Advertisement
ಸಂಕಲ್ಪ ಹಾಗೂ ರಾಣಿ ಪರಿಹಾರ್ ದಂಪತಿ ತಮ್ಮ ತೋಟದಲ್ಲಿ ಮಿಯಾಜಾಕಿ ತಳಿಯ ಅಪರೂಪದ ಮಾವಿನ ಕಾಯಿ ಬೆಳೆದಿದ್ದಾರೆ. ಇವರು ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ತೋಟದಲ್ಲಿ ಎರಡು ಸಸಿಗಳನ್ನು ನೆಟ್ಟಿದ್ದರು. ಅವುಗಳು ಇದೀಗ ಫಲ ಕೊಡುತ್ತಿದ್ದು, ಕಳ್ಳರಿಂದ ರಕ್ಷಣೆ ಮಾಡುವುದಕ್ಕಾಗಿ ಆರು ಜನ ಕಾವಲುಗಾರರನ್ನು ಹಾಗೂ ನಾಲ್ಕು ನಾಯಿಗಳನ್ನು ನೇಮಿಸಿಕೊಂಡಿದ್ದಾರೆ.
Related Articles
Advertisement
ರೈತ ಸಂಕಲ್ಪ ಅವರು ಚೆನ್ನೈನಲ್ಲಿ ಈ ಮಾವಿನ ಸಸಿಗಳನ್ನು ತಂದು ತಮ್ಮ ಹೊಲದಲ್ಲಿ ನೆಟ್ಟಿದ್ದರು. ಮೊದಲಿಗೆ ಈ ಮಾವಿನ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಕಳೆದ ವರ್ಷ ಗಿಡದಲ್ಲಿ ಕಾಯಿ ಬಿಟ್ಟಾಗ ಆಶ್ಚರ್ಯಪಟ್ಟಿದ್ದರು. ಈ ವಿಭಿನ್ನ ತಳಿಯ ಮಾವಿನ ಕಾಯಿಯ ಹೆಸರು ಕೂಡ ಗೊತ್ತಿರಲಿಲ್ಲ. ತಾವೇ ದಿಮಿನಿ ಎಂದು ನಾಮಕರಣ ಮಾಡಿದ್ದರು. ನಂತರ ಈ ಬಗ್ಗೆ ಸಂಶೋಧನೆ ನಡೆಸಿ ಇದರ ನಿಜವಾದ ಹೆಸರು ಕಂಡುಕೊಂಡರು.
ಈ ಬಗ್ಗೆ ಮಾತನಾಡುವ ಸಂಕಲ್ಪ, ಮೊದಲಿಗೆ ಈ ಮಾವಿನ ಬಗ್ಗೆ ಗೊತ್ತಿರಲಿಲ್ಲ. ಆದರೆ, ಇದೀಗ ಇದು ಅಪರೂಪದ ತಳಿ ಎಂದು ಗೊತ್ತಾಗಿದೆ. ಕಳೆದ ವರ್ಷ ಸ್ಥಳೀಯರು ನಮ್ಮ ತೋಟಕ್ಕೆ ನುಗ್ಗಿ ಈ ಮಾವಿನ ಕಾಯಿ ಕಳ್ಳತನ ಮಾಡಿದ್ದರು. ಆದ್ದರಿಂದ ಈ ಬಾರಿ ಕಾವಲುಗಾರರನ್ನು ನೇಮಿಸಿದ್ದೇನೆ. ನಾವು ಹೇಳಿದ ಬೆಲೆಗೆ ಈ ಕಾಯಿಗಳನ್ನು ಕೊಂಡುಕೊಳ್ಳಲು ಹಲವರು ಮುಂದೆ ಬಂದಿದ್ದಾರೆ. ನಾವು ಈ ಹಣ್ಣುಗಳಿಂದ ಮತ್ತಷ್ಟು ಸಸಿಗಳನ್ನು ಮಾಡುವ ಉದ್ದೇಶ ಹೊಂದಿದ್ದು, ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.
ಇನ್ನು ಈ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಧ್ಯಪ್ರದೇಶ ತೋಟಗಾರಿಕೆ ವಿಭಾಗದ ಜಂಟಿ ನಿರ್ದೇಶಕ ಆರ್.ಎಸ್., “ಇದು ದುಬಾರಿ ಹಣ್ಣ. ಏಕೆಂದರೆ ಅದರ ಉತ್ಪಾದನೆಯು ತುಂಬಾ ಕಡಿಮೆ. ಈ ಹಣ್ಣಿನ ರುಚಿ ತುಂಬಾ ಸಿಹಿಯಾಗಿರುತ್ತದೆ. ಇದು ನೋಡಲು ತುಂಬಾ ವಿಭಿನ್ನವಾಗಿ ಕಾಣುತ್ತದೆ. ವಿದೇಶದಲ್ಲಿ ಜನರು ಈ ಮಾವಿನಹಣ್ಣನ್ನು ಉಡುಗೊರೆಯಾಗಿ ನೀಡುತ್ತಾರೆ. ” ಈ ಹಣ್ಣನ್ನು ರೈತರಲ್ಲಿ ಪ್ರಚಾರ ಮಾಡುವ ಮೊದಲು ಮತ್ತೊಮ್ಮೆ ಪರಿಶೀಲಿಸುತ್ತೇವೆ ಎಂದಿದ್ದಾರೆ.