Advertisement

ಪ್ರಣವ್‌ ಆತ್ಮಚರಿತ್ರೆ: ಮಕ್ಕಳ ನಡುವೆ ಫೈಟ್‌!

12:21 AM Dec 16, 2020 | mahesh |

ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಬದುಕಿನ ಕಥೆಯುಳ್ಳ “ದಿ ಪ್ರಸಿಡೆನ್ಷಿ­ಯಲ್‌ ಇಯರ್ಸ್‌’ ಮಾರು ಕಟ್ಟೆ ಪ್ರವೇಶಿಸುವ ಮುನ್ನವೇ ವಿವಾದ ಎಬ್ಬಿಸಿದೆ. ಕಾಂಗ್ರೆಸ್‌ ವೈಫ‌ಲ್ಯಗಳನ್ನು ಯಥಾವತ್ತು ತೆರೆದಿಟ್ಟಿರುವ ಈ ಕೃತಿಯ ಪ್ರಕಟಣೆ ಕುರಿತು ಪ್ರಣವ್‌ ಪುತ್ರ, ಪುತ್ರಿ ನಡುವೆಯೇ ಕಾಳಗ ಏರ್ಪಟ್ಟಿದೆ.

Advertisement

ಮಾಜಿ ಸಂಸದರೂ ಆಗಿರುವ ಪ್ರಣವ್‌ ಪುತ್ರ ಅಭಿಜಿತ್‌ ಮುಖರ್ಜಿ, “ನಾನು ಒಪ್ಪಿಗೆ ನೀಡುವ ತನಕ ಈ ಕೃತಿ ಪ್ರಕಟಿಸುವಂತಿಲ್ಲ’ ಎಂದು ಪ್ರಕಾಶಕರಿಗೆ ತಾಕೀತು ಮಾಡಿದ್ದಾರೆ. ಇನ್ನೊಂದೆಡೆ ಪುತ್ರಿ, ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆಯೂ ಆದ ಶರ್ಮಿಷ್ಠ ಮುಖರ್ಜಿ, “ಚೀಪ್‌ ಪಬ್ಲಿಸಿಟಿಗಾಗಿ ಯಾರೂ ಈ ಕೃತಿಗೆ ತಡೆಯೊಡ್ಡಬಾರದು. ಅಭಿಷೇಕ್‌ ಕೂಡ ಅನಗತ್ಯ ತಡೆ ಸೃಷ್ಟಿಸಬಾರದು. ತಂದೆ ಕೋಮಾಕ್ಕೆ ಹೋಗುವ ಮುನ್ನ ಸ್ವತಃ ಅವರೇ ಇದರ ಕರಡು ಪ್ರತಿ ರಚಿಸಿದ್ದರು’ ಎಂದು ತಿರುಗೇಟು ನೀಡಿದ್ದಾರೆ. “ಕೃತಿ ಪ್ರಕಟಣೆಗೂ ಮುನ್ನ ಮಗನಾಗಿ ನನಗೂ ಕೃತಿ ಓದಲು ಸಿಗಬೇಕು’ ಎನ್ನುವುದು ಅಭಿಷೇಕ್‌ ವಾದ. ಜನವರಿಗೆ ಮಾರುಕಟ್ಟೆ ಪ್ರವೇಶಿಸಲಿರುವ ಈ ಕೃತಿಯಲ್ಲಿ ಕಾಂಗ್ರೆಸ್‌ನ ಸೋಲನ್ನು ಪ್ರಣವ್‌ ನೇರಾನೇರ ಚಿತ್ರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next