Advertisement

ಸಚಿವ ಮುನಿರತ್ನ ಭ್ರಮೆಯಿಂದ ಆಚೆ ಬರಲಿ

02:22 PM Apr 11, 2023 | Team Udayavani |

ರಾಮನಗರ: ನಾನು ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿ ದ್ದೇನೆ. ಒಬ್ಬೊಬ್ಬರು ಒಂದೊಂದು ದೃಷ್ಟಿಯಿಂದ ನೋಡು ತ್ತಾರೆ. ನನಗೆ ಯಾರ ಮೇಲೆಯೂ ವೈಯಕ್ತಿಕವಾಗಿ ಏನೂ ಇಲ್ಲ, ಪಕ್ಷದ ಪರವಾಗಿ ಕೆಲಸ ಮಾಡ್ತೇನೆ. ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಬಗ್ಗೆ ಗಮನಹರಿಸಿದ್ದೀನಿ ಅಷ್ಟೆ. ಆದರೆ, ಸಚಿವ ಮುನಿರತ್ನ ಅವರಿಗೆ ಏನಾಗಿದೆಯೋ ನನಗೆ ಗೊತ್ತಿಲ್ಲ. ಅವರು ಭ್ರಮೆಯಲ್ಲಿದ್ದಾರೆ. ಭ್ರಮೆಯಿಂದ ಆಚೆ ಬಂದರೆ ಎಲ್ಲಾ ಸರಿ ಹೋಗುತ್ತೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

Advertisement

ನಗರದಲ್ಲಿ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ್ದ ವೇಳೆ ನನ್ನನ್ನೇ ಟಾರ್ಗೆಟ್‌ ಮಾಡ್ತಿದ್ದಾರೆ ಎಂಬ ಸಚಿವ ಮುನಿರತ್ನ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಅದರಿಂದ ನನಗೇನೂ ಆಗಬೇಕಿಲ್ಲ. ನನ್ನ ಸಂಸತ್‌ ಸದಸ್ಯ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡ್ತೇನೆ. ನನಗೆ ನನ್ನ ಪಕ್ಷ ವಹಿಸಿದ ಜವಾಬ್ದಾರಿ ನಿಭಾಯಿಸುವುದಷ್ಟೆ ಕೆಲಸ. ಆದರೆ ಅವರಿಗೆ ಯಾಕೆ ಅಳಕು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸ್ಥಳೀಯರ ಅಭಿ ಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ಕಳುಹಿಸಿ ದ್ದೇವೆ. ಇನ್ನೆರಡು ದಿನದಲ್ಲಿ ಅಭ್ಯರ್ಥಿ ಆಯ್ಕೆ ಫೈನಲ್‌ ಆಗಲಿದೆ. ಕಾರ್ಯ ಕರ್ತರ ಒತ್ತಾಸೆ ಅಭಿಪ್ರಾಯವೇ ಅಂತಿಮವಾಗಿದ್ದು, ಹೈಕಮಾಂಡ್‌ ಅಭ್ಯರ್ಥಿ ಘೋಷಣೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲೂ ವಿಶೇಷ ಗಮನಹರಿಸಿದ್ದೇನೆ. ಡಿ.ಕೆ. ಶಿವಕುಮಾರ್‌ 224 ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿ ದ್ದಾರೆ. ಕೆಲವೊಂದು ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಇದೆ. ಹಾಗಾಗಿ, ಕೆಲವು ಕಡೆ ತಡವಾಗಬಹುದು ಎಂದರು.

ಚನ್ನಪಟ್ಟಣಕ್ಕೆ ಸ್ಥಳೀಯರೇ ಕಾಂಗ್ರೆಸ್‌ ಅಭ್ಯರ್ಥಿ : ಕಾಂಗ್ರೆಸ್‌ನಿಂದ 15ಕ್ಕೂ ಹೆಚ್ಚು ಮಂದಿ ಜೆಡಿಎಸ್‌ಗೆ ಬರ್ತಾರೆ ಎಂಬ ಎಚಿxಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ಹೋಗಬಹುದು, ಇಲ್ಲ ಅನ್ನೋಕೆ ಆಗಲ್ಲ. ಕುಮಾರಸ್ವಾಮಿ ಅವರಷ್ಟು ನನಗೆ ತಿಳಿವಳಿಕೆ ಇಲ್ಲ ಎಂದಷ್ಟೇ ಕುಟುಕಿದ ಅವರು, ಚನ್ನಪಟ್ಟಣದಲ್ಲಿ ಅಚ್ಚರಿ ಅಭ್ಯರ್ಥಿ ಸ್ಪರ್ಧೆ ಎನ್ನುವ ಮಾತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಅಚ್ಚರಿ ಅಭ್ಯರ್ಥಿ ಸ್ಪರ್ಧೆ ಮಾಡಲ್ಲ, ನಮ್ಮ ಜಿಲ್ಲೆಯ, ಅದೇ ತಾಲೂಕಿನವರು ಸ್ಪರ್ಧೆ ಮಾಡ್ತಾರೆ. ಕಳೆದ ಚುನಾವಣೆ ಬೇರೆ, ಈ ಚುನಾವಣೆ ಬೇರೆ. ನಮ್ಮ ಪಕ್ಷ ಚನ್ನಪಟ್ಟಣದಲ್ಲಿ ಸದೃಢವಾಗಿದೆ ಎನ್ನುವ ಮೂಲಕ ಸ್ಥಳೀಯರೇ ಅಭ್ಯರ್ಥಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ಘೋಷಿಸಿದರು.

ಕಾಂಗ್ರೆಸ್‌ಗೆ ಖರ್ಗೆನೇ ಸುಪ್ರೀಂ: ಸಂಸದ ಸುರೇಶ್‌ : ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಏಕೆ ಬರಬಾರದು. ಹಾಗಂತ ಎಲ್ಲಾದ್ರೂ ಇದೆಯಾ. ಈ ಬಗ್ಗೆ ಈಗಾಗಲೇ ಡಿಕೆಶಿವಕುಮಾರ್‌ ಮಾತನಾ ಡಿದ್ದಾರೆ. ಖರ್ಗೆ ಅವರು ನಮ್ಮ ಪಕ್ಷದ ಅಗ್ರ ನಾ ಯಕರು, ಅವರೇ ನಮಗೆ ಸುಪ್ರೀಂ. ಅವರ ಆದೇಶ ಪಾಲನೆ ಮಾಡುವುದು ನನ್ನ ಮತ್ತು ಡಿ.ಕೆ.ಶಿವಕುಮಾರ್‌ ಕರ್ತವ್ಯ. ನಾವು ಅವರ ಆದೇಶ ಪಾಲನೆ ಮಾಡ್ತೇವೆ. ಅಷ್ಟೇ ಅಲ್ಲದೆ ರಾಜ್ಯದ ಎಲ್ಲಾ ನಾಯಕರು ಅವರ ಆದೇಶ ಪಾಲಿಸಬೇಕು. ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಸಂಸದ ಸುರೇಶ್‌ ಜಾಣ್ಮೆ ಉತ್ತರ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next