Advertisement

ವಿದ್ಯಾರ್ಥಿಗಳ ಮನೆಗೆ ಸಂಸದರ ಭೇಟಿ; ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನ

12:58 AM Mar 03, 2022 | Team Udayavani |

ಮಂಗಳೂರು: ಉಕ್ರೇನ್‌ನಲ್ಲಿ ತೊಂದರೆಗೀಡಾಗಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರಕಾರ ಸರ್ವ ಪ್ರಯತ್ನ ನಡೆಸುತ್ತಿದೆ. ಯಾರೂ ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಉಕ್ರೇನ್‌ನಲ್ಲಿರುವ ಮಂಗಳೂರಿನ ವಿದ್ಯಾರ್ಥಿಗಳ ಮನೆಗೆ ಬುಧವಾರ ಶಾಸಕ ವೇದವ್ಯಾಸ ಕಾಮತ್‌ ಅವ ರೊಂದಿಗೆ ತೆರಳಿ ಹೆತ್ತವರಿಗೆ ಧೈರ್ಯ ತುಂಬಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.

ಎಲ್ಲರೂ ಸಂಪರ್ಕದಲ್ಲಿ
ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 18 ವಿದ್ಯಾರ್ಥಿಗಳೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ. ಒಂದು ವಾರದೊ ಳಗೆ ಎಲ್ಲರೂ ತವರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕಾರ್ಯಾಚರಣೆ ಬಗ್ಗೆ ಸಂತೃಪ್ತಿ
ಉಕ್ರೇನ್‌ನಲ್ಲಿ ಮಂಗಳೂರು ನಗರದ ಐವರಿದ್ದು ಓರ್ವ ವಿದ್ಯಾ ರ್ಥಿಯ ಹೆತ್ತ ವರು ಸದ್ಯ ನಗರದಲ್ಲಿಲ್ಲ. ಅವರು ಬಂದ ಕೂಡಲೇ ಭೇಟಿ ಮಾಡಲಾಗುವುದು. ಉಳಿದ ನಾಲ್ವರ ಹೆತ್ತವರ ಮನೆಗೆ ತೆರಳಿ ಧೈರ್ಯ ತುಂಬುತ್ತಿದ್ದೇವೆ. ಸರಕಾರದ ಕಾರ್ಯಾಚರಣೆ ಬಗ್ಗೆ ಹೆತ್ತವರಲ್ಲಿ ಸಂತೃಪ್ತಿ ಇದೆ. ಬಿಜೆಪಿಯಿಂದಲೂ ವಾರ್‌ ರೂಮ್‌ ತೆರೆದು ವರದಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಪಾಸ್‌ಪೋರ್ಟ್‌ ರಹಿತ
ಪ್ರಯಾಣಕ್ಕೆ ವ್ಯವಸ್ಥೆ
ಅನೈನಾ ಅವರ ಪಾಸ್‌ ಪೋರ್ಟ್‌ ಉಕ್ರೇನ್‌ನ ಏಜೆಂಟರಲ್ಲಿರುವ ವಿಚಾರವನ್ನು ಸರಕಾರ ಗಮನಿಸಿದೆ. ಇಂತಹ
2-3 ಪ್ರಕರಣಗಳಿದ್ದು, ಪಾಸ್‌ಪೋರ್ಟ್‌ ಇಲ್ಲದೆಯೇ ಕರೆತರಲು ಪ್ರಧಾನಿ ವ್ಯವಸ್ಥೆ ಮಾಡಿದ್ದಾರೆ ಎಂದರು.

Advertisement

ಮೃತದೇಹ ತರಲು ಪ್ರಯತ್ನ
ರಾಜ್ಯದ ವಿದ್ಯಾರ್ಥಿ ನವೀನ್‌ ಮೃತಪಟ್ಟಿರುವುದು ಅತ್ಯಂತ ದುಃಖಕರ. ಅವರ ಕುಟುಂಬಕ್ಕೆ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ನಮ್ಮ ನಾಯಕರು ಸಾಂತ್ವನ ಹೇಳಿದ್ದಾರೆ. ಸಚಿವರು ಮನೆಗೆ ಭೇಟಿ ನೀಡಿದ್ದಾರೆ. ಮೃತದೇಹವನ್ನು ತರುವ ವಿಚಾರದಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.

ಶಿಕ್ಷಣಕ್ಕೆ ವ್ಯವಸ್ಥೆ ಮಾಡಿ
ವೈದ್ಯಕೀಯ ಶಿಕ್ಷಣ ಅಪೂರ್ಣ ಗೊಳಿಸಿ ಬರುತ್ತಿರುವ ವಿದ್ಯಾರ್ಥಿಗಳು ಭಾರತದಲ್ಲಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಹೆತ್ತವರು ಸಂಸದರಿಗೆ ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಜಗದೀಶ್‌ ಶೇಣವ, ವಿಜಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ತುರ್ತು ಸ್ಪಂದನೆ: ಕಾಮತ್‌
ಕೇಂದ್ರ ಸರಕಾರ ಕೈಗೊಂಡ ತುರ್ತು ಕ್ರಮಗಳಿಂದಾಗಿ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪಲಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್‌ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲರ ಜತೆಗೆ ಜಿಲ್ಲಾಡಳಿತ ಮತ್ತು ನಾನು ಕೂಡ ಸಂಪರ್ಕದಲ್ಲಿದ್ದೇನೆ. ವಿಳಂಬವಿಲ್ಲದೆ ಸ್ಪಂದಿಸಲಾಗುತ್ತಿದೆ ಎಂದರು.

ಆಗಮನದ ನಿರೀಕ್ಷೆಯಲ್ಲಿ ಉಡುಪಿ ವಿದ್ಯಾರ್ಥಿಗಳು
ಉಡುಪಿ: ಉಕ್ರೇನ್‌ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಆಗಮನದ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ.

ಗ್ಲೆನ್‌ವಿಲ್‌ ಫೆರ್ನಾಂಡಿಸ್‌ ಮತ್ತು ಅನಿಲ್ಫೆಡ್‌ ರಿಡ್ಲಿ ಡಿ’ಸೋಜಾ ಅವರು ಖಾರ್ಕಿವ್‌ ರೈಲು ನಿಲ್ದಾಣ, ನಿಯಾಮ್‌ ರಾಘವೇಂದ್ರ ಅವರು ಬುಕಾರೆಸ್ಟ್‌ಗಳಲ್ಲಿ ನೆಲೆಸಿದ್ದಾರೆ. ರೋಹನ್‌ ಧನಂಜಯ್‌ ಬಗ್ಲಿ ಅವರು ಪೋಲಂಡ್‌ ತಲುಪಿದ್ದಾರೆ. ಅಂಕಿತಾ ಪೂಜಾರಿ ಅವರು ಲೈಇವೈಗೆ ಹೋದ ಬಗ್ಗೆ ಮಾಹಿತಿ ಲಭಿಸಿದೆ.

ಭಾರತಕ್ಕೆ ಬುಧವಾರ ಬಂದಿರವ ವಿಮಾನದಲ್ಲಿ ಉಡುಪಿಯ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ವಿದ್ಯಾರ್ಥಿಗಳ ಮನೆಗೆ ಜಿಲ್ಲಾಡಳಿತದಿಂದ ಭೇಟಿ ನೀಡಲಾಗುತ್ತಿದೆ. ತಹಶೀಲ್ದಾರರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಸಮಾಧಾನ ಹೇಳುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next