Advertisement
ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಯುಡಿಐಡಿ (Unique Disability ID) ವಿಶೇಷ ಅಂಗವಿಕಲರ ಗುರುತಿನ ಚೀಟಿಯನ್ನು ಜಾರಿಗೊಳಿಸಿದೆ. ರಾಜ್ಯ ದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಈವರೆಗೆ ಯುಡಿ ಐಡಿ ಗುರುತುಚೀಟಿಯನ್ನು ಪಡೆದುಕೊಳ್ಳದ ಅಂಗವಿಕಲರು ಆಧಾರ್ ಕಾರ್ಡ್,2013ರ ಅನಂತರದ ಅಂಗವಿಕಲರ ಗುರುತಿನಚೀಟಿ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಸಂಬಂಧಪಟ್ಟ ಗ್ರಾ.ಪಂ.ಗೆ ಸಲ್ಲಿಸಬೇಕು. ಅಲ್ಲಿ ದಾಖಲೆ ಪತ್ರಗಳನ್ನು ನಿಗದಿತ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ ದಿನಾಂಕ ನಿಗದಿ ಪಡಿಸಿ ಅಂದು ಅಂಗವಿಕಲರು ಅಗತ್ಯ ದಾಖಲೆ ಗಳೊಂದಿಗೆ ಗ್ರಾ.ಪಂ.ಗೆ ಬರುವಂತೆ ತಿಳಿಸುವರು.ಬಳಿಕ ಎಲ್ಲ ದಾಖಲೆಗಳನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಒದಗಿಸಲಾಗುತ್ತದೆ. ಮುಂದಿನ ಹಂತದಲ್ಲಿ ಜಿ.ಪಂ. ಸಂಪೂರ್ಣ ದಾಖಲೆ ಪರಿಶೀಲಿಸಿ, ಹೈದರಾಬಾದ್ ಏಜೆನ್ಸಿಯಿಂದ ಮುದ್ರಿತ ಕಾರ್ಡ್ ಅಂಚೆ ಮೂಲಕ ಫಲಾನುಭವಿಯ ಕೈಸೇರಲಿದೆ. ಇದು ದೇಶಾದ್ಯಂತ ಇರುವ ವಿಕಲಾಂಗರಿಗೆ ಒಂದೇ ಮಾದರಿಯದಾಗಿರುತ್ತದೆ.
Related Articles
Advertisement
ಹಾಸಿಗೆ ಹಿಡಿದವರಿಗೆ ಸವಾಲುಸರಕಾರದ ಯೋಜನೆ ಅರ್ಹರಿಗೆ ತಲುಪುವನಿಟ್ಟಿನಲ್ಲಿ ವಿಶೇಷ ಕಾರ್ಡ್ ಉತ್ತಮ ಯೋಜನೆಯಾಗಿದೆ. ಆದರೆ ಈಗಾಗಲೇ ಅನೇಕ ಅಂಗವಿಕಲರು ಹಾಸಿಗೆ ಹಿಡಿದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಕಾರ್ಡ್ ಪಡೆಯುವುದು ಸವಾಲಾಗಿದೆ. ಪಡೆಯದಿದ್ದರೆ ಕಾಲಕ್ರಮೇಣ ಸರಕಾರದ ಯೋಜನೆಗಳು ಕೈತಪ್ಪುವ ಭೀತಿಯೂ ಇದೆ. ಹೀಗಾಗಿ ಅವರ ಸಹಿ ಅಥವಾ ಹೆಬ್ಬೆಟ್ಟನ್ನು ಪಡೆಯುವ ವಿಚಾರವಾಗಿಯೂ ಇಲಾಖೆ ಚಿಂತಿಸಿದೆ. ಆಧಾರ್‌ನಂತೆ ಯುಡಿ ಐಡಿ ಕಾರ್ಡ್ ಕೂಡ ಮಹತ್ವದ್ದಾಗಿದೆ. ಎಲ್ಲ ವಿಕಲಾಂಗರು ತ್ವರಿತಗತಿಯಲ್ಲಿ ಕಾರ್ಡ್ ಮಾಡಿಸಿಕೊಳ್ಳಲು ಮುಂದೆ ಬರಬೇಕು. ಈಗಾಗಲೇ ಜಿಲ್ಲೆಯಲ್ಲಿ 6,678 ಮಂದಿಗೆ ಕಾರ್ಡ್ ವಿತರಿಸಲಾಗಿದೆ. ಉಳಿದ 20 ಸಾವಿರ ಮಂದಿಗೆ ವಿತರಿಸಲು ಗ್ರಾ.ಪಂ. ಮಟ್ಟದಲ್ಲೀ ಆಂದೋಲನ ಹಮ್ಮಿಕೊಳ್ಳಲಾಗಿದೆ.
– ಗೋಪಾಲಕೃಷ್ಣ,
ದ.ಕ. ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ ಉಡುಪಿ ಜಿಲ್ಲೆಯಾದ್ಯಂತ ಆಂದೋಲನ ಯಶಸ್ವಿಯಾಗಿ ನಡೆಯುತ್ತಿದ್ದು ವಾರಕ್ಕೆ 2 ದಿನಗಳಂತೆ ವೈದ್ಯಕೀಯ ಮಂಡಳಿ ಸಹಭಾಗಿತ್ವದಲ್ಲಿ ವೈದ್ಯಕೀಯ ತಪಾಸಣೆಯೊಂದಿಗೆ ಯುಡಿಐಡಿ ಕಾರ್ಡ್ ನೀಡುವ ಪ್ರಕ್ರಿಯೆ ಕಾರ್ಯಗತವಾಗಿದೆ.
– ರತ್ನಾ ಸುವರ್ಣ, ಉಡುಪಿ
ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ -ಚೈತ್ರೇಶ್ ಇಳಂತಿಲ