Advertisement
ಟ್ರೈಲರ್ ಬಿಡುಗಡೆಯಾದಾಗ ಅತಿ ಹೆಚ್ಚು ವಿಕ್ಷಣೆಯೊಂದಿಗೆ ದಾಖಲೆ ನಿರ್ಮಿಸಿದ ಈ ಚಲನಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದ್ದದ್ದು ನಿಜ. ನಿರೀಕ್ಷೆಯನ್ನು ಹುಸಿ ಮಾಡದೆ “ದಿಲ್ ಬೆಚಾರಾ’ ಮನಸೂರೆಗೊಂಡಿದೆ.
Related Articles
ಕ್ಯಾನ್ಸರ್‌ಗೆ ತುತ್ತಾಗಿ ಹೆಗಲಲ್ಲಿ ಆಮ್ಲ ಜನಕದ ಸಿಲಿಂಡರ್ ಇಟ್ಟುಕೊಂಡು ಮೂಗಿಗೆ ಪೈಪುಗಳನ್ನು ಸಿಕ್ಕಿಸಿಕೊಂಡಿರುವ ಕಿಝಿ ಬಸುರವರ ಮುಗ್ಧ ಪ್ರೀತಿಯ ಕಥೆ ಹಂದರದ ಸಿನೆಮಾವೇ “ದಿಲ್ ಬೆಚಾರಾ’.
Advertisement
ಕಾಯಿಲೆಯಿದ್ದರೂ ಉತ್ಸಾಹದ ಬುಗ್ಗೆಯಂತಿರುವ ಮ್ಯಾನಿ, ಕಿಝಿಯನ್ನು ಕೂಡ ಆಶಾವಾದಿಯನ್ನಾಗಿ ಬದಲಾಯಿಸುತ್ತಾನೆ. ಮತ್ತೂರ್ವ ಕ್ಯಾನ್ಸರ್ ಪೀಡಿತ ಗೆಳೆಯ ಜೆ.ಪಿ.ಗಾಗಿ ಸಿನೆಮಾವೊಂದರಲ್ಲಿ ನಟಿಸುವ ಮ್ಯಾನಿ, ಕಿಝಿ ಸಿನಿಮಾದ್ದುದ್ದಕ್ಕೂ ನಗುವಿನ ಹೂರಣವನ್ನು ತಂದಿಡುತ್ತಾರೆ. ತಲೈವಾ ರಜನೀಕಾಂತ್ ಅವರ ಅಭಿಮಾನಿಯಾದ ಮ್ಯಾನಿ, ಸಿಂಗರ್ ಅಭಿಮನ್ಯು ವೀರ್‌ನ ಅಭಿಮಾನಿಯಾದ ಕಿಝಿ, ರಜನೀಕಾಂತ್ ಪಾತ್ರ ಸಿನಿಮಾದಲ್ಲಿ ಇದೆ ಎನ್ನುವ ಕಲ್ಪನೆ ಮೂಡಿಸುತ್ತಾರೆ.
ಕಿಝಿಗಾಗಿ ಅವಳ ತಾಯಿಯೊಂದಿಗೆ ಪ್ಯಾರಿಸ್ ಪ್ರಯಾಣ ಬೆಳೆಸುವ ಮ್ಯಾನಿ. ಅಲ್ಲಿ ಕಿಝಿಯ ನೆಚ್ಚಿನ ಗಾಯಕ ಅಭಿಮನ್ಯು ವೀರ್‌ನನ್ನು ಭೇಟಿ ಮಾಡಿಸುತ್ತಾನೆ. ಸಣ್ಣ ಪಾತ್ರವಾದ ಅಭಿಮನ್ಯು ವೀರ್‌ನ ಪಾತ್ರವನ್ನು ಜೀವ ತುಂಬುವಂತೆ ಸೈಫ್ ಅಲಿಖಾನ್ ನಟಿಸಿದ್ದಾರೆ. ಅಭಿಮನ್ಯು ವೀರ್ ಅಪೂರ್ಣ ಮಾಡಿದ್ದ ಹಾಡನ್ನು ತಾನು ಪೂರ್ಣಗೊಳಿಸುವುದಾಗಿ ಮ್ಯಾನಿ ಕಿಝಿಗೆ ಮಾತು ಕೊಡುತ್ತಾನೆ. ಜವಾಬ್ದಾರಿಯುತ ತಂದೆ-ತಾಯಿಯರು ಹೇಗಿರುತ್ತಾರೆ ಎಂಬುವುದನ್ನು ಕಿಝಿಯ ತಂದೆ- ತಾಯಿಯ ಪಾತ್ರವೂ ಸಿನಿಮಾದಲ್ಲಿ ಚಿತ್ರಿಸಿದೆ.
ಕಿಝಿಯ ಜೀವನದಲ್ಲಿ ಭರವಸೆ ತುಂಬುವ ಮ್ಯಾನಿ ತಾನು ಸಾಯುವ ಹಂತ ತಲುಪುವಾಗ, ತಾನು ಅಗಲಿದ ಅನಂತರ ತನ್ನ ಗೆಳೆಯರು ತನ್ನ ಬಗ್ಗೆ ಯಾವ ಮಾತುಗಳನ್ನು ಆಡುತ್ತಾರೆ ಎಂದು ಮೊದಲೇ ಕೇಳುತ್ತಾನೆ. ಜೆ.ಪಿ. ಯು ತನ್ನ ಕಣ್ಣುಗಳನ್ನು ಕಳೆದುಕೊಂಡ ನಂತರ ಕಿಝಿಯ ಪ್ರೋತ್ಸಾಹದಿಂದ ಪೂರ್ಣಗೊಳ್ಳುವ ಸಿನೆಮಾ ಮ್ಯಾನಿಯ ನಿಧನ ಅನಂತರ ಬಿಡುಗಡೆ ಯಾಗುತ್ತದೆ. ವಿಷಾದವೆನ್ನುವಂತೆ ದಿಲ್ ಬೆಚಾರಾ’ ಚಲನಚಿತ್ರವೂ ಕೂಡ ಸುಶಾಂತ್ ಸಿಂಗ್ ಅವರು ಆಗಲಿದ ಅನಂತರವೇ ಬಿಡುಗಡೆಯಾಗಿದೆ.
ಸುಶಾಂತ್ ಸಿಂಗ್ ಅಭಿನಯದ ಈ ಕೊನೆಯ ಚಿತ್ರ ಮರೆಯಾದ ಅದ್ಭುತ ನಟನನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುವುದು ಸತ್ಯ. ಸುಶಾಂತ್ ಇನ್ನಿಲ್ಲ ಎನ್ನುವ ಕಾರಣದಿಂದಲೋ ಏನೋ ಬಹಳಷ್ಟು ಪ್ರಸಿದ್ಧಿ ಪಡೆದ ದಿಲ್ ಬೆಚಾರಾ’ ಒಂದು ಉತ್ತಮ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ.