ಪುಣೆ: ನಮ ತುಳುವೆರ್ ಪುಣೆ ಸಂಸ್ಥೆಯ ಸಂಸ್ಥಾಪಕ ಸೂರ್ಯ ಪೂಜಾರಿ ಇವರ ನೇತೃತ್ವದಲ್ಲಿ ತುಳುವರಿಗಾಗಿ ತುಳುವರ ಅಂದ-ಚಂದ, ಉಡುಗೆ ತೊಡುಗೆ, ಕೌಶಲತೆ, ಪ್ರತಿಭೆಗೆ ಸಾಟಿಯಾಗಿ ಪ್ರಥಮ ಬಾರಿಗೆ ಪುಣೆಯಲ್ಲಿ “ಮಿಸ್ಟರ್ ಆ್ಯಂಡ್ ಮಿಸ್ ಫೇಸ್ ಆಫ್ ತುಳುನಾಡು 2019′ ಮೆಗಾ ಫಿನಾಲೆ ಸಮಾರಂಭವು ಜೂ. 16 ರಂದು ಬಾಣೇರ್‌ನಲ್ಲಿರುವ ಪ್ರತಿಷ್ಟಿತ ಪುಣೆ ಬಂಟರ ಭವನದಲ್ಲಿ ಅಪರಾಹ್ನ 2 ರಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಈಗಾಗಲೇ ಪುಣೆಯ ವಿವಿಧ ಕಡೆಗಳಲ್ಲಿ ಸ್ಪರ್ಧಿಗಳ ಆಡಿಷನ್ ನಡೆದಿದ್ದು ಹಲವಾರು ಪ್ರತಿಭೆಗಳು ಈ “ಮಿಸ್ಟರ್ ಅಂಡ್ ಮಿಸ್ ಫೇಸ್ ಆಫ್ ತುಳುನಾಡು’ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿ¨ªಾರೆ. ಈ ಮೆಗಾ ಸ್ಪರ್ಧೆಯಲ್ಲಿ ಮಂಗಳೂರು, ಉಡುಪಿ ಜಿÇÉೆಗಳು ಸೇರಿದಂತೆ ಮುಂಬಯಿ, ಪುಣೆ ಮತ್ತಿತರ ನಗರಗಳ ಸ್ಪರ್ಧಿಗಳು ಭಾಗವಹಿಸುತ್ತಿ¨ªಾರೆ.
ಉದ್ಘಾಟನಾ ಸಮಾರಂಭವು ನಮ ತುಳುವೆರ್ ಸಂಸ್ಥಾಪಕ ಸೂರ್ಯ ಪೂಜಾರಿ ಕಾರ್ಕಳ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಇನ್ನ ಕುರ್ಕಿಲ್ ಬೆಟ್ಟು ಸಂತೋಷ ಶೆಟ್ಟಿ ಅವರು ಆಗಮಿಸಲಿ¨ªಾರೆ. ಗೌರವ ಅತಿಥಿಗಳಾಗಿ ಥಾಣೆ ಮಹಾನಗರ ಪಾಲಿಕೆಯ ಮೇಯರ್ ಮೀನಾಕ್ಷಿ ಶಿಂಧೆ ಪೂಜಾರಿ, ಲೋನಾವಾಲ ನಗರ ಪಾಲಿಕೆಯ ಉಪಾಧ್ಯಕ್ಷ ಶ್ರೀಧರ ಪೂಜಾರಿ, ಪುಣೆ ತುಳು ಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಉದ್ಯಮಿ ಸಿ. ಎ. ಗಿರೀಶ್ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ಪುಣೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ದೀಪಾ ಎ. ರೈ, ಸಮಾಜ ಸೇವಕಿ ನೂತನ್ ಸುವರ್ಣ ಅವರು ಆಗಮಿಸಲಿ¨ªಾರೆ. ವಿಶೇಷ ಆಕರ್ಷಣೆಯಾಗಿ ತುಳು ಚಿತ್ರ ರಂಗದ ಹಾಸ್ಯ ಮೇರು ಕಲಾವಿದ ತುಳುವೆರ ಮಾಣಿಕ್ಯ ಅರವಿಂದ ಬೋಳಾರ್ ಆಗಮಿಸಲಿ¨ªಾರೆ.
ಮಿಸ್ಟರ್ ಅÂಂಡ್ ಮಿಸ್ ಫೇಸ್ ಆಫ್ ತುಳುನಾಡು -2019 ಮೆಗಾ ಫಿನಾಲೆ ಕಾರ್ಯಕ್ರಮದ ಫ್ಯಾಶನ್ ಕೊರಿಯೋಗ್ರಾಫಾರ್ ಆಗಿ ಸನ್ನಿಧ್ ಪೂಜಾರಿ ಸಹಕರಿಸಲಿದ್ದಾರೆ. ಮೆಗಾ ಫಿನಾಲೆ ಕಾರ್ಯಕ್ರಮದ ನಿರೂಪಣೆಯನ್ನು ತುಳುನಾಡಿನ ಹೆಸರಾಂತ ಕಾರ್ಯಕ್ರಮ ನಿರೂಪಕರಾದ ನಿತೇಶ್ ಶೆಟ್ಟಿ ಎಕ್ಕಾರು ಹಾಗೂ ದೀಪಕ್ ಶೆಟ್ಟಿ ಅವರು ಮಾಡಲಿ¨ªಾರೆ. ಹಲವಾರು ತಿಂಗಳುಗಳ ಕಾಲ ನಡೆದ ಈ ಮಿಸ್ಟರ್ ಆ್ಯಂಡ್ ಮಿಸ್ ಫೇಸ್ ಆಫ್ ತುಳುನಾಡು -2019 ಸಮಾರಂಭದ ಪ್ರಾರಂಭದಿಂದಲೂ ತುಳುನಾಡ ಬಾಂಧವರು ಹೆಚ್ಚಿನ ಸಹಕಾರವನ್ನು ನೀಡಿದ್ದು, ಅಂತೆಯೇ ಇದೀಗ ಮೆಗಾ ಫಿನಾಲೆ ಸಮಾರಂಭಕ್ಕೂ ಪುಣೆಯ ತುಳು ಬಾಂಧವರ ಸಂಪೂರ್ಣ ಸಹಕಾರವನ್ನು ‘ನಮ ತುಳುವೆರ್’ ಸಂಸ್ಥೆ ಬಯಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ 7798378154 ನಂಬರನ್ನು ಸಂಪರ್ಕಿಸಬಹುದು. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ತುಳು ಬಂಧುಗಳು ಆಗಮಿಸಿ ಈ ವರ್ಣರಂಜಿತ ಫ್ಯಾಶನ್ ಶೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ನಮ ತುಳುವೆರ್ ಸಂಸ್ಥೆಯ ಸಂಸ್ಥಾಪಕ ಸೂರ್ಯ ಪೂಜಾರಿ ಕಾರ್ಕಳ, ಉಪಾಧ್ಯಕ್ಷ ಅಜಿತ್ ಶೆಟ್ಟಿ ಕಡೆಕಾರ್, ಕಾರ್ಯದರ್ಶಿ ಶೇಷ್ಮಿ ಭಟ್, ಕೋಶಾಧಿಕಾರಿ ರಶ್ಮಿತಾ ಪೂಜಾರಿ, ಸದಸ್ಯರಾದ ರಮೇಶ್ ಪೂಜಾರಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.