Advertisement

ಬಿಜೆಪಿ ಫ್ಲೆಕ್ಸ್‌ ಬ್ಯಾನರ್‌ಗಳಲ್ಲಿ ಸಂಸದೆ ಸುಮಲತಾ ಭಾವಚಿತ್ರ!

09:32 PM Dec 29, 2022 | Team Udayavani |

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸುತ್ತಿರುವ ಹಿನ್ನೆಲೆ ನಗರದೆಲ್ಲೆಡೆ ಹಾಕಲಾಗಿರುವ ಕೆಲವು ಫ್ಲೆಕ್ಸ್‌ಗಳಲ್ಲಿ ಬಿಜೆಪಿ ನಾಯಕರ ಜತೆ ಸಂಸದೆ ಸುಮಲತಾ ಅಂಬರೀಷ್‌ ಅವರ ಭಾವಚಿತ್ರವನ್ನು ಹಾಕಲಾಗಿದೆ.

Advertisement

ಈಗಾಗಲೇ ಸುಮಲತಾ  ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಈಗ ಫ್ಲೆಕ್ಸ್‌ಗಳಲ್ಲಿ ಭಾವಚಿತ್ರ ಹಾಕಿರುವುದಕ್ಕೆ ಯಾವುದೇ ವಿರೋಧವೂ ಇಲ್ಲವಾಗಿದ್ದು, ಪಕ್ಷ ಸೇರ್ಪಡೆ ವಿಚಾರಕ್ಕೆ ಪುಷ್ಠಿ ನೀಡಿದಂತಾಗಿದೆ.

ಫ್ಲೆಕ್ಸ್‌ಗೆ ಸುಮಲತಾ ವಿರೋಧವಿಲ್ಲ: ಸಂಸದೆ ಸುಮಲತಾ ಅವರು ಮಾನಸಿಕವಾಗಿ ಬಿಜೆಪಿ  ಜತೆಗಿದ್ದಾರೆ ಎಂದೆನಿಸುತ್ತಿದೆ. ಫ್ಲೆಕ್ಸ್‌ ಹಾಕಿದಾಗ ಅವರು ವಿರೋಧವೇನೂ ಮಾಡಿಲ್ಲ. ಪಕ್ಷದ ವರಿಷ್ಠರು ಸುಮಲತಾರ ಜತೆ ಮಾತನಾಡುತ್ತಿದ್ದಾರೆ. ಆದರೆ, ಗುರುವಾರ ಯಾವ ನಾಯಕರ ಪಕ್ಷ ಸೇರ್ಪಡೆಯೂ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next