ನವದೆಹಲಿ: ದೇಶದಲ್ಲಿ ಮೋಟಾರ್‌ಸ್ಪೋರ್ಟ್‌ಗೆ ಭಾರಿ ಉತ್ತೇಜನ ನೀಡುವುದಾಗಿ ಮೋಟೋ ಜಿಪಿ ಸಂಘಟಕರು ಬುಧವಾರ ಘೋಷಿಸಿದ್ದು, ಮುಂದಿನ ವರ್ಷದ ಆರಂಭದಲ್ಲಿ ಅತಿ ದೊಡ್ಡ ದ್ವಿಚಕ್ರ ರೇಸಿಂಗ್ ಈವೆಂಟ್ ಭಾರತದಲ್ಲಿ ಆಯೋಜನೆಯಾಗುವ ನೀರಿಕ್ಷೆ ಮಾಡಲಾಗಿದೆ.
ಎಂಒಯು ಹಲವು ವರ್ಷಗಳಲ್ಲಿ ಏಳು ರೇಸ್‌ಗಳನ್ನು ನಡೆಸುವ ಭರವಸೆ ನೀಡಿದೆ, ಆದರೆ ಮೋಟೋಜಿಪಿ ಸಂಘಟಕರಾದ ಡೋರ್ನಾ ಸ್ಪೋರ್ಟ್ಸ್ ಮತ್ತು ಭಾರತೀಯ ಪ್ರವರ್ತಕರಾದ ಫಾರಿಸ್ಟ್ರೀಟ್ ಸ್ಪೋರ್ಟ್ಸ್ ಮೊದಲ ರೇಸ್‌ಗೆ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.
ಇದನ್ನೂ ಓದಿ: ಟಿ 20 ಶ್ರೇಯಾಂಕ: ಬಾಬರ್ ಅಜಮ್ ಹಿಂದಿಕ್ಕಿದ ಸೂರ್ಯಕುಮಾರ್
‘ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್’ ಎಂದು ಬ್ರಾಂಡ್ ಮಾಡಲಾಗಿದೆ. 2023ರಲ್ಲಿ ಸಾಧ್ಯವಾಗದಿದ್ದರೆ, 2024 ರಲ್ಲಿ ಉದ್ಘಾಟನಾ ಸುತ್ತಿನ ಮೊದಲು ಅದೇ ವರ್ಷ ಪರೀಕ್ಷಾರ್ಥ ರೇಸ್ ನಡೆಸುವ ಗುರಿಯನ್ನು ಹೊಂದಿವೆ. ಡೋರ್ನಾ ಶೀಘ್ರದಲ್ಲೇ 2023 ಕ್ಯಾಲೆಂಡರ್ ಅನ್ನು ಪ್ರಕಟಿಸುತ್ತದೆ.
ಡೋರ್ನಾ ಸ್ಪೋರ್ಟ್ಸ್ ಎಂಡಿ ಕಾರ್ಲೋಸ್ ಎಜ್ಪೆಲೆಟಾ ಮತ್ತು ಭಾರತೀಯ ಪ್ರವರ್ತಕ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ (ಎಫ್‌ಎಸ್‌ಎಸ್) ಸಿಒಒ ಪುಷ್ಕರ್ ನಾಥ್ ಮತ್ತು ನಿರ್ದೇಶಕ ಅಮಿತ್ ಸ್ಯಾಂಡಿಲ್ ಅವರ ಉಪಸ್ಥಿತಿಯಲ್ಲಿ ಎಂಒಯು ಘೋಷಿಸಿದೆ.