Advertisement
ಕುಂಚಾವರಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕುಂಚಾವರಂ ಗ್ರಾಮ ತೆಲಂಗಾಣ ಮತ್ತು ಆಂಧ್ರಕ್ಕೆ ಹೊಂದಿಕೊಂಡು ಇರುವುದರಿಂದ ಇಲ್ಲಿನ ಜನರು ತೆಲಗು ಭಾಷೆ ಆಡುತ್ತಾರೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸುವ ಯೋಜನೆಗಳ ಬಗ್ಗೆ ಇಲ್ಲಿನ ಜನರಿಗೆ ಅರಿವಿಲ್ಲ. ಕಾರಣ ಇಲ್ಲಿಯೇ ಗ್ರಾಮ ವಾಸ್ತವ್ಯ ನಡೆಸಿ, ಜನರಿಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ನಿರ್ಧರಿಸಿದ್ದೇನೆ. ಕುಂಚಾವರಂ ಗಡಿಯಲ್ಲಿ ಅರಣ್ಯಪ್ರದೇಶ ಸುತ್ತಲಿನ ಪರಿಸರವು ನನಗೆ ಮೆಚ್ಚುಗೆಯಾಗಿದೆ ಎಂದರು.
Related Articles
Advertisement
ಈ ಹಿಂದೆ ಆಂಧ್ರ-ಕರ್ನಾಟಕ ಜಿಲ್ಲಾಧಿಕಾರಿಗಳು ಜಂಟಿ ಸರ್ವೇ ಮಾಡಿದ್ದರೂ ನಮ್ಮ ರೈತರಿಗೆ ಜಮೀನು ಬಿಟ್ಟು ಕೊಡುತ್ತಿಲ್ಲ. ಜಮೀನು ದಾಖಲೆಗಳಿವೆ. ಆದರೆ ಜಮೀನು ನಮ್ಮ ಸ್ವಾ ಧೀನದಲ್ಲಿ ಇಲ್ಲವೆಂದು ಸಂಸದರು ಜಿಲ್ಲಾಧಿ ಕಾರಿಗಳ ಗಮನಕ್ಕೆ ತಂದರು.
ಈ ಹಿಂದೆ ಚಿಂಚೋಳಿ ಮತಕ್ಷೇತ್ರದ ಶಾಸಕನಾಗಿದ್ದಾಗ ಕೈಗಾರಿಕೆ ತರಬೇತಿ ಕೇಂದ್ರ ಮಂಜೂರಾತಿಗೊಳಿಸಿದ್ದೇನೆ. ರಾಜ್ಯದಲ್ಲಿಯೇ 25 ಸಾವಿರ ಮನೆಗಳನ್ನು ಬಡವರಿಗೆ ಕೊಡಿಸಿದ್ದೇನೆ. ಕುಂಚಾವರಂ ವಲಯದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ, ಪಂಗಡ ಜನರಿದ್ದಾರೆ. ಆದರೆ ಜನಗಣತಿಯಲ್ಲಿ ಜನಸಂಖ್ಯೆ ಕಡಿಮೆ ಇದೆ ಎನ್ನಲಾಗುತ್ತಿದೆ. ಈ ಭಾಗದಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳು ಪ್ರಾರಂಭ
ಆಗಬೇಕಾಗಿದೆ. ಇಲ್ಲಿನ ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಅವಕಾಶ ಕಲ್ಪಿಸಬೇಕು. ಅಲ್ಲದೇ ಬಡವರಿಗೆ ಸರ್ಕಾರದ ಸೌಲಭ್ಯ ದೊರೆಯಲು ಈಗಾಗಲೇ 25 ಸಾವಿರ ವಸತಿ ರಹಿತ ಮತ್ತು ನಿವೇಶನ ರಹಿತರು ಎಂದು ಸಮೀಕ್ಷೆ ಮಾಡಲಾಗಿದೆ. ಜಿಲ್ಲಾಧಿ ಕಾರಿಗಳು ಶಾದೀಪುರ, ವೆಂಕಟಾಪುರ, ಕುಂಚಾವರಂ, ಮಿರಿಯಾಣ ಗಡಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಹೇಳಿದರು.
ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಗ್ರಾಪಂ ಅಧ್ಯಕ್ಷೆ ಸುಜಾತಾ ರಮೇಶ ಸಂಕಟಿ, ಉಪಾಧ್ಯಕ್ಷೆ ಪುಷ್ಪಾ ವೆಂಕಟ, ಸಿಪಿಐ ಮಹಾಂತೇಶ ಪಾಟೀಲ, ತಾಪಂ ಅ ಧಿಕಾರಿ ಅನಿಲ ರಾಠೊಡ, ಪಿಡಿಒ ತುಕ್ಕಪ್ಪ ಇದ್ದರು. ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು, ವೆಂಕಟೇಶ ದುಗ್ಗನ ವಂದಿಸಿದರು.