Advertisement

ಬಾಲಿವುಡ್‌,ಟಾಲಿವುಡ್‌ ಸಿನಿಮಾದ ಮುಂದೆ ಮುಗ್ಗರಿಸದ ಹಾಲಿವುಡ್:‌ 2ನೇ ವಾರವೂ ಕಲೆಕ್ಷನ್‌ ಜೋರು

05:19 PM Jul 31, 2023 | Team Udayavani |

ಮುಂಬಯಿ: ಇತ್ತೀಚೆಗಿನ ದಿನಗಳಲ್ಲಿ ಹಾಲಿವುಡ್‌ ಸಿನಿಮಾಗಳನ್ನು ನೋಡುವ ಭಾರತೀಯ ಪ್ರೇಕ್ಷಕರು ಹೆಚ್ಚಾಗಿದ್ದಾರೆ. ಭಾರತದ ಬಾಕ್ಸ್‌ ಆಫೀಸ್‌ ನಲ್ಲಿ ವಿದೇಶಿ ಸಿನಿಮಾಗಳ ಹವಾ ಜೋರಾಗಿದೆ.

Advertisement

ಕಳೆದ ವಾರ ಬಾಲಿವುಡ್‌ ನಲ್ಲಿ ರಣವೀರ್‌ – ಆಲಿಯಾ ಅಭಿನಯದ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ರಿಲೀಸ್‌ ಆಗಿದೆ. ಬಾಲಿವುಡ್‌ ಮಟ್ಟಿಗೆ ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಜೊತೆಗೆ, ಕಲೆಕ್ಷನ್‌ ಎರಡರಲ್ಲೂ ಸದ್ದು ಮಾಡಿದೆ.

ಇತ್ತ ದಕ್ಷಿಣಕ್ಕೆ ಬಂದರೆ ಪವನ್‌ ಕಲ್ಯಾಣ್‌, ಸಾಯಿ ಧರಮ್ ತೇಜ್ ಅಭಿನಯದ ʼಬ್ರೊʼ: ದಿ ಅವತಾರ್‌ʼ ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಸಿನಿಮಾ 100 ಕೋಟಿ ಗಳಿಸುವ ಸಮೀಪಕ್ಕೆ ಬಂದಿದೆ.

ಈ ಎರಡೂ ಸಿನಿಮಾದ ಅಬ್ಬರದ ನಡುವೆಯೂ ಇತ್ತೀಚೆಗೆ ತೆರೆಕಂಡ ಹಾಲಿವುಡ್‌ ನ ಎರಡು ಸಿನಿಮಾಗಳು ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ತನ್ನ ಕಲೆಕ್ಷನ್‌ ವಿಚಾರದಲ್ಲಿ ಕೂಡ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: ರಜಿನಿ ‘ಜೈಲರ್’ ಗೆ ಸೆಡ್ಡು ಹೊಡೆದ ‘ತೋತಾಪುರಿ- 2’

Advertisement

ಕ್ರಿಸ್ಟೋಫರ್ ನೋಲನ್ ಅವರ ʼ ಓಪನ್‌ಹೈಮರ್ʼ ಹಾಗೂ ಮಾರ್ಗಾಟ್ ರಾಬಿ ಮತ್ತು ರಯಾನ್ ಗೊಸ್ಲಿಂಗ್ ಅಭಿನಯದ ʼಬಾರ್ಬಿʼ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎರಡು ವಾರ ಕಳೆಯುತ್ತ ಬಂದರೂ ಮುಂದುವರೆದಿದೆ.

ಕ್ರಿಸ್ಟೋಫರ್ ನೋಲನ್ ಅವರ ʼ ಓಪನ್‌ಹೈಮರ್ʼ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. 10 ದಿನದ ಬಳಿಕ ಸಿನಿಮಾ 91.50 ಕೋಟಿ ರೂ. ಕಮಾಯಿ ಮಾಡಿದೆ. ಒಂದೆರೆಡು ದಿನದಲ್ಲಿ 100 ಕೋಟಿ ಕ್ಲಬ್‌ ಸೇರುವ ಸಾಧ್ಯತೆಯಿದೆ. ಭಾರತದಲ್ಲಿ ಈ ವರ್ಷ “ಫಾಸ್ಟ್ ಎಕ್ಸ್” ಮತ್ತು “ಮಿಷನ್ ಇಂಪಾಸಿಬಲ್ 7” 100 ಕೋಟಿ ಕ್ಲಬ್‌ ಸೇರಿದ ಹಾಲಿವುಡ್‌ ಸಿನಿಮಾಗಳು.

ʼಓಪನ್‌ಹೈಮರ್ʼ 100 ಕೋಟಿ ಕ್ಲಬ್‌ ಸೇರುವುದು ಪಕ್ಕಾ ಆಗಿದೆ. ಇದರ ಜೊತೆಗೆ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಹಾಲಿವುಡ್‌ ಸಿನಿಮಾ ಎನ್ನುವ ಖ್ಯಾತಿಯನ್ನು ಸಿನಿಮಾಗಳಿಸುವ ಸಾಧ್ಯತೆಯಿದೆ.

ಇನ್ನು ʼಬಾರ್ಬಿʼ ಇದುವರೆಗೆ 32.75 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸಿನಿಮಾ 40 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಿನಿಮಾದ ಈ ಕಲೆಕ್ಷನ್‌ ಗಳು 800 – 850 ಸ್ಕ್ರೀನ್ ಗಳಲ್ಲಿ ಬರುತ್ತಿರುವುದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ.

ಇನ್ನು ಎರಡೂ ಸಿನಿಮಾಗಳು ಗ್ಲೋಬಲ್‌ ಬಾಕ್ಸ್‌ ಆಫೀಸ್‌ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ.

ʼಓಪನ್‌ಹೈಮರ್‌ʼ ನ ದಿನದ ಲೆಕ್ಕಚಾರ:   

ದಿನ 1 – 14.50 ಕೋಟಿ ರೂ.

2ನೇ ದಿನ – 17 ಕೋಟಿ ರೂ.

3ನೇ ದಿನ – 17 ಕೋಟಿ ರೂ.

4ನೇ ದಿನ – 6.75 ಕೋಟಿ ರೂ.

5ನೇ ದಿನ – 6.25 ಕೋಟಿ ರೂ.

6ನೇ ದಿನ – 5.75 ಕೋಟಿ ರೂ.

7ನೇ ದಿನ – 5.25 ಕೋಟಿ ರೂ.

8ನೇ ದಿನ – 4.40 ಕೋಟಿ ರೂ.

9ನೇ ದಿನ – 7 ಕೋಟಿ ರೂ.

10ನೇ ದಿನ – 7.40 ಕೋಟಿ ರೂ.

ಭಾರತದಲ್ಲಿ 10 ದಿನಗಳಲ್ಲಿ ಒಟ್ಟು ಗಳಿಕೆ: 91.50 ಕೋಟಿ ರೂ.

ʼಬಾರ್ಬಿʼಯ ದಿನದ ಲೆಕ್ಕಚಾರ:   

ದಿನ 1 – 4.40 ಕೋಟಿ ರೂ.

2ನೇ ದಿನ – 6 ಕೋಟಿ ರೂ.

3ನೇ ದಿನ – 6.70 ಕೋಟಿ ರೂ.

4ನೇ ದಿನ – 2.20 ಕೋಟಿ ರೂ.

5 ನೇ ದಿನ – 2.20 ಕೋಟಿ ರೂ.

6ನೇ ದಿನ – 2 ಕೋಟಿ ರೂ.

7ನೇ ದಿನ – 1.75 ಕೋಟಿ ರೂ.

8ನೇ ದಿನ – 1.50 ಕೋಟಿ ರೂ.

9ನೇ ದಿನ – 2.90 ಕೋಟಿ ರೂ.

10ನೇ ದಿನ – 3.10 ಕೋಟಿ ರೂ. 

ಭಾರತದಲ್ಲಿ 10 ದಿನಗಳಲ್ಲಿ ಒಟ್ಟು ಗಳಿಕೆ: 32.75 ಕೋಟಿ ರೂ.

 

Advertisement

Udayavani is now on Telegram. Click here to join our channel and stay updated with the latest news.

Next