Advertisement

ಖಾಜಪ್ಪ ಮದಾಳೆ ಅವರಿಗೆ ಎಂ.ಫಿಲ್‌ ಪದವಿ

04:34 PM Mar 24, 2017 | Team Udayavani |

ಮುಂಬಯಿ:  ಖಾಜಪ್ಪ ಮದಾಳೆ ಅವರು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ಬರೆದು ಸಲ್ಲಿಸಿದ “ಎಂ. ಬಿ. ಕುಕ್ಯಾನರ ಜೀವನ ಸಾಧನೆ’ ಎಂಬ ಸಂಪ್ರಬಂಧವನ್ನು ಮನ್ನಿಸಿ ಮುಂಬಯಿ ವಿಶ್ವವಿದ್ಯಾಲಯ ಅವರಿಗೆ ಎಂ.ಫಿಲ್‌. ಪದವಿಯನ್ನು ನೀಡಿ ಗೌರವಿಸಿದೆ.

Advertisement

ಮದಾಳೆ ಅವರು ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಈ ಸಂಪ್ರಬಂಧವನ್ನು ಸಿದ್ಧ ಪಡಿಸಿದ್ದರು. 

ಮೂಲತಃ ಸೊಲ್ಲಾಪುರ ಜಿಲ್ಲೆಯ ಅಕ್ಕಲ್‌ಕೋಟೆ ತಾಲೂಕಿನ ಹೈದ್ರಾ ಗ್ರಾಮದ ಖಾಜಪ್ಪ ಮದಾಳೆ ಅವರು ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಮುಗಿಸಿ, ಬಿ.ಎ.ಪದವಿಯನ್ನು ಅಕ್ಕಲ್‌ಕೋಟೆ ತಾಲೂಕಿನ ಸಿ. ಬಿ. ಬ್ಯಾಡಗಿ ಜ್ಯೂನಿಯರ್‌ ಕಾಲೇಜಿನಿಂದ ಮತ್ತು ಕನ್ನಡ ಎಂ.ಎ. ಪದವಿಯನ್ನು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಸದ್ಯ ಅವರು ಬೃಹನ್ಮುಂಬಯಿ ಮಹಾನಗರಪಾಲಿಕೆಯ ಸಂತ ಕಕ್ಕಯ್ಯ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next