ಸಂಬಂಧದಿಂದ ಹುಟ್ಟಿ ಬೆಳೆಯುವ ಸಂಸ್ಕೃತಿಯನ್ನು ಮಾತೃ ಭಾಷೆ ಪ್ರತಿನಿಧಿಸುತ್ತದೆ ಎಂದು ಉಪನ್ಯಾಸಕ ಹಾಗೂ
ಚಿಂತಕ ಎಚ್.ಬಿ. ಪಾಟೀಲ ಹೇಳಿದರು.
Advertisement
ನಗರದ ಸಾಯಿ ಮಂದಿರ ಸಮೀಪದಲ್ಲಿರುವ ಕೊಹಿನೂರ ವಾಣಿಜ್ಯ ಪದವಿ ಕಾಲೇಜಿನಲ್ಲಿ ವಿಶ್ವ ಮಾತೃಭಾಷೆದಿನಾಚರಣೆ ನಿಮಿತ್ತ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ‘ಫೆಬ್ರುವರಿ 21’ನ್ನು, ವಿಶ್ವಮಾತೃ ಭಾಷಾ ದಿನವನ್ನಾಗಿ ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಬಹುಭಾಷೆ ಮತ್ತು ಬಹು ಸಂಸ್ಕೃತಿ ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಆಚರಣೆ ಮಾಡಲಾಗುತ್ತದೆ.
1999ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು. ಇದರ ಮುಂದುವರಿದ ಭಾಗವಾಗಿ 2008ನ್ನು
‘ವಿಶ್ವ ಭಾಷೆಗಳ ವರ್ಷ’ ಎಂದು ಆಚರಿಸಿತು. 2000ನೇ ಇಸ್ವಿಯಿಂದ ಪ್ರತಿವರ್ಷ ‘ವಿಶ್ವ ಮಾತೃ ಭಾಷೆ ದಿವಸ’ ಆಚರಿಸಲಾಗುತ್ತಿದೆ. 1952ರಲ್ಲಿ ಅಂದಿನ ಪಾಕಿಸ್ತಾನವಾಗಿದ್ದ ಇಂದಿನ ಬಾಂಗ್ಲಾ ದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ಹೋರಾಡಿ ವಿದ್ಯಾರ್ಥಿಗಳು ಹುತಾತ್ಮರಾದ ನೆನಪಿಗೆ ಈ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ರಾಠೊಡ, ಅರುಣಕುಮಾರ ಚವ್ಹಾಣ, ವಿಕ್ರಮ ನವಸೇನ, ಮುರುಗೇಶ, ಶಿಲ್ಪಾ ಕೆ., ಶಿವಕುಮಾರ ಗೋಣಗಿಕರ್, ಜ್ಯೋತಿ ಭಾಗವಹಿಸಿದ್ದರು.