Advertisement

ಮಾತೃಪೂರ್ಣ ಯೋಜನೆ: ಸಚಿವರಿಗೆ ಮನವಿ

11:59 AM Nov 13, 2017 | Team Udayavani |

ಬಂಟ್ವಾಳ: ರಾಜ್ಯ ಸರಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆ ಸ್ವಾಗತಾರ್ಹವಾದರೂ ಇದನ್ನು ಯಥಾವತ್‌ ಅನುಷ್ಠಾನ ಅಸಾಧ್ಯ ಎಂದು ಬಂಟ್ವಾಳ ತಾ| ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಉಮಾವತಿ ಹೇಳಿದ್ದಾರೆ.

Advertisement

ಅವರು ನ. 11ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ನಿವಾಸದಲ್ಲಿ ಮನವಿ ನೀಡಿ, ಸಂಘದ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ಗರ್ಭಿಣಿ, ಬಾಣಂತಿಯರು ದಿನಂಪ್ರತಿ ಅಂಗನವಾಡಿ ಕೇಂದ್ರಕ್ಕೆ ಆಹಾರ ಸೇವಿಸಲು ಬರುತ್ತಿಲ್ಲ. ತಮ್ಮ ಮನೆಗಳಿಂದ ಈ ಕೇಂದ್ರಕ್ಕೆ ಇರುವ ದೂರ, ಮಳೆ, ಬಿಸಿಲು, ಏರಿಳಿತ ಪ್ರದೇಶ, ಆರೋಗ್ಯ ಸಮಸ್ಯೆ ಮೊದಲಾದ ಕಾರಣಗಳಿಂದ ಫಲಾನುಭವಿಗಳು ದಿನಂಪತ್ರಿ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next