Advertisement

ಆರ್‌ಎಸ್‌ಎಸ್‌ನಿಂದ ದೇಶಭಕ್ತಿಗೆ ಪ್ರೇರಣೆ : ವೆಂಕಟಗಿರಿ

12:30 AM Feb 15, 2019 | |

ಮಡಿಕೇರಿ: ದೇಶದಲ್ಲಿ 57 ಸಾವಿರಕ್ಕೂ ಹೆಚ್ಚು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಿದ್ದು, ಪ್ರತಿ ಶಾಖೆಯು ದೇಶಭಕ್ತಿಯನ್ನು ಸಂಘದ ಕಾರ್ಯಕರ್ತರಲ್ಲಿ ತುಂಬಲು ಪ್ರೇರೇಪಣೆ ನೀಡುತ್ತಿದೆ ಎಂದು ನಿವೃತ್ತ ಮೇಜರ್‌ ವೆಂಕಟಗಿರಿ ಪ್ರತಿಪಾದಿಸಿದ್ದಾರೆ. 

Advertisement

ನಗರದ ಗಾಂಧೀ ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾರೀರಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ದೇಶದ ಆಡಳಿತವನ್ನು ಮುನ್ನಡೆಸುತ್ತಿರುವ ನಾಯಕರೆಲ್ಲಾ ಸಂಘದ ಕಾರ್ಯಕರ್ತರಾಗಿದ್ದು, ಅವರ ಸೇವೆಯನ್ನು ನೋಡಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದೆ. ಇದರಿಂದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕ ಡಾ| ಕೇಶವ ಬಲರಾಮ್‌ ಹೆಡಗೆವಾರ್‌ ಅವರ ಕನಸು ನನಸಾದಂತಾಗಿದೆ ಎಂದು  ಮೇಜರ್‌ ವೆಂಕಟಗಿರಿ ಅಭಿಪ್ರಾಯಪಟ್ಟರು. 

ಗುಜರಾತ್‌ ಭೂಕಂಪ, 1984ರ ಭೂಪಾಲ್‌ ಅನಿಲ ದುರಂತ ಮತ್ತು ಕೊಡಗು ಪ್ರಕೃತಿ ವಿಕೋಪದಲ್ಲಿ ಸಂಘದ ಕಾರ್ಯಕರ್ತರು ಮಾಡಿದ ಜನಸೇವೆ ಅಮೋಘವಾಗಿತ್ತು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಮತ್ತೋರ್ವ ಅತಿಥಿ ಸಂಘ ಪ್ರಮುಖರಾದ ಸುಭಾಷ್‌ ಮಾತನಾಡಿ, ಸಂಘದ ಶಾಖೆಗಳಲ್ಲಿ ವ್ಯಕ್ತಿತ್ವ ಮತ್ತು ಆತ್ಮಸ್ಥೆ$Âರ್ಯವನ್ನು ತುಂಬುವ ಕೆಲಸ ಮಾಡಲಾಗುತ್ತಿದ್ದು, ಆ ಮೂಲಕ ಸುಭದ್ರ ದೇಶವನ್ನು ಕಟ್ಟುವ ಕಾರ್ಯಕ್ಕೆ ಶಾಖೆಗಳು ಕಾರ್ಯೋನ್ಮುಖವಾಗಿವೆ ಎಂದು ಹೇಳಿದರು. ದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗುವ ಮೂಲಕ ದೇಶವನ್ನು ಕಟ್ಟಬೇಕಿರುವ ಹಿನ್ನೆಲೆಯಲ್ಲಿ ಶಾಖೆಗಳಲ್ಲಿ 1 ಗಂಟೆಗಳ ಕಾಲ ಶಾರೀರಿಕ ವ್ಯಾಯಾಮಗಳಿಗೆ ಆಧ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. 

ಶರೀರ, ಮನಸು ಮತ್ತು ಬುದ್ದಿ ಒಂದಾದರೆ ಮಾತ್ರ ಅದನ್ನು ಸಂಸ್ಕಾರ ಎಂದು ಕರೆಯುತ್ತಾರೆ, ಅದನ್ನೇ ಶಾಖೆಗಳಲ್ಲಿ ಕಲಿಸಲಾಗುತ್ತಿದೆ. ಭಾರತ ದೇಶ ಮೊದಲು ದಾಳಿ ಮಾಡಿದ ಇತಿಹಾಸವೇ ಇಲ್ಲ. ಆದರೆ ಶತ್ರು ರಾಷ್ಟ್ರದ ಒಳನುಗ್ಗಿ ಅವರನ್ನು ಸದೆಬಡಿಯುವ ತಾಕತ್ತು ದೇಶಕ್ಕಿದೆ. ನಮ್ಮ ಶಕ್ತಿ ನಮ್ಮ ರಕ್ಷಣೆಗೆ ಮೀಸಲಾಗಿದೆ ಎಂಬುದನ್ನು ಸರ್ಜಿಕಲ್‌ ಸ್ಟೆìçಕ್‌ ಮೂಲಕ ದೇಶದ ಸೈನಿಕರು ಮಾಡಿ ತೋರಿಸಿದ್ದಾರೆ ಎಂದು ಸುಭಾಷ್‌ ಶ್ಲಾ ಸಿದರು. 

Advertisement

ಕಾರ್ಯಕ್ರಮಕ್ಕೂ ಮೊದಲು ಭಗವಧ್ವಜದ ಆರೋಹಣ ಮಾಡಲಾಯಿತು. ಬಳಿಕ ಸಂಘದ ಶಾಖೆಗಳಲ್ಲಿ ನಡೆಸಲಾಗುವ ವಿವಿಧ ರೀತಿಯ ವ್ಯಾಯಾಮ, ದಂಡ ಕಲೆ, ಯೋಗ, ಪಥಸಂಚಲನ ಸೇರಿದಂತೆ ವಿವಿಧ ಕ್ರೀಡಾ ಕೂಟಗಳ ಪ್ರದರ್ಶನವನ್ನು ನಡೆಸಲಾಯಿತು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next