ಮುಂಬಯಿ: ಶ್ರೀ ಅಯ್ಯಪ್ಪ ಸೇವಾ ಮಂಡಳ ವಿಕ್ರೋಲಿ ಇದರ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಡಿ. 29ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.
ವಿಕ್ರೋಲಿ ಪೂರ್ವದ ಠಾಕೂರ್ ನಗರದ ಹರಿ ಯಾಲಿ ವಿಲೇಜ್, ರೆಮೇಡಿಯಸ್ ಕಂಪೌಂಡ್‌ನಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ 5 ರಿಂದ ಗಣಪತಿ ಹೋಮ, ಬೆಳಗ್ಗೆ 7 ರಿಂದ ಮಹಾದೇವಿಯ ಪೂಜೆ, ಬೆಳಗ್ಗೆ 9 ರಿಂದ ಭಜನೆ, ಪೂರ್ವಾಹ್ನ 11 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಮಧ್ಯಾಹ್ನ 12 ರಿಂದ ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸುರೇಶ್ ಪಾಟ್ಕರ್ ಗುರುಸ್ವಾಮಿ ಅವರು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಉದಯ ಶೆಟ್ಟಿ ಪೇಜಾವರ ಗುರುಸ್ವಾಮಿ, ಪೂವಪ್ಪ ಪೂಜಾರಿ ಗುರುಸ್ವಾಮಿ, ಮುನಿಯಾಲು ಕೃಷ್ಣ ಪೂಜಾರಿ ಗುರುಸ್ವಾಮಿ, ಹರೀಶ್ ಗುರುಸ್ವಾಮಿ, ಸೋಮನ್ ಸ್ವಾಮಿ, ಗಣೇಶ್ ಶೆಟ್ಟಿ ಗುರುಸ್ವಾಮಿ, ಯುಗಾನಂದ ಸ್ವಾಮಿ ಮೊದಲಾದವರು ಮುಂದಾ ಳತ್ವದಲ್ಲಿ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ಸುಸಾಂಗವಾಗಿ ನೆರವೇರಿತು.
ಕಮಲೇಶ್ ಶೆಟ್ಟಿ, ರಾಜೇಶ್ ಬಂಗೇರ, ಮುಖೇಶ್ ಶೆಟ್ಟಿ, ಸುರೇಶ್ ಪೂಜಾರಿ, ಸುದರ್ಶನ ಅಗರ್‌ವಾಲ್, ಸುಂದರ್ ಪಿಳ್ಳೈ, ದಿಲಿಪ್ ಶೆಟ್ಟಿ, ಗಣೇಶ್ ಸುಂದರ್ ಶೆಟ್ಟಿ, ಗಣೇಶ್ ಶೆಟ್ಟಿ ದುಬಾೖ, ಜಗದೀಶ್ ಸಿಂಗ್, ಸಂದೀಪ್ ಗುಡೆಕರ್, ಸಂತೋಷ್ ಕದಂ, ಪರೇಶ್ ದೇಸಾಯಿ, ಸುರೇಶ್ ನಾಯಕ್ ಅಂಧೇರಿ, ರೋಶನ್ ಸುಂದರ್ ಶೆಟ್ಟಿ, ಶಾನು ನಾಯಕ್ ಅಂಧೇರಿ, ಸುಂದರ ಮಡಿವಾಳ, ಸತೀಶ್ ಹೆಗ್ಡೆ, ಹರೀಶ್ ಸ್ವಾಮಿ ಭಾಂಡೂಪ್, ಪ್ರವೀಣ್ ಕೆ. ಶೆಟ್ಟಿ, ಪ್ರವೀಣ್ ವಿ. ಶೆಟ್ಟಿ, ಉದ್ಯಮಿ ರವೀಂದ್ರ ಶೆಟ್ಟಿ, ಭಾರತಿ ಶೆಟ್ಟಿ, ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
18ನೇ ವರ್ಷದ ಶಬರಿಮಲೆಯಾತ್ರೆಗೈಯಲಿ ರುವ ಶಿಬಿರದ ಸಂತೋಷ್ ಪೂಜಾರಿ ಸ್ವಾಮಿ ಮತ್ತು ಹರೀಶ್ ಪೂಜಾರಿ ಸ್ವಾಮಿ ಅವರನ್ನು ಶಿಬಿರದ ವತಿಯಿಂದ ಗುರುಸ್ವಾಮಿಗಳ ಉಪಸ್ಥಿತಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಹೊಟೇಲ್ ಉದ್ಯಮಿಗಳು, ಸಮಾಜ ಸೇವಕರು, ರಾಜಕೀಯ ಧುರೀಣರು, ತುಳು-ಕನ್ನಡಿಗರು, ದಾನಿಗಳು, ಮರಾಠಿ ಹಾಗೂ ಅನ್ಯಭಾಷಿಗ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ವಿಕ್ರೋಲಿ ಕನ್ನಡ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಕ್ರೋಲಿ ಬಂಟ್ಸ್‌ನ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು, ಕಾರ್ಯಕಾರಿ ಸಮಿತಿಯ ಸದಸ್ಯರು, ಬಿಲ್ಲವರ ಅಸೋ. ವಿಕ್ರೋಲಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ವಿಕ್ರೋಲಿ ಪದಾಧಿಕಾರಿಗಳು, ಸದಸ್ಯರು, ಮೊಗವೀರ ಸಂಘ ವಿಕ್ರೋಲಿ ಸ್ಥಳೀಯ ಸಮಿತಿಯ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.