Advertisement

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

01:43 AM Sep 17, 2024 | Team Udayavani |

ಮಂಗಳೂರು: ಫೀನಿಕ್ಸ್‌ ಫಿಲಂಸ್‌ ಬ್ಯಾನರ್‌ನಡಿಯಲ್ಲಿ ಮಹೇಂದ್ರ ಕುಮಾರ್‌ ನಿರ್ಮಾಣದಲ್ಲಿ ಹಾಗೂ ಗೌರಿ ಶ್ರೀನಿವಾಸ ನಿರ್ದೇಶನದಲ್ಲಿ ತಯಾರಾದ “ದಿ ಜರ್ನಿ ಆಫ್‌ ಬೆಳ್ಳಿ’ ಕನ್ನಡ ಸಿನೆಮಾ ಶುಕ್ರವಾರ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಸಿನೆಮಾವು ದಕ್ಷಿಣ ಕನ್ನಡ, ಉಡುಪಿ ಹಾಗೂ ಪಿರಿಯಾಪಟ್ಟಣದಲ್ಲಿ ತೆರೆಕಂಡಿದೆ. ಮಂಗಳೂರಿನ ಭಾರತ್‌ ಮಾಲ್‌ನ ಭಾರತ್‌ ಸಿನಿಮಾಸ್‌ನಲ್ಲಿ ಚಿತ್ರ ಬಿಡುಗಡೆ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿದ್ದ ದ.ಕ ಸಂಸದ ಕ್ಯಾ|ಬ್ರಿಜೇಶ್‌ ಚೌಟ ಮಾತನಾಡಿ, ಸೈನಿಕರ ಮಕ್ಕಳ ಜೀವನದಲ್ಲಿ ನಡೆಯುವ ಪ್ರಸಂಗಗಳು ಚಲನಚಿತ್ರದಲ್ಲಿ ಮೂಡಿ ಬರುವುದು ಅಪರೂಪ. ಈ ಚಿತ್ರವು ಯಶಸ್ವಿಯಾಗಲಿದೆ ಎಂದು ಶುಭ ಹಾರೈಸಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸೈನಿಕ ಹಾಗೂ ಅವರ ಮಕ್ಕಳ ನಡುವಿನ ಸಂಬಂಧವನ್ನು ಈ ಚಿತ್ರದಲ್ಲಿ ತೋರಿಸಿದ್ದು ಮೆಚ್ಚತಕ್ಕ ಸಂಗತಿ ಎಂದರು. ಈ ಚಿತ್ರವನ್ನು ಮಕ್ಕಳು ಸಹಿತ ಇಡೀ ಬಂದು ನೋಡಿ ಬೆಂಬಲಿಸಬೇಕು ಎಂದು ಸ್ಪೀಕರ್‌ ಯು.ಟಿ ಖಾದರ್‌ ಹೇಳಿದರು. ನಿರ್ಮಾಪಕ ಮಹೇಂದ್ರಕುಮಾರ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮಾಜಿ ಮೇಯರ್‌ ಶಶಿಧರ್‌ ಹಗ್ಡೆ, ರಾಜ್‌ಗೊàಪಾಲ್‌ ರೈ, ಅಮರನಾಥ ರೈ, ನಟ ನವೀನ ಬೋಂದೆಲ್‌, ಕಾರ್ಪೊರೇಟರ್‌ ಶಂಸುದ್ದೀನ್‌, ಧನುಷ್‌ ರೈ, ಸಚಿನ್‌ ರೈ ಉಪಸ್ಥಿತರಿದ್ದರು.

ಯೋಧ, ಪುತ್ರಿಯ ಮನೋಜ್ಞ ಚಿತ್ರಣ
ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡಬಹುದಾದ ಈ ಚಿತ್ರ ಭಾರತೀಯ ಯೋಧನೊಬ್ಬನ ಕುಟುಂಬದ ಚಿತ್ರಣವನ್ನು ಸುಂದರವಾಗಿ ಮೂಡಿಸಿದೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ತಂದೆ ಹಾಗೂ ಆತನ ಪುಟ್ಟ ಮುಗ್ಧ ಮಗಳ ನಡುವಿನ ಬಾಂಧವ್ಯ ಮತ್ತು ಸೂಕ್ಷ್ಮ ಸಂವೇದನೆಗಳ ಚಿತ್ರಣ ಸೊಗಸಾಗಿ ಮೂಡಿಬಂದಿದೆ. ಯೋಧನೊಬ್ಬನ ಜೀವನದ ವಿವಿಧ ಆಯಾಮಗಳನ್ನು 9 ವರ್ಷದ ಮುಗ್ಧ ಮಗಳ ತೊಳಲಾಟ ಹಾಗೂ ಭಾವನೆಗಳ ಮೂಲಕ ಸುಂದರವಾಗಿ ತೆರೆದಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next