ಮೊಟೊರೊಲಾ ಸಂಸ್ಥೆಯ ಹೊಸ ಮೊಟೊ ಜಿ62 ಸ್ಮಾರ್ಟ್‌ಫೋನ್ ಗುರುವಾರ ಭಾರತದಲ್ಲಿ ಬಿಡುಗಡೆಯಾಗಲಿದೆ.
ಈಗಾಗಲೇ ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಿರುವ ಫೋನಿನಲ್ಲಿ ಕೊಂಚ ಬದಲಾವಣೆ ತಂದು ಭಾರತದಲ್ಲಿ ಬಿಡಲಾಗುತ್ತಿರುವುದಾಗಿ ಹೇಳಲಾಗಿದೆ.
ಬ್ರೆಜಿಲ್‌ನಲ್ಲಿ ಬಿಡುಗಡೆಯಾದ ಫೋನಿನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 480 ಪ್ಲಸ್ ಪ್ರೊಸೆಸರ್ ಇದ್ದು, ಫೋನಿನ ಡಿಸ್‌ಪ್ಲೇ 6.5 ಇಂಚಿದೆ.
ಇದನ್ನೂ ಓದಿ:ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಲೆಫ್ಟ್ ಆಗಬಹುದು!
ತ್ರಿಬಲ್ ರೇರ್ ಕ್ಯಾಮರಾಗಳಿದ್ದು, 50 ಎಂಪಿಯ ಪ್ರೈಮರಿ ಕ್ಯಾಮರಾ ಹಾಗೂ 16 ಎಂಪಿಯ ಸೆಲ್ಫಿ ಕ್ಯಾಮರಾವಿದೆ. 5000ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದ್ದು, 20 ವ್ಯಾಟ್ ಟಬೋ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. 4GB RAM ಜತೆ 128ಜಿಬಿ ಇಂಟರ್‌ನಲ್ ಸ್ಟೋರೇಜ್ ಇದ್ದು, ಇದರ ಬೆಲೆ ಮಾಧ್ಯಮಿಕವಾಗಿರಲಿದೆ ಎಂದು ಅಂದಾಜಿಸಲಾಗಿದೆ.