Advertisement

ನೆಹರೂ ಮೈದಾನ ಬಳಿ ತಾತ್ಕಾಲಿಕ ಮಾರ್ಕೆಟ್‌ ನಿರ್ಮಾಣಕ್ಕೆ ಚಾಲನೆ

09:59 PM Apr 20, 2020 | Sriram |

ಮಂಗಳೂರು: ನಗರದ ಸೆಂಟ್ರಲ್‌ ಮಾರ್ಕೆಟ್‌ನ ರಿಟೇಲ್‌ ವ್ಯಾಪಾರಿಗಳಿಗೆ ವ್ಯವಹಾರ ನಡೆಸಲು ಅನುಕೂಲವಾಗುವಂತೆ ನೆಹರೂ ಮೈದಾನದ ಬಳಿ ತಾತ್ಕಾಲಿಕ ಮಾರ್ಕೆಟ್‌ ನಿರ್ಮಾಣ ಕಾಮಗಾರಿಗೆ ಸೋಮವಾರ ಸಂಸದ ನಳಿನ್‌ ಕುಮಾರ್‌ ಕಟೀಲು ಚಾಲನೆ ನೀಡಿದರು.

Advertisement

ಶಾಸಕ ಡಿ. ವೇದವ್ಯಾಸ ಕಾಮತ್‌, ಮೇಯರ್‌ ದಿವಾಕರ್‌ ಪಾಂಡೇಶ್ವರ, ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಕಾರ್ಪೊರೇಟರ್‌ ಜಗದೀಶ್‌ ಬೋಳೂರು, ಸ್ಮಾರ್ಟ್‌ ಸಿಟಿ ಯೋಜನ ನಿರ್ದೇಶಕ ಮೊಹಮದ್‌ ನಝೀರ್‌ ಉಪ ಸ್ಥಿತರಿದ್ದರು. ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡ ಶಿಥಿಲಗೊಂಡ ಕಾರಣ ಅದನ್ನು ಕೆಡವಿ 5 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸುಸಜ್ಜಿತ ಮಾರ್ಕೆಟ್‌ ಕಟ್ಟಡ ನಿರ್ಮಿಸಲಾಗುತ್ತಿದೆ.

ಸೆಂಟ್ರಲ್‌ ಮಾರ್ಕೆಟ್‌ನಲ್ಲಿ 317 ಮಂದಿ ರಿಟೇಲ್‌ ವ್ಯಾಪಾರಸ್ಥರಿದ್ದು, ಪ್ರಸ್ತುತ ಅವರಿಗಾಗಿ ನೆಹರೂ ಮೈದಾನದ ಬಳಿ 2.16 ಎಕರೆ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆನಿರ್ಮಾಣ ಮಾಡಲಾಗುತ್ತಿದೆ. 3 ತಿಂಗಳೊಳಗೆ ಕಟ್ಟಡ ಕಾಮಗಾರಿ ಮುಗಿಸಿ ಬಿಟ್ಟುಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮಳೆಗಾಲದಲ್ಲಿ ವ್ಯಾಪಾರಿಗಳಿಗೆ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದು ಸಂಸದ ತಿಳಿಸಿದರು.

ಸಗಟು ವ್ಯಾಪಾರಿಗಳಿಗೆ ಈಗಾಗಲೇ ಬೈಕಂಪಾಡಿಯಲ್ಲಿ ವ್ಯವಹಾರ ನಡೆಸಲು ವ್ಯವಸ್ಥೆ ಮಾಡಿ ಕೊಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next