ಚಿತ್ರ:ನಾರ್ತ್ ಆಫ್ ದಿ ಸನ್(2012)
ನಿರ್ದೇಶನ: ಇಂಗ್ ವೆಗ್ಗ್ ಮತ್ತು ಜಾರ್ನ್ ರ್ಯಾನಮ್
ಅವಧಿ: 47
Advertisement
‘ನಾರ್ತ್ ಆಫ್ ದಿ ಸನ್’! ಬರೋಬ್ಬರಿ 9 ತಿಂಗಳ ಸರ್ಫಿಂಗ್ ಯಾನದ ಡಾಕ್ಯುಮೆಂಟರಿ ಸಿನಿಮಾ ಇದು. ಸಾವಿಗೆ ಚಾಲೆಂಜ್ ಹಾಕಿದ ಇಬ್ಬರು ಯುವಕರ ಕತೆ. ಈಗಷ್ಟೇ ಮೀಸೆ ಚಿಗುರಿದ ವಯಸ್ಸಿನಲ್ಲಿ ಇಂಗ್ ವೆಗ್ಗ್ ಮತ್ತು ಜಾರ್ನ್ ರ್ಯಾನಮ್, ಆರ್ಕ್ಟಿಕ್ ನ ಅಂಗಳದಲ್ಲಿದ್ದರು. ಅಟ್ಲಾಂಟಿಕ್ ಸಾಗರದ ತುತ್ತ ತುದಿಯಲ್ಲಿ, ನೀರಿನಲ್ಲಿ ಜೀಕುತ್ತಾ, ಹಿಮಬಂಡೆಗಳಿಗೆ ಡಿಕ್ಕಿ ಹೊಡೆದು, ಸಮುದ್ರದ ಆಳ ನೋಡುವ ಪ್ರಸಂಗ ಎದುರಾದರೂ, ಅವರಿಬ್ಬರು ಸರ್ಫಿಂಗ್ ಯಾನವನ್ನು ಕೈಬಿಡುವುದಿಲ್ಲ. ತಂದ ಆಹಾರಗಳ ಅವಧಿ ಮುಗಿದರೂ, ಗತಿಯಿಲ್ಲದೇ ಅದನ್ನೇ ಸೇವಿಸಿ, ಪ್ರಾಣ ಉಳಿಸಿಕೊಳ್ಳುತ್ತಾರೆ. ನಿತ್ಯವೂ ಸೂರ್ಯ ಹುಟ್ಟೋದನ್ನು ನೋಡಬೇಕೆಂದು ಅವರು ಹಂಬಲಿಸುತ್ತಾರಾದರೂ, ಒಂದೂ ದಿನವೂ ಆತ ಕಾಣಿಸುವುದಿಲ್ಲ. ಅಷ್ಟು ಹಿಮಚ್ಛಾದಿತ ವಾತಾವರಣ. ಕೊನೆಗೂ ಒಂದು ಬೇಸಿಗೆಯಲ್ಲಿ, ಸೂರ್ಯನ ಬೆಳಕು ಆರ್ಕ್ಟಿಕ್‌ನ ಅಂಗಳಕ್ಕೆ ಬೀಳುತ್ತೆ. ಇಂಗ್ ಮತ್ತು ಜಾರ್ನ್ನ ಮೊಗದಲ್ಲೂ ನಗು ಮೂಡುತ್ತದೆ.