Advertisement

ಸಲಗರ ವಿಜಯ ತಡೆಯಲು ಸಾಧ್ಯವಿಲ್ಲ: ಖೂಬಾ

08:31 PM Mar 28, 2021 | Team Udayavani |

ಬಸವಕಲ್ಯಾಣ: ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ವಿಜಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

Advertisement

ನಗರದ ಶರಣು ಸಲಗರ ನಿವಾಸದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಅಭ್ಯರ್ಥಿ ಆಯ್ಕೆ ಮಾಡುವಾಗ ಪಕ್ಷದ ಮಾನದಂಡ ಮತ್ತು ಅಭಿಪ್ರಾಯ ಸಂಗ್ರಹದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದರಿಂದ ಆಕಾಂಕ್ಷಿಗಳ ಮನಸ್ಸಿನಲ್ಲಿ ವೈಮನಸ್ಸು ಉಂಟಾಗಿರುವುದು ಸಹಜವಾದರೂ, ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು. ಜೆಡಿಎಸ್‌ ನಮಗಿಂತ ಐದು ದಿನ ಮುಂಚಿತವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡಿ, ತಮ್ಮ ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಸಲು ಬಂದಾಗ ಎಚ್‌.ಡಿ. ಕುಮಾರಸ್ವಾಮಿ ಘನತೆಗೆ ತಕ್ಕಂತೆ ಮಾತನಾಡಿಲ್ಲ. ಭಾರಿ ಮೊತ್ತದ ಹಣ ಪಡೆದು ಟಿಕೆಟ್‌ ನೀಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರ. ಬದಲಾಗಿ ಜೆಡಿಎಸ್‌ ಪಕ್ಷದಲ್ಲಿ ಹಣ ಪಡೆದುಕೊಂಡು ಟಿಕೆಟ್‌ ನೀಡುವ ಸಂಸ್ಕೃತಿ ಇದೆ ಎಂದು ಆರೋಪಿಸಿದರು.

ಸ್ಥಳೀಯರಿಗೆ ಟಿಕೆಟ್‌ ಸಿಕ್ಕಿಲ್ಲ ಎಂದು ನಗರದ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಯಾರೂ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿ ಕಾರಿಗಳಲ್ಲ ಎಂಬುವುದು ಪಕ್ಷದ ನಾಯಕರು ಗಮನಿಸಿದ್ದಾರೆ ಹಾಗೂ ಇದೇ ಸಂದರ್ಭದಲ್ಲಿ ಯುವಕರು ಬಿಜೆಪಿ ಪಕ್ಷಕ್ಕೆ ಮತದಾನ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿರುವುದಕ್ಕೆ ಖಂಡಿಸಿದರು. ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮಾತನಾಡಿ, ನಮ್ಮ ಕುಟುಂಬದಲ್ಲಿ ಯಾರು ಗ್ರಾಪಂ ಸದಸ್ಯ ಆಗಿರುವ ಉದಾಹಣೆ ಇಲ್ಲ. ಆದರೂ ಉಪ ಚುನಾವಣೆಗೆ ನನ್ನನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿರುವುದು ನನ್ನ ಪುಣ್ಯ. ಆದರೆ ಕೆಲವರು ಹಣ ಕೊಟ್ಟು ಟಿಕೆಟ್‌ ತಂದಿದ್ದಾನೆ ಎಂದು ಆರೋಪಗಳು ಕೇಳಿ ಬರುತ್ತಿವೆ. ನಾನು ಯಾರಿಗೂ ಹಣ ಕೊಟ್ಟು ಟಿಕೆಟ್‌ ತಂದಿಲ್ಲ. ಒಂದು ವೇಳೆ ತಂದಿದ್ದರೆ ನನ್ನ ಕುಟುಂಬ ಮಾರಿಕೊಂಡಂತೆ ಎಂದು ಭಾವುಕರಾದರು.

ಶಿವಾನಂದ ಮಂಠಾಳಕರ್‌, ಈಶ್ವರಸಿಂಗ್‌ ಠಾಕೂರ್‌, ದೀಪಕ ಗಾಯಕವಾಡ, ಮಲ್ಲಿಕಾರ್ಜುನ ಕುಂಬಾರ, ಡಾ| ಸಿದ್ದು ಪಾಟೀಲ, ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಕೃಷ್ಣ ಗೋಣೆ, ರಾಜಕುಮಾರ ಸಿರಗಾಪುರ, ಜಗನ್ನಾಥ ಪಾಟೀಲ ಮಂಠಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next