ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
ಆಸ್ಪತ್ರೆಯ ಸಮೀಪದಲ್ಲಿರುವ ಉಪ ನೋಂದಣಿ ಕಚೇರಿ ಸ್ಥಳಾಂತರವಾದರೆ ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸಹಕಾರಿ ಆಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಸಹಾಯಕ ಕಮಿಷನರ್ ಅವರಿಂದ ಮಾಹಿತಿ ಪಡೆದ ಅವರು, ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಅಥವಾ ಸೂಕ್ತ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಎರಡು ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸರಕಾರಿ ಆಸ್ಪತ್ರೆಗೆ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಬಹುದು. ಮಿನಿ ವಿಧಾನ ಸೌಧದಲ್ಲಿ ಉಪನೋಂದಣಿ ಕಚೇರಿಗೆ ಕೊಠಡಿ ಇದ್ದು, ಈಗಿರುವ ಹಳೆ ಕಟ್ಟಡದ ಸ್ಥಳವನ್ನು ಸಾರ್ವಜನಿಕ ಆಸ್ಪತ್ರೆಯ ಉಪಯೋಗಕ್ಕೆ ಕಾದಿರಿಸಲು ಅಂದಿನ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದರು. ಆದರೆ ಜಿಲ್ಲಾಧಿಕಾರಿಗಳು ಆದೇಶಿಸಿದರೂ ಸ್ಥಳಾಂತರ ಮಾಡಿಲ್ಲ ಎಂದು ಗಮನ ಸೆಳೆದರು. ಸಹಾಯಕ ಕಮಿಷನರ್ ಡಾ| ರಘುನಂದನ್ ಮೂರ್ತಿ ಅವರಿಗೆ ಈ ಬಗ್ಗೆ ಸೂಚನೆ ನೀಡಿದ ಲೋಕಾಯುಕ್ತರು, ಜಿಲ್ಲಾ ನೋಂದಣಿ ಅಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರು ನೀಡಿದ ಸೂಚನೆಯ ಕುರಿತು ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಸ್ಥಳಾಂತರಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬಾರದು. ಸಮಸ್ಯೆ ಬಗೆಹರಿಯದಿದ್ದರೆ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಜಿಲ್ಲಾ ನೋಂದಣಿ ಅಧಿಕಾರಿಗೆ ಮಂಗಳೂರಿನಲ್ಲಿ ಭೇಟಿ ಮಾಡುವಂತೆ ತಿಳಿಸಲು ಲೋಕಾಯುಕ್ತ ಎಸ್ಪಿ ಜೆ.ಕೆ. ರಶ್ಮಿ ಅವರಿಗೆ ಲೋಕಾಯುಕ್ತರು ಸೂಚಿಸಿದರು
Related Articles
ಆಸ್ಪತ್ರೆಯ ಕೊಠಡಿ, ಆವರಣವನ್ನು ದಿನಂಪ್ರತಿ ಎಷ್ಟು ಬಾರಿ ಸ್ವಚ್ಛಗೊಳಿಸುತ್ತಿರಿ ಎಂದು ಲೋಕಾಯುಕ್ತರು ಪ್ರಶ್ನಿಸಿದರು. ಮೂರು ಬಾರಿ ಎಂದು ಸಿಬಂದಿ ಉತ್ತರಿಸಿದಾಗ, ಕೇವಲ ಕಡತದಲ್ಲಿ ಮಾತ್ರವೇ ಎಂದು ಮರು ಪ್ರಶ್ನಿಸಿದರು. ಆಸ್ಪತ್ರೆಯ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಸೂಚಿಸಿದರು.
Advertisement
ಆಹಾರದ ಬಗ್ಗೆ ಎಚ್ಚರಿಕೆಆಸ್ಪತ್ರೆಯ ಪಾಕಶಾಲೆ, ಸಾಮಗ್ರಿ ದಾಸ್ತಾನು ಕೊಠಡಿ ಪರಿಶೀಲಿಸಿದ ಲೋಕಾಯುಕ್ತರು, ನೆಲದಲ್ಲೇ ಇಟ್ಟಿದ್ದ ತರಕಾರಿಯನ್ನು ಕಂಡು, ಹೀಗೆ ಇಟ್ಟರೆ ಅದು ಹಾಳಾಗುವುದಿಲ್ಲವೇ? ಸರಿಯಾದ ಜಾಗದಲ್ಲಿ ಇರಿಸಬೇಕು. ಆಹಾರದ ತಯಾರಿ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದರು. ಹೂದೋಟ ನಿರ್ಮಿಸಿ
ಆಸ್ಪತ್ರೆಯ ಹಿಂಭಾಗದ ಖಾಲಿ ನಿವೇಶನದಲ್ಲಿ ಹೂದೋಟ ಮತ್ತು ರೋಗಿಗಳ ಸಹಾಯಕರಿಗೆ ಸಂಜೆ ಹೊತ್ತು ವಿರಮಿಸಲು ಆಸನಗಳ ವ್ಯವಸ್ಥೆ ಮಾಡುವಂತೆ ಲೋಕಾಯುಕ್ತರು ಸಲಹೆ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಧಿಕಾರಿ ಭರವಸೆ ನೀಡಿದರು. ಸಹಾಯಕ ಆಯುಕ್ತ ಡಾ| ರಘುನಂದನ್ ಮೂರ್ತಿ, ತಹಶೀಲ್ದಾರ್ ಅನಂತಶಂಕರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ಲೋಕಾಯುಕ್ತ ಜಿಲ್ಲಾ ಎಸ್ಪಿ ರಶ್ಮಿ, ಮಂಗಳೂರು ಲೋಕಾಯುಕ್ತ ಡಿವೈಎಸ್‌ಪಿ ಜಗದೀಶ, ಮಂಗಳೂರು ಲೋಕಾಯುಕ್ತ ಪೊಲೀಸ್ ಇನ್ ಸ್ಪೆಕ್ಟರ್‌ಗಳಾದ ವಿಜಯ ಪ್ರಸಾದ್, ವಿವೇಕಾನಂದ, ಸರಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಡಾ| ಆಶಾಜ್ಯೋತಿ ಉಪಸ್ಥಿತರಿದ್ದರು. ಹಾರಾಡಿ ವಿದ್ಯಾರ್ಥಿನಿಲಯ, ಮಿತ್ತೂರು ಅಂಗನವಾಡಿಗೆ ಭೇಟಿ
ಮಂಗಳೂರಿನಿಂದ ಆಗಮಿಸಿದ ಲೋಕಾಯುಕ್ತರು ಆರಂಭದಲ್ಲಿ ಮಿತ್ತೂರು ಅಂಗನವಾಡಿಗೆ ತೆರಳಿ ಪರಿಶೀಲನೆ ನಡೆಸಿದರು. ಅನಂತರ ಪುತ್ತೂರು ಆಸ್ಪತ್ರೆಗೆ ಆಗಮಿಸಿ, ಹಾರಾಡಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಬಗ್ಗೆ ಪ್ರಶ್ನಿಸಿದ ಅವರು, ಹಾಸ್ಟೆಲ್‌ನ ಪಾಕಶಾಲೆಯನ್ನು ಪರಿಶೀಲಿಸಿದರು. ಅನಂತರ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ತೆರಳಿದರು. ಚಪಲಿ ಕಳಚಿ ಒಳ ಪ್ರವೇಶಿಸಿ
ಲೋಕಾಯುಕ್ತರು ಒಳರೋಗಿ ವಿಭಾಗಕ್ಕೆ ತೆರಳುವ ಮೊದಲು ಶೂ ಕಳಚಿ ಒಳ ಪ್ರವೇಶಿಸಿದರು. ಆದರೆ ಇತರರು ಚಪ್ಪಲಿ ಸಹಿತ ಒಳ ಪ್ರವೇಶಿಸಿದ್ದನ್ನು ಕಂಡು, ‘ಸ್ವಚ್ಛತೆ ಬಗ್ಗೆ ಆದ್ಯತೆ ನೀಡುವವರೇ ಚಪ್ಪಲಿ ಧರಿಸಿ ಒಳ ಬಂದರೆ ಹೇಗೆ?’ ಎಂದರಲ್ಲದೆ, ಒಳರೋಗಿ ವಿಭಾಗದಲ್ಲಿ ರೋಗಿಗಳ ಸಹಾಯಕರು ಸೇರಿದಂತೆ ಯಾರೂ ಚಪ್ಪಲಿ ಧರಿಸಿ ಒಳಗೆ ಹೋಗಬಾರದು. ಈ ಕುರಿತು ವಾರ್ಡ್ ಬಾಗಿಲ ಬಳಿ ಫಲಕಗಳನ್ನು ಅಳವಡಿಸಿ ಎಂದರು.