ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ಪ್ರೌಢ ಶಾಲಾ 8ನೇ ತರಗತಿ ಮಕ್ಕಳಿಗೆ ಸರಕಾರದ ಉಚಿತ ಸೈಕಲ್ ವಿತರಿಸಲಾಯಿತು. 26 ಹುಡುಗರು ಮತ್ತು 24 ಹುಡುಗಿಯರು ಈ ಸೌಲಭ್ಯದ ಫಲಾನುಭವಿಗಳಾಗಿದ್ದರು.
ಅತಿಥಿಗಳಾಗಿ ಆಗಮಿಸಿ ಸೈಕಲ್ ವಿತರಿಸಿದ ನೆಲ್ಯಾಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೋತ್ತಮ ಗೌಡರು ಸೈಕಲ್‌ಗಳನ್ನು ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಪುತ್ತೂರು ತಾಲೂಕು ಪಂಚಾçತ್ ಸದಸ್ಯೆ ಉಷಾ ಅಂಚನ್ ಮಾತನಾಡಿ ಸೈಕಲ್ ಬಳಕೆಯಿಂದ ಹೆಣ್ಣು ಮಕ್ಕಳಲ್ಲಿ ಧೈರ್ಯ, ಸ್ಥೆ „ರ್ಯ ಹೆಚ್ಚುತ್ತದೆ ಎಂದರು.ನೆಲ್ಯಾಡಿ ಪಂಚಾಯತ್ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರು ಮಾತನಾಡಿ ಸೈಕಲ್ ಬಳಕೆ ಪರಿಸರ ಮಾಲಿನ್ಯ ತಡೆಯುವಲ್ಲಿ ಬಲುದೊಡ್ಡ ಕೊಡುಗೆಯಾಗಿದೆ ಎಂದರು.
ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ ಅವರು ಫಲಾನುಭವಿ ಮಕ್ಕಳಿಗೆ ಎಚ್ಚರಿಕೆಯಿಂದ ಸೈಕಲ್ ಬಳಸಲು ಕರೆ ನೀಡಿದದು. ಮುಖ್ಯ ಶಿಕ್ಷಕಿ ಸರೋಜಾಕುಮಾರಿ ಸ್ವಾಗತಿಸಿ ಶಿಕ್ಷಕ ಉಲಹನ್ನನ್ ವಂದಿಸಿದರು. ಪ್ರಾಚಾರ್ಯ ಎಂ. ಕೆ. ಏಲಿಯಾಸ್, ಮುಖ್ಯಗುರು ಹರಿಪ್ರಸಾದ್, ಶಿಕ್ಷಕರಾದ ಕೆ.ಸಿ. ಪೌಲೋಸ್ ಪ್ರಮೀಳಾ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕ ಎಂ. ಐ. ತೋಮಸ್ ಕಾರ್ಯಕ್ರಮ ನಿರೂಪಿಸಿದರು.