Advertisement
ಬೆಳಗಿನ ಜಾವ 4.30ಕ್ಕೆ 8848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದಾಗ ಸೂರ್ಯೋದಯವಾಗುತ್ತಿತ್ತು. ಎತ್ತ ನೋಡಿದರೂ ಪರ್ವತ, ಶಿಖರದ ತುದಿಗಳೇ ಕಾಣುತ್ತಿವೆ. ಸ್ವರ್ಗ ಎಂದರೆ ಇದೇ ಏನೋ ಅನ್ನಿಸಿಬಿಡ್ತು. ಗುರಿ ಮುಟ್ಟುವವರೆಗೂ ಓಂ ನಮ: ಶಿವಾಯ, ಓಂ ನಮಃ ಶಿವಾಯ ಎಂದು ಮನಸ್ಸಿನಲ್ಲೇ ಗುನುಗಿಕೊಳ್ಳುತ್ತಿದ್ದೆ.
Related Articles
Advertisement
2011ರಲ್ಲಿ ಪಿಯುಸಿಯಲ್ಲಿದ್ದಾಗ ನಮಗೆ ಕನ್ನಡ ಉಪನ್ಯಾಸಕರಾಗಿದ್ದ ಷಡ ಕ್ಷರಿ ಮೇಷ್ಟ್ರು ಪಠ್ಯಕ್ರಮಕ್ಕಿಂತ ಹೊರಗಿನ ವಿಷಯಗಳನ್ನು ಹೆಚ್ಚಾಗಿ ಬೋಧನೆ ಮಾಡು ತ್ತಿ ದ್ದರು. ಆಗಲೇ ಅವರ ಬಳಿ ಮೌಂಟ್ ಎವರೆಸ್ಟ್ ಏರುವ ಇಚ್ಚೆ ವ್ಯಕ್ತ ಪಡಿಸಿದೆ. ಮೌಂಟ್ ಎವರೆಸ್ಟ್ ಹತ್ತುತ್ತಾನಂತೆ ಹೋಗೋ ಬೇರೆ ಕೆಲಸ ಇದ್ದರೆ ನೋಡು ಎಂದು ಹೇಳಿದ್ದರು. ಕಾಲೇಜಿನಲ್ಲಿ ಆರು ಜನರ ಬ್ಯಾಡ್ಮಿಂಟನ್ ತಂಡವಿತ್ತು. ತಂಡದವರು ರಾಜ್ಯ ಮಟ್ಟದ ಚಾಂಪಿಯನ್ಸ್ ಆಗಿದ್ದರು. ತಂಡದಲ್ಲಿದ್ದ ಗಿರೀಶ, ಚನ್ನೇಶ ನನ್ನ ಸ್ನೇಹಿತರೇ ಆದರೂ ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಇದು ನನ್ನಲ್ಲಿ ಏನಾದರೂ ಸಾಧನೆ ಮಾಡ ಬೇಕೆಂಬ ಛಲ ಹುಟ್ಟಿಸಿತು.
ಓದು ಮುಗಿದ ಮೇಲೆ ಧರ್ಮಸ್ಥಳದ ಕೆಎಸ್ಸಾರ್ಟಿಸಿ ಬಸ್ ಡಿಪೋ ದಲ್ಲಿ 2ವರ್ಷಗಳ ಕಾಲ ಭದ್ರತಾ ರಕ್ಷಕನಾಗಿ ಕೆಲಸ ಮಾಡಿದೆ, ನಂತರ 2015ರಲ್ಲಿ ಅರಣ್ಯ ಇಲಾಖೆ ಸೇರಿದೆ, 2016ರಲ್ಲಿ ಕುಂದಾ ಪುರ ವಿಭಾ ಗದ ಡಿಸಿ ಎಫ್ ಪ್ರಭಾಕರನ್ ಸರ್ ಅವರು ಮೌಂಟ್ ಎವ ರೆಸ್ಟ್ ಏರಿ ಬಂದ ನಂತರ ನನ್ನಲ್ಲಿಯೂ ಮೌಂಟ್ ಎವ ರೆಸ್ಟ್ ಏರುವ ಆಸೆ ಪ್ರಬಲವಾಯಿತು. ಅದಕ್ಕಾಗಿ ಅಗತ್ಯವಾದ ಬೇಸಿಕ್ ಕೋರ್ಸ್, ಅಡ್ವಾನ್ಸ್ ಕೋರ್ಸ್ ಎರಡರಲ್ಲೂ ಎ ಗ್ರೇಡ್ ನೊಂದಿಗೆ ಆಯ್ಕೆಯಾದೆ…
ಎವರೆಸ್ಟ್ ಏರುವ ಮುಂಚೆ ಹೈಕಿಂಗ್ ಮಾಡಿ ಸು ತ್ತಾರೆ. ನಾವು ಚೀನಾದ ನಾರ್ತ್ ರಿಟ್ಜ್ ಕಡೆ ಯಿಂದ ಕಠ್ಮಂಡು, ಲಾಸಾ, ಗ್ಯಾಂಗ್ ಸೇ ಮೂಲ ಕ ಎವ ರೆಸ್ಟ್ ಏರಲು ಮುಂದಾದೆವು. ಲಾಸಾ, ಭೂಮಟ್ಟದಿಂದ 3450 ಮೀಟರ್ ಎತ್ತ ರ ವಿದೆ, ನಂತರ 4 ಸಾವಿರ ಮೀಟರ್ ಎತ್ತ ರದ ಕ್ಸಿಗಾಜೆ, 4100 ಮೀಟರ್ ಎತ್ತರದ ಸಿಗಸ್ತೆ, 5500 ಮೀಟರ್ ಎತ್ತ ರದ ಟಿಂಗ್ರಿ ಮೂಲಕ ಎವರೆಸ್ಟ್ ಶಿಖ ರ ದತ್ತ ಹೊರ ಟೆವು. 5150 ಮೀಟರ್ ನಲ್ಲಿ ಬೇಸ್ ಕ್ಯಾಂಪ್ ಆರಂಭವಾಗುತ್ತದೆ. ಟಿಬೆ ಟಿನ ಕೊಮೋ ಲುಂಗ್ಮಾ ರಾಷ್ಟ್ರೀಯ ಉದ್ಯಾ ನ ವ ನದ ಕಡೆ ಯಿಂದಲೇ ಮೌಂಟ್ ಎವರೆಸ್ಟ್ ಕಾಣು ತ್ತದೆ. ಬೇಸ್ ಕ್ಯಾಂಪ್ ನಿಂದ ಶೆರ್ಫಾಗಳು ಗ್ಯಾಸ್ ಸಿಲಿಂಡರ್‌ಗಳನ್ನೆಲ್ಲಾ ಹೊತ್ತು ತರುತ್ತಾರೆ.
ನಾರ್ತ್ ಕೋಲಲ್ಲಿ ಕ್ಯಾಂಪ್-1ನಿಂದ ದಾಹ ವಾದಾಗ ಮಂಜುಗಡ್ಡೆ ಕರಗಿಸಿ ನೀರು ಕುಡಿಯುತ್ತಿದ್ದೆವು, ಬಿಸಿ ನೀರು, ಸೂಪ್, ಬಿಸ್ಕೆಟ್, ಚಾಕೊ ಲೇಟ್ ಇವೇ ನಮ್ಮ ಆಹಾರ. ನನಗೆ ಬೇಸ್ ಕ್ಯಾಂಪ್‌ನಲ್ಲೇ ರಕ್ತದ ಒತ್ತಡ ಏರಿ ಬಿಡುತ್ತಿತ್ತು. ಕ್ಯಾಂಪ್-1ನಿಂದ ಸಮ್ಮಿತ್‌ವ ರೆಗೆ ಮೈನಸ್ 35 ರಿಂದ 40 ಡಿಗ್ರಿ ಸೆಲ್ಸಿಯಸ್ ಇರುತ್ತೆ ಉಷ್ಣಾಂಶ, ಜೊತೆಗೆ ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗುತ್ತಿರುತ್ತೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ ಸೇರಿ ದಂತೆ ಭಾರತದ 25 ಮಂದಿ ಮೌಂಟ್ ಎವರೆಸ್ಟ್ ಏರಲು ಹೊರಟಿದ್ದೆವು. ಬೇಸ್ ಕ್ಯಾಂಪ್‌ವರೆಗೆ ವಾಹನ ಸೌಲ ಭ್ಯ ವಿದೆ. ಅಲ್ಲಿಂದ ಮುಂದೆ ಹಿಮ, ಕಲ್ಲುಬಂಡೆಗಳಿಂದ ಆವೃತ್ತವಾಗಿರುವ ಪ್ರದೇಶದಲ್ಲಿ ಮುನ್ನಡೆಯಬೇಕು.
ಅಲ್ಲೇ ಇಬ್ಬರು ಆಮ್ಲಜನಕ ಸಮಸ್ಯೆ, ಹೈಜಿನ್ ಸಮಸ್ಯೆಯಿಂದ ವಾಪಸ್ಸಾದರು.ನಾವು ಬೇಸ್ ಕ್ಯಾಂಪ್‌ನಲ್ಲಿ ಒಂದು ದಿನ ವಿಶ್ರಾಂತಿ ಪಡೆದು, ಒಂದು ದಿನ ಹೈಕಿಂಗ್, ಒಂದು ದಿನ ಗ್ಲೆಶೇ ರಿಂಗ್ ಮಾಡಿ ದೆವು, ನಂತರ ನಾಲ್ಕು ದಿನ ಹೈಕಿಂಗ್ ಮಾಡಿದೆವು, ರಂಗೂ ಗ್ಲೆಶೇರ್ ಪಾಯಿಂಟ್, 5700 ಮೀಟರ್ ಎತ್ತ ರದ ಪ್ರದೇಶದ ಇಂಟೆ ರಿಮ್ ನಲ್ಲಿ ಒಂದು ದಿನ ವಾಸ್ತವ್ಯ ಮಾಡಿ ದೆವು. 6350 ಮೀಟರ್ ಎತ್ತ ರದ ಪ್ರದೇಶದಲ್ಲಿ ಅಡ್ವಾನ್ಸ್ ಬೇಸ್ ಕ್ಯಾಂಪ್ ಇದೆ, ಅಲ್ಲಿ ವ ರೆಗೆ ಸ್ನೋ ಬೂಟ್ಸ್, ಟ್ರಕ್ಕಿಂಗ್ ಶೂ ನಲ್ಲೇ ಹೋಗಬಹುದು.
ಇಲ್ಲಿಂದ ಮುಂದೆ ಕ್ರಾಂಪನ್ ಹಾಕಲೇಬೇಕು. ಅಲ್ಲಿಂದ ಒಂದೂವರೆ ಕಿ.ಮೀ ನಡಿಗೆ ಆದ ಮೇಲೆ ನಮ್ಮ ರಕ್ಷಣೆಗಾಗಿ ತುದಿಯವರೆಗೆ ಫಿಕ್ಸ್ ರೋಪ್ ಹಾಕಲಾಗಿರುತ್ತೆ. ಅಲ್ಲಿಂದ ನಾರ್ತ್ ಕೋಲ್ ಕ್ಯಾಂಪ್-1ನಲ್ಲಿ ಟೆಂಟ್ ಹಾಕಿ ಒಂದು ರಾತ್ರಿ ತಂಗಿದ್ದೆವು, ಮತ್ತೆ ವಾಪಸ್ ಬೇಸ್ ಕ್ಯಾಂಪ್‌ಗೆ ಬಂದೆವು, ಇಳಿಯೋದಿಕ್ಕೆ ಮೂರು ದಿವಸ ತೆಗೆ ದು ಕೊಳ್ತು. ಈ ಅವಧಿಯಲ್ಲಿ ದೈಹಿಕವಾಗಿ ಬಳಲಿ ಶಕ್ತಿ ಕುಂದುವುದರಿಂದ 2-3 ದಿನ ವಿಶ್ರಾಂತಿ ಪಡೆದು ನಂತರ ಇಂಟ ರಿಮ್, ಕ್ಯಾಂಪ್-2 ಮೂಲಕ 7600ಮೀಟರ್ ಎತ್ತರಕ್ಕೆ ಬಂದೆವು,ಆಮ್ಲಜನಕ ಸಮ ಸ್ಯೆಯಿಂದ ಇಲ್ಲಿಂದ ಕೆಲವರು ವಾಪಸ್ಸಾದರು, ಕಡೆಗೆ 25 ಜನರ ತಂಡದಲ್ಲಿ 8ಜನರು ಉಳಿದುಕೊಂಡೆವು,ಅದುವರೆಗೆ ನನಗೆ ಆಮ್ಲಜನಕ ಬೇಕೆನಿಸಿರಲಿಲ್ಲ. 8 ಸಾವಿರ ಮೀಟರ್ ಎತ್ತರವನ್ನು ಡೆತ್ ಝೋನ್ ಅನ್ನು ತ್ತಾರೆ. ಅಲ್ಲಿಂದ ಕ್ಯಾಂಪ್-3 8300 ಮೀಟರ್ ಎತ್ತರವಿದೆ. ಇಲ್ಲಿ ಆಮ್ಲಜನಕ ಸಿಲಿಂಡರ್ ಬಳಕೆ ಕಡ್ಡಾಯ. ಇಲ್ಲಿಗೆ ಹೋದಾಗ ನನಗೂ ಆಮ್ಲಜನಕ ಸಿಲಿಂಡರ್ ಬೇಕೆನಿಸಿತು.
ಪ್ರಪಾತಗಳು ಹೆಚ್ಚಾಗಿರುವ ಕಾರಣ ಭಯ ಬರಬಾರದು ಎನ್ನುವ ಕಾರಣಕ್ಕೆ ಶೆರ್ಫಾಗಳು ಪರ್ವತಾರೋಹಿಗಳನ್ನು ರಾತ್ರಿ ವೇಳೆಯೇ ಕರೆದೊಯ್ಯುತ್ತಾರೆ. 8500 ಮೀಟರ್ ಎತ್ತರದಲ್ಲಿ ನನ್ನ ಆಕ್ಸಿ ಜನ್ ಸಿಲಿಂಡರ್ ತೆರೆದು ಕೊಂಡು ತೊಂದರೆ ಆಯ್ತು, ಶೆರ್ಫಾ ಗಳು ಬಂದು ಬದಲಿ ಸಿಲಿಂಡರ್ ಜೋಡಿಸಿದರು. ಒಂದೊಂದು ಕ್ಯಾಂಪ್‌ಗೆ ಒಂದೊಂದು ಲಗ್ಗೇಜ್ ಹೊತ್ತೂ ಯ್ಯ ಬೇ ಕಿತ್ತು. ಕ್ಯಾಂಪ್‌ನಿಂದ ಕ್ಯಾಂಪ್‌ಗೆ ಡೌನ್ ಸೂಟ್, ಥರ್ಮಲ್, ಪ್ಲೀಝ್, ಲೈನರ್ ಅಪ್ಪರ್, ಗ್ಲೌಸ್, ಸ್ನೋ ಬೂಟ್, ಸಾಕ್ಸ್ ಸೇರಿ ದಂತೆ ನಮ್ಮ ಬಟ್ಟೆ ಗಳು ಕೂಡ ಬದ ಲಾ ಗು ತ್ತಿದ್ದವು. ಎವರೆಸ್ಟ್ ಮೇಲೆ ನಿಂತು ಎತ್ತ ನೋಡಿ ದರೂ ಪರ್ವತ, ಶಿಖ ರದ ತುದಿಗಳೇ ಕಾಣುತ್ತಿವೆ.ಸ್ವರ್ಗ ಎಂದರೆ ಇದೆ ಏನೋ ಅನ್ನಿಸಿ ಬಿಡ್ತು .
ಗಿರೀಶ್ ಹುಣಸೂರು