Advertisement

ಮಗುವಿನ ಅಳು ನಿಲ್ಲಿಸೋಕೆ ಹೊಸ ಟ್ರಿಕ್‌

07:33 PM Dec 10, 2021 | Team Udayavani |

ಪುಟಾಣಿ ಮಕ್ಕಳು ಅಳುತ್ತಿದ್ದರೆ ಏನು ಮಾಡಬೇಕು? ಹಾಲು ಕುಡಿಸೋದು, ಮಲಗಿಸೋದು, ಲಾಲಿ ಹಾಡೋದು ಇಂಥಹ ನಾನಾ ಪ್ರಯತ್ನಗಳನ್ನು ತಾಯಂದಿರು ಮಾಡಿರುತ್ತಾರೆ.

Advertisement

ಆದರೆ ಈ ವಿದೇಶಿ ತಾಯಿಯ ಪ್ರಯತ್ನ ಕೇಳಿದರೆ ನೀವೊಮ್ಮೆ ನಗುತ್ತೀರ.

ತಂದೆಯ ತೊಡೆ ಮೇಲಿರುವ ಮಗು ಬಿಕ್ಕಿ ಬಿಕ್ಕಿ ಅಳುತ್ತಿದೆ. ಅಪ್ಪ ಅದೆಷ್ಟೇ ಪ್ರಯತ್ನಿಸಿದರೂ ಮಗು ಅಳು ನಿಲ್ಲಿಸಲೇ ಇಲ್ಲ. ಅಲ್ಲೇ ಇದ್ದ ತಾಯಿ ಚೀಸ್‌ ಸ್ಲೈಸ್ ಒಂದನ್ನು ಮಗುವಿನತ್ತ ಬೀಸಿದ್ದಾಳೆ. ಆ ಸ್ಲೈಸ್ ನೇರವಾಗಿ ಬಂದು ಮಗುವಿನ ತಲೆಯ ಮೇಲೆ ಕುಳಿತಿದೆ.

ಅಷ್ಟಕ್ಕೇ ಮಗು ಗಪ್‌ಚುಪ್‌! ಅಳುತ್ತಿದ್ದ ಮಗು, ಒಂದೇ ಸೆಕೆಂಡಿಗೆ ಏನೋ ಆದವರಂತೆ ಆಶ್ಚರ್ಯದಿಂದ ನೋಡುತ್ತಿದೆ.

ಇದನ್ನೂ ಓದಿ:ಗೋವಾದಲ್ಲಿ ಪ್ರತಿ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನ: ಪಿ.ಚಿದಂಬರಂ

Advertisement

ಈ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next