ಭೋಪಾಲ್ : ಮಳೆ, ಬಿರುಗಾಳಿ, ಗುಡುಗು, ಮಿಂಚು, ಸಿಡಿಲಿನ ದಾಳಿಗೆ ಗುಜರಾತ್‌ನಲ್ಲಿ ಕಳೆದೆರಡು ದಿನಗಳಲ್ಲಿ ಉಂಟಾಗಿರುವ ಜೀವ ಹಾನಿ, ಸೊತ್ತು ನಾಶ, ನಷ್ಟಕ್ಕೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಧ್ಯ ಪ್ರದೇಶದ ಸಿಎಂ ಕಮಲ್ ನಾಥ್ ಅವರು, “ನೀವು ಗುಜರಾತ್‌ನ ಪ್ರಧಾನ ಮಂತ್ರಿಯಾ ಅಥವಾ ಇಡಿಯ ದೇಶದ ಪ್ರಧಾನಿಯಾ ?’ ಎಂದು ಪ್ರಶ್ನಿಸಿದ್ದಾರೆ.
ಗುಜರಾತ್ ಮಾತ್ರವಲ್ಲದೆ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ನಿನ್ನೆ ಮಂಗಳವಾರ ಸಂಭವಿಸಿದ್ದ ಅಕಾಲಿಕ ಮಳೆ-ಬಿರುಗಾಳಿ-ಗುಡುಗು-ಸಿಡಿಲಿನ ಪ್ರಕೋಪಕ್ಕೆ (ನಾಲ್ಕು ರಾಜ್ಯಗಳಲ್ಲಿ ಒಟ್ಟು 34) ಜೀವಹಾನಿ, ಸೊತ್ತು ನಾಶ ನಷ್ಟ ಉಂಟಾಗಿರುವುಕ್ಕೆ ದುಃಖ ವ್ಯಕ್ತಪಡಿಸದೆ ಕೇವಲ ಗುಜರಾತ್ ಬಗ್ಗೆ ಮಾತ್ರವೇ ನೋವು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೇವಲ ಗುಜರಾತ್‌ನ ಪ್ರಧಾನಿಯಾ ಎಂದು ತಮ್ಮ ಟ್ವೀಟ್ ನಲ್ಲಿ ಪ್ರಶ್ನಿಸಿದರು.
ಗುಜರಾತ್‌ನಲ್ಲಿ ಈ ನೈಸರ್ಗಿಕ ಪ್ರಕೋಪಕ್ಕೆ ಬಲಿಯಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪ್ರಕಟಿಸಿರುವ ಮೋದಿ ಇತರ ಮೂರು ರಾಜ್ಯಗಳ ಸಂತ್ರಸ್ತರ ಬಗ್ಗೆ ಏಕೆ ಮೌನ ವಹಿಸಿದ್ದಾರೆ ಎಂದು ಕಮಲ್ ನಾಥ್ ಪ್ರಶ್ನಿಸಿದರು.
ಗುಜರಾತ್‌ನಲ್ಲಿ ಮಳೆ ಸಂಬಂಧಿ ದುರಂತದಲ್ಲಿ ಗಾಯಗೊಂಡಿರುವವರ ಚಿಕಿತ್ಸೆಗಂದು ಪ್ರಧಾನಿ ಮೋದಿ ತಲಾ 50,000 ರೂ. ಪ್ರಕಟಿಸಿದ್ದಾರೆ. ಇದನ್ನು ಪಿಎಂಓ ಟ್ವೀಟ್ ಮಾಡಿದೆ ಎಂದವರು ಹೇಳಿದರು.
ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಾಗಿರುವ ಮಳೆ ಸಂಬಂಧಿ ದುರಂತಗಳಿಗೆ ಕನಿಷ್ಠ 34 ಮಂದಿ ಮಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.