Advertisement
ಊರು ಬಿಟ್ಟು ಸಾಗುವ ಪಯಣದ ಹಾದಿಯೇ ಅಧ್ಯಾಯ-2. ಅಲ್ಲಿ ರಾಮನಿಗೆ ಸಿಗುವ ಹೀರೋಯಿನ್, ವಿಲ್ಲನ್, ಎಲ್ಲವೂ ರಾಮಾಯಣದ ಪರಿಕಲ್ಪನೆಯಡಿಯಲ್ಲಿ ಆಧುನಿಕವಾಗಿ ಹಾಸ್ಯಭರಿತವಾಗಿ ಸಾಗುತ್ತದೆ. ಇದು ರಿಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ರಾಮನ ಅವತಾರ’ ಸಿನೆಮಾ.
Related Articles
Advertisement
ಅರುಣ್ ಸಾಗರ್ ಅವರ ನಟನಾ ಚಾತುರ್ಯ ಎಂದಿನಂತೆ ಹೊಸದೇನಲ್ಲ. ಆದರೂ ಅವರ ಮಂಗಳೂರು ಭಾಷೆ ಉಚ್ಚಾರಣೆ ಅಬ್ಟಾ ಅನ್ನಿಸುವುದರಲ್ಲಿ ಮತ್ತೂಂದು ಮಾತಿಲ್ಲ. ಕರಾವಳಿಯ ಸೊಬಗನ್ನು ಕೆಮರಾದಲ್ಲಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರು ಗೆದ್ದಿದ್ದಾರೆ.
ಹುಡುಗಿಯರ ಕಿಡ್ನಾಪ್ ದಂದೆ, ಮಾದಕ ವಸ್ತುವಿನ ದುಷ್ಪರಿಣಾಮಗಳು ಎಲ್ಲವೂ ಚಿತ್ರದಲ್ಲಿ ಸಮಾಜಕ್ಕೆ ದೊರಕುವ ಉತ್ತಮ ಸಂದೇಶ. ಕ್ಲೆçಮ್ಯಾಕ್ಸ್‌ನಲ್ಲಿ ಲಾಜಿಕ್ ಹುಡುಕಿದರೆ ಬೇಸರವಾಗಬಹುದು.. ಅದನ್ನು ಹೊರತುಪಡಿಸಿ ಹಾಸ್ಯಕ್ಕೆ, ಮನರಂಜನೆಗೆ ಕಿಂಚಿತ್ತೂ ಮೋಸವಿಲ್ಲ. ಪೈಸಾ ವಸೂಲ್ ಚಿತ್ರ ಎಂದರೆ ತಪ್ಪಾಗದು.
ಇನ್ನು ಹಳ್ಳಿ ಉದ್ಧಾರ ಮಾಡುವುದಾಗಿ ಪಣ ತೊಟ್ಟ ರಾಮ ಹಳ್ಳಿ ಬಿಡುವುದು ಯಾಕೆ? ಸೀತೆಯ ಅಪಹರಣ ಮಾಡುವುದು ಯಾಕೆ? ಈ ಆಧುನಿಕ ರಾಮಾಯಣದಲ್ಲಿ ವಾನರ ಸೇನೆ ಎಲ್ಲಿದೆ? ರಾಮ ತನ್ನ ಬದುಕಿನಲ್ಲಿ ಗೆಲ್ಲುವನೇ, ರಾವಣನ ವಧೆ ಆಗುವುದೇ? ಹಾಗೂ ಈ ಕಥೆಯಲ್ಲಿ ಲಕ್ಷ್ಮಣ ಯಾರು? ಎಂಬುದಕ್ಕೆ ಉತ್ತರ ತಿಳಿದುಕೊಳ್ಳಲು ನೀವು ಸಿನೆಮಾ ನೋಡಲೇಬೇಕು.
ಒಟ್ಟಾರೆ ಇದೊಂದು ವಿಭಿನ್ನ ಪ್ರಯತ್ನ, ಹೊಸ ರೀತಿಯ ಫ್ರೆಶ್ ಕಾನ್ಸೆಪ್ಟ್. ಜನರನ್ನು ಒಂದು ಇಂಚು ಆಚೆ ಇಚೆ ಅಲ್ಲಾಡದಂತೆ ಚಿತ್ರ ಬಂಧಿ ಮಾಡಿ ಕೊನೆಯ ತನಕ ಕಥಾ ಲೋಕದಲ್ಲಿ ಮುಳುಗಿಸುತ್ತದ್ದೆ.
ವಿಕಾಸ್ ಪಂಪಾಪತಿ ಅವರ ನಿರ್ದೇಶನ ನಿಜಕ್ಕೂ ಅದ್ಭುತ. ಸ್ಟೋರಿ ಲೈನ್ ಹೊಸ ತಂತ್ರಜ್ಞಾನದ ಬಳಕೆ, ಕಲರ್ ಗ್ರೇಡಿಂಗ್ ಐಡಿಯಾ ತುಂಬಾ ಹೊಸತೆನಿಸುತ್ತದೆ. ಲಾಜಿಕ್ ಹಾಗೂ ಪದ್ಯದ ಮೇಲೆ ಇನ್ನಷ್ಟು ಗಮನ ಕೊಟ್ಟಿದ್ದರೆ ಕಥೆ ಮತ್ತಷ್ಟು ಚೂಪಾಗಿ ಕಂಡು ಬರುತ್ತಿತ್ತು. ಆದರೆ ಆಕ್ಷನ್, ಹಾಸ್ಯ, ಪ್ರೀತಿ, ಎಮೋಷನ್‌ಗೆ ಯಾವುದೇ ರೀತಿಯ ಕೊರತೆ ಇಲ್ಲ.
-ರಕ್ಷಿತ್ ಆರ್.ಪಿ.
ಹೆಬ್ರಿ