Advertisement

ಫೇಲ್‌ ಆದ ಮಗನಿಗೆ ಸಮ್ಮಾನ!

06:45 AM May 17, 2018 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಸಾಗರ್‌ ಪಟ್ಟಣದಲ್ಲಿ 10ನೇ ತರಗತಿಯಲ್ಲಿ ಸಂಸದರೊಬ್ಬರ ಮಗ 4 ವಿಷಯಗಳಲ್ಲಿ ಅನುತ್ತೀರ್ಣನಾದ. ಈ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಊರಿಗೆಲ್ಲಾ ಸಿಹಿ ಹಂಚಿ, ಆತನಿಗೆ ಅದ್ದೂರಿ ಮೆರವಣಿಗೆ ಮಾಡಿ ಜನರನ್ನು ಚಕಿತಗೊಳಿಸಿದ್ದಾರೆ. 

Advertisement

ಕಳೆದ ಸೋಮವಾರ ಮಧ್ಯಪ್ರದೇಶದ ರಾಜ್ಯ ಪಠ್ಯದ 10ನೇ ತರಗತಿ ಪರೀಕ್ಷೆಯ ಫ‌ಲಿತಾಂಶ ಹೊರಬಿದ್ದಿತ್ತು. ಈ ವಿಚಿತ್ರವಾದ ಸಂಭ್ರಮಾಚರಣೆಗೆ ಕಾರಣ, ಪರೀಕ್ಷೆ ಫ‌ಲಿತಾಂಶವನ್ನು ತಮ್ಮ ಮಗ ಸೋಲು ಎಂದು ಪರಿಗಣಿಸದೇ ಇರಲಿ ಎಂದು. ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದನ್ನು ಈ ಸಣ್ಣ ವಯಸ್ಸಿನಲ್ಲಿ ಆತ ಗಂಭೀರವಾಗಿ ತೆಗೆದುಕೊಳ್ಳಬಾರದು. ಇದು ಆತ ಬದುಕಿನಲ್ಲಿ ಎದುರಿಸಿದ ಕಡೆಯ ಪರೀಕ್ಷೆಯಲ್ಲ. ಮೂರ್ಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಕುರಿತು ಆತ ಯೋಚಿಸುವುದು ನಮಗೆ ಬೇಕಾಗಿಲ್ಲ ಎಂದು ಬಾಲಕನ ಕುಟುಂಬ ಸದಸ್ಯರು ಹೇಳಿದ್ದಾರೆ. 

ಯಾವುದಾದರೂ ಒಂದು ಕ್ಷೇತ್ರದಲ್ಲಿ ಸೋಲನ್ನಪ್ಪಿದರೆ ಹತಾಶರಾಗಬೇಕಿಲ್ಲ. ಮತ್ತೂಂದು ಮಾರ್ಗ ಯಾವಾಗಲೂ ನಿಮಗಾಗಿ ತೆರೆದಿರುತ್ತದೆ ಎಂದು ನಾನು ಈ ಮೂಲಕ ಎಲ್ಲರಿಗೂ ತಿಳಿಸುತ್ತೇನೆ ಎಂದು ಬಾಲಕನ ತಂದೆ ಸುರೇಂದ್ರ ತಿಳಿಸಿದ್ದಾರೆ. ಅಂದಹಾಗೆ, ನಾನು ವಿದ್ಯಾಭ್ಯಾಸ ಮುಂದು ವರಿಸುವುದಿಲ್ಲ. ತಂದೆಯ ಸಾರಿಗೆ ವ್ಯಾಪಾರವನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಬಾಲಕ ಹೇಳಿದ್ದಾನೆ. ಪರೀಕ್ಷೆ ಫ‌ಲಿತಾಂಶ ಹೊರಬೀಳುತ್ತಿದ್ದಂತೆ ಮಧ್ಯಪ್ರದೇಶದಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆ ಪೈಕಿ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next