Advertisement

 “ಮಿಸ್ಟರ್‌ ಆ್ಯಂಡ್‌ ಮಿಸ್‌ ಕರಾವಳಿ-2018′ಸೌಂದರ್ಯ ಸ್ಪರ್ಧೆ

04:08 PM Apr 10, 2018 | |

ಮುಂಬಯಿ: ರುದ್ರ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯು ಫ್ಯಾಶನ್‌ ಕೊರಿಯೋ ಗ್ರಾಫರ್‌ ಸನ್ನಿಧ್‌ ಪೂಜಾರಿ ಇವರ ಪರಿಕಲ್ಪನೆಯ ಮುನಿಯಾಲ್‌ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ನ ಪ್ರಾಯೋಜಕತ್ವ ಮತ್ತು ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್ಕೊàಪರ್‌ ಸಹಯೋಗದಲ್ಲಿ ಆಯೋಜಿಸಿದ್ದ “ಮಿಸ್ಟರ್‌ ಆ್ಯಂಡ್‌ ಮಿಸ್‌ ಕರಾವಳಿ-2018′ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಸಾದ್‌ ಹರಿ ಶೆಟ್ಟಿ “ಮಿಸ್ಟರ್‌ ಕರಾವಳಿ’ ಗೌರವಕ್ಕೆ ಪಾತ್ರರಾದರೆ, ಶಿಲ್ಪಾ ಡಿ. ಶೆಟ್ಟಿ “ಮಿಸ್‌ ಕರಾವಳಿ’ ಕಿರೀಟವನ್ನು  ಮುಡಿಗೇರಿಸಿಕೊಂಡರು.

Advertisement

ಹಲವಾರು ಸುತ್ತಿನ ಸ್ಪರ್ಧೆಯ ಬಳಿಕ ನಡೆಸಲ್ಪಟ್ಟ ಅಂತಿಮ ಸುತ್ತಿನ ಸ್ಪರ್ಧೆಯು  ಎ. 8ರಂದು  ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾರ್ಯಕ್ರಮದ ಪ್ರಾಯೋಜಕ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಸಂಸ್ಥಾಪಕಾಧ್ಯಕ್ಷ ಮುನಿಯಾಲ್‌ ಉದಯ ಕೆ. ಶೆಟ್ಟಿ ವಿಜೇತರಿಗೆ ಪಾರಿತೋಷಕಗಳನ್ನು ಪ್ರದಾನಿಸಿ ಮತ್ತು ನಮಿತಾ ಉದಯ ಶೆಟ್ಟಿ ದಂಪತಿ ಹಾಗೂ ಅಶ್ಮಿತಾ ಉದಯ ಶೆಟ್ಟಿ ಅವರು ಜಯಶೀಲ ಮಿಸ್‌ ಸ್ಪರ್ಧಿಗಳಿಗೆ ಕಿರೀಟ ತೊಡಿಸಿ ಶುಭಹಾರೈಸಿದರು.

ಮಿಸ್ಟರ್‌ ಕರಾವಳಿ ವಿಜೇತ ಪ್ರಸಾದ್‌ ಶೆಟ್ಟಿ ಮೂಲತಃ ಮಂಗಳೂರು ಸುರತ್ಕಲ್‌ನ  ಸೂರಿಂಜೆಯ ಹರಿ ಎಂ. ಶೆಟ್ಟಿ ಮತ್ತು ಉಡುಪಿ ಕಡೆಕಾರು ಮಲ್ಲಿಕಾ ಎಂ. ಶೆಟ್ಟಿ ದಂಪತಿ ಸುಪುತ್ರರಾಗಿದ್ದು ನವಿ ಮುಂಬಯಿ ನೆರೂಲ್‌ನಲ್ಲಿ ನೆಲೆಯಾಗಿದ್ದಾರೆ. ಮಿಸ್‌ ಕರಾವಳಿ ಶಿಲ್ಪಾ ಶೆಟ್ಟಿಯವರು ಮೂಲತಃ ನಡಿಬೆಟ್ಟು ಯೆರ್ಲಪಾಡಿಯ ದಿವಾಕರ್‌ ಶೆಟ್ಟಿ ಮತ್ತು ಬಂಟ್ವಾಳ ವಾಮದಪದವು ಕೆದಿಗೆ ನಿವಾಸಿ ಯಶೋದಾ ಡಿ. ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ನವಿಮುಂಬಯಿಯ ವಾಶಿಯಲ್ಲಿ ನೆಲೆಸಿದ್ದಾರೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಗೌರವ  ಪ್ರಧಾನ  ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ವಾಸ್ತುತಜ್ಞ ಪಂಡಿತ್‌ ನ‌ವೀನ್‌ಚ‌ಂದ್ರ ಆರ್‌. ಸನಿಲ್‌, ಕತ್ತಲೆಕೋಣೆ ಚಲನಚಿತ್ರದ ನಾಯಕಿ ನಟಿ ಹೆನಿಕಾ ರಾವ್‌, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ರಾಜ ವಿ. ಸಾಲ್ಯಾನ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ನಿಲೇಶ್‌ ಪೂಜಾರಿ ಪಲಿಮಾರ್‌, ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್ಕೊàಪರ್‌ ಅಧ್ಯಕ್ಷ ಇನ್ನಾಬಾಳಿಕೆ ನವೀನ್‌ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಮೋದಿನಿ ಶೆಟ್ಟಿ, ರೋಕಿ ಉಚಿಲ್‌, ಶ್ರದ್ಧಾ ಬಂಗೇರ ತೀರ್ಪುಗಾರರಾಗಿ ಸಹಕರಿಸಿದರು.

ಕಾರ್ಯಕ್ರಮದ ಸಾರಥಿ, ಪ್ರಧಾನ ಸಂಘಟಕ ಪ್ರಭಾಕರ್‌ ಬೆಳುವಾಯಿ ಮತ್ತು ಶೋಧನಾ ಪ್ರಭಾಕರ್‌ ದಂಪತಿಯನ್ನು ಅತಿಥಿಗಳು ಸಮ್ಮಾನಿಸಿದರು. ಟೀಮ್‌ ರುದ್ರ ಬಳಗದ ರೂವಾರಿಗಳಾದ ಸನ್ನಿಧ್‌ ಪೂಜಾರಿ, ಅಭಿಷೇಕ್‌ ಪೂಜಾರಿ, ಐಶ್ವರ್ಯ ಪೂಜಾರಿ, ಕು| ನಿಶಾ ಪೂಜಾರಿ ಸತ್ಕರಿಸಿ ಗೌರವಿಸಿದರು.  ಸಹ ಪ್ರಾಯೋಜಕರನ್ನು ಒಳಗೊಂಡು ವಿಜೇತರನ್ನು ಗಣ್ಯರು ಕಿರೀಟ ತೊಡಿಸಿ, ಪುಷ್ಪಗುಚ್ಚ, ಸ್ಮರಣಿಕೆ, ನಗದು ಪ್ರದಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮೆಕಾç ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎಂ. ಶೆಟ್ಟಿ, ಚಂದ್ರಹಾಸ್‌ ಕೆ.ಶೆಟ್ಟಿ, ರತ್ನಾಕರ್‌ ಶೆಟ್ಟಿ ಮುಂಡ್ಕೂರು, ಐಕಳ ಗುಣಪಾಲ್‌ ಶೆಟ್ಟಿ, ಹರೀಶ್‌ ವಾಸು ಶೆಟ್ಟಿ, ಅನಂತೇಶ್‌ ಪೂಜಾರಿ, ಮೋಹಿನಿ ರವಿ ಪೂಜಾರಿ, ಹರೀಶ್‌ ಪಡುಇನ್ನಾ, ರವೀಂದ್ರ ಎಸ್‌. ಕರ್ಕೇರ ಮೀರಾರೋಡ್‌, ಅಶೋಕ್‌ ಕೋಟ್ಯಾನ್‌ ಅಂಧೇರಿ, ಬೋಳ ರವಿ ಪೂಜಾರಿ, ಪ್ರವೀಣ್‌ ಶೆಟ್ಟಿ ವಾರಂಗ, ಗುರು ಶಂಕರ್‌ ಭಟ್‌ ಮತ್ತು ಶಂಕರ್‌ ಗುರು ಭಟ್‌, ಪ್ರಜ್ವಲ್‌ ಪೂಜಾರಿ ಕಾರ್ಕಳ, ಭಾಸ್ಕರ್‌ ಸುವರ್ಣ ಸಪ್ತಸ್ವರ, ಹರೀಶ್‌ ಮೂಡಬಿದ್ರೆ, ನಿಖೀಲೇಶ್‌ ಪೂಜಾರಿ, ಹರೀಶ್‌ ಶಾಂತಿ, ಶುಭಾಂಗಿ ಶೆಟ್ಟಿ, ಉದಯ ವೇಣೂರು, ಮನೋಹರ್‌ ಶೆಟ್ಟಿ ನಂದಳಿಕೆ, ಶಿವಪ್ರಸಾದ್‌ ಪುತ್ತೂರು, ಕಿಶೋರ್‌ ಪಿಲಾರ್‌, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ವಿಲಾಸ್‌ ಸಾವಂತ್‌, ಮನೋಹರ್‌ ಶೆಟ್ಟಿ ನಂದಳಿಕೆ, ನವೀನ್‌ ಪಡುಇನ್ನಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಸಂಯೋಜಕರು ಮತ್ತು ಸ್ಪರ್ಧಿಗಳನ್ನು ಅಭಿನಂದಿಸಿದರು.

Advertisement

ಕು| ಶಿಲ್ಪಿಕಾ ಸಾಲ್ಯಾನ್‌, ಕು| ನಿಶ್ಮಿತಾ ಕೋಟ್ಯಾನ್‌, ಕು| ಸ್ನೇಹಾ ಸಾಲ್ಯಾನ್‌ ತಂಡದ  ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ದೀಪಕ್‌ ಶೆಟ್ಟಿ ಮತ್ತು ನಿತೇಶ್‌ ಕುಮಾರ್‌ ಮಾರ್ನಾಡ್‌ ಕಾರ್ಯಕ್ರಮ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಅಶೋಕ್‌ ಪಕ್ಕಳ ಸ್ವಾಗತಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಸನ್ನಿಧ್‌ ಪೂಜಾರಿ ಪ್ರಸ್ತಾವನೆಗೈದು ವಂದಿಸಿದರು. ಮನೋರಂಜನೆಯ ಅಂಗವಾಗಿ ಅಪ್ರತಿಮ ಕಲಾವಿದ ಲತೇಶ್‌ ಎಂ. ಪೂಜಾರಿ ಮತ್ತು ಬಳಗವು ಎಎಫ್‌ಎಂ ಮ್ಯಾಜಿಕ್‌ ತಂಡದಿಂದ ವೈವಿಧ್ಯಮಯ  ಸಂಗೀತ ರಸಮಂಜರಿ ಹಾಗೂ ಮಹಾನಗರದ ಕಲಾ ತಂಡಗಳಿಂದ ನೃತ್ಯ ವೈಭವ ನಡೆಯಿತು. 

ಮುಂಬಯಿ, ಎ. 9: ರುದ್ರ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯು ಫ್ಯಾಶನ್‌ ಕೊರಿಯೋ ಗ್ರಾಫರ್‌ ಸನ್ನಿಧ್‌ ಪೂಜಾರಿ ಇವರ ಪರಿಕಲ್ಪನೆಯ ಮುನಿಯಾಲ್‌ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ನ ಪ್ರಾಯೋಜಕತ್ವ ಮತ್ತು ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್ಕೊàಪರ್‌ ಸಹಯೋಗದಲ್ಲಿ ಆಯೋಜಿಸಿದ್ದ “ಮಿಸ್ಟರ್‌ ಆ್ಯಂಡ್‌ ಮಿಸ್‌ ಕರಾವಳಿ-2018′ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಸಾದ್‌ ಹರಿ ಶೆಟ್ಟಿ “ಮಿಸ್ಟರ್‌ ಕರಾವಳಿ’ ಗೌರವಕ್ಕೆ ಪಾತ್ರರಾದರೆ, ಶಿಲ್ಪಾ ಡಿ. ಶೆಟ್ಟಿ “ಮಿಸ್‌ ಕರಾವಳಿ’ ಕಿರೀಟವನ್ನು  ಮುಡಿಗೇರಿಸಿಕೊಂಡರು.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next