join our channel and stay updated with the latest news.

Next