Advertisement

ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಬೆಡಗಿ

07:50 PM Jan 27, 2022 | Team Udayavani |

ಕೆಜಿಎಫ್ ಚಿತ್ರದಮೊದಲ ಭಾಗದ ಹಿಂದಿ ಅವತರಣಿಕೆಯ ಪ್ರಮುಖ ಹಾಡಿನಲ್ಲಿ ಕಾಣಿಸಿಕೊಂಡು ಮಿಂಚಿದ್ದ ಮೌನಿ ರಾಯ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಗುರುವಾರ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌನಿ ರಾಯ್ ಅವರು ಗೆಳೆಯ ಸೂರಜ್ ನಂಬಿಯಾರ್ ಅವರನ್ನು ವರಿಸಿದರು.

Advertisement

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರ ವಿವಾಹದ ಚಿತ್ರಗಳನ್ನು ನಟ ಅರ್ಜುನ್ ಬಿಜಲಾನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಶ್ವೇತ ವರ್ಣದ ಸೀರೆ, ದಕ್ಷಿಣ ಭಾರತೀಯ ಶೈಲಿಯ ಆಭರಣಗಳನ್ನು ಧರಿಸಿದ ಮೌನಿ ಮಿಂಚಿದರು. ಕುರ್ತಾ ಮತ್ತು ಬಿಳಿ ಬಣ್ಣದ ಧೋತಿಯನ್ನು ವರ ಸೂರಜ್ ಧರಿಸಿದ್ದರು.

ಇದನ್ನೂ ಓದಿ:ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ಮೌನಿ ಮತ್ತು ಸೂರಜ್ ವಿವಾಹವು ಮಲಯಾಳಿ ಮತ್ತು ಬೆಂಗಾಲಿ ಪದ್ದತಿಯಂತೆ ನಡೆಯಿತು.  ಮಂದಿರಾ ಬೇಡಿ, ಆಶ್ಕಾ ಗೊರಾಡಿಯಾ, ಅರ್ಜುನ್ ಬಿಜಲಾನಿ ಸೇರಿದಂತೆ ಹಲವು ಸೆಲೆಬ್ರಟಿಗಳು ಮೌನಿ ರಾಯ್ ವಿವಾಹದಲ್ಲಿ ಭಾಗವಹಿಸಿದ್ದಾರೆ.

Advertisement

ಯಾರು ಈ ಸೂರಜ್ ನಂಬಿಯಾರ್?

ಮಲಯಾಳಿ ಕುಟುಂಬದ ಸೂರಜ್ ಜನಿಸಿದ್ದು ಕರ್ನಾಟಕದ ಬೆಂಗಳೂರಿನಲ್ಲಿ. ಇಲ್ಲಿಯೇ ಶಾಲಾ ಕಾಲೇಕು ಮುಗಿಸಿರುವ ಸೂರಜ್ ಇಂಜಿನಿಯರಿಂಗ್ ಪದವೀಧರ. ಸದ್ಯ ಉದ್ಯಮಿ ಮತ್ತು ದುಬೈನಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿರುವ ಸೂರಜ್ ಗೆ 2019ರಲ್ಲಿ ಮೊದಲ ಬಾರಿಗೆ ನ್ಯೂ ಇಯರ್ ಪಾರ್ಟಿಯಲ್ಲಿ ಮೌನಿ ರಾಯ್ ಪರಿಚಯವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next