Advertisement

ಮೂರು ರಾಜ್ಯಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲನ ಎನ್‌ಕೌಂಟರ್‌

09:42 PM Dec 18, 2022 | Team Udayavani |

ಬಾಲಾಘಾಟ್ : ತನ್ನ ತಲೆಯ ಮೇಲೆ 12 ಲಕ್ಷ ರೂಪಾಯಿ ಇನಾಮು ಹೊತ್ತಿದ್ದ ಮತ್ತು ಕನಿಷ್ಠ ಮೂರು ರಾಜ್ಯಗಳಲ್ಲಿ ಬೇಕಾಗಿದ್ದ ನಕ್ಸಲ್ ಒಬ್ಬನನ್ನು ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಅರಣ್ಯದಲ್ಲಿ ಪೊಲೀಸರು ಭಾನುವಾರ ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ನಕ್ಸಲೀಯರು ಇರುವ ಬಗ್ಗೆ ಸುಳಿವಿನ ಮೇರೆಗೆ ಬೆಳಗ್ಗೆ ರೂಪ್‌ಜರ್ ಪೊಲೀಸ್ ಠಾಣಾ ವ್ಯಾಪ್ತಿಯ ಹರಟೋಲಾ ಅರಣ್ಯದಲ್ಲಿ ಹಾಕ್ ಫೋರ್ಸ್ ಸಿಬಂದಿ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸಂಜಯ್ ತಿಳಿಸಿದ್ದಾರೆ.

ನಕ್ಸಲೀಯರನ್ನು ಶರಣಾಗುವಂತೆ ಕೇಳಲಾಯಿತು ಆದರೆ ಅವರು ಗುಂಡು ಹಾರಿಸಿದ್ದು, ಚಕಮಕಿ ನಡೆದಿದೆ ಎಂದು ಅವರು ಹೇಳಿದರು.

ಎನ್‌ಕೌಂಟರ್‌ ಆದ ನಕ್ಸಲೀಯನನ್ನು ಭೋರಮ್‌ದೇವ್ ದಲಂ ಸದಸ್ಯ ರೂಪೇಶ್ ಅಕಾ ಹೂಂಗಾ ಎಂದು ಗುರುತಿಸಲಾಗಿದೆ. ಆತನ ತಲೆಯ ಮೇಲೆ 12 ಲಕ್ಷ ರೂಪಾಯಿ ಇನಾಮು ಇದ್ದು, ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದ ಪೊಲೀಸರಿಗೆ ಬೇಕಾಗಿದ್ದ ಎಂದು ಸಿಂಗ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next