Advertisement

ಮಾತೆ ಮಹಾದೇವಿ ಮಹಾನ್‌ ಚೇತನ

06:25 AM Mar 15, 2019 | |

ಶಹಾಬಾದ: ಭಕ್ತರ ವಲಯದಲ್ಲಿ ಅಭಿನವ ಅಕ್ಕಮಹಾದೇವಿ. ಪ್ರಪ್ರಥಮ ಮಹಿಳಾ ಜಗದ್ಗುರು ಎಂದೇ ಕರೆಯಲ್ಪಡುವ ಮಾತೆ ಮಹಾದೇವಿ 12ನೇ ಶತಮಾನದ ಶರಣರ ಬಸವ ತತ್ವಗಳನ್ನು ರಾಜ್ಯದಲ್ಲೆಡೆ ಅಲ್ಲದೇ ವಿದೇಶದಲ್ಲೂ ಪ್ರಚಾರ ಮಾಡುತ್ತ ಬಸವತತ್ವದ ಪಾಲಕರಿಗೆ ಮಹಾನ್‌ ಚೇತನ ಶಕ್ತಿಯಾಗಿದ್ದರು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೈಜನಾಥ ಹುಗ್ಗಿ ಹೇಳಿದರು.

Advertisement

ನಗರದ ಹಳೆಶಹಾಬಾದನ ವೀರಭದ್ರೇಶ್ವರ ಮಂದಿರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಹಾಗೂ ರಾಷ್ಟ್ರೀಯ ಬಸವ ದಳದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಮಾತೆ ಮಹಾದೇವಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರ ತತ್ವದಿಂದ ಪ್ರಭಾವಿತರಾಗಿದ್ದ ಅವರು ಗುರು ಲಿಂಗಾನಂದ ಸ್ವಾಮೀಜಿಯಿಂದ ಸ್ಫೂರ್ತಿ ಪಡೆದು ಅವರಿಂದ ಬಸವಧರ್ಮ ದೀಕ್ಷೆ ಪಡೆದು ಮಾತೆ ಮಹಾದೇವಿಯಾದರು. ಅವರು ಕರ್ನಾಟಕ, ಮಹಾರಾಷ್ಟ್ರ ಅಲ್ಲದೇ ಬಸವ ತತ್ವವನ್ನು ಹೊರ ದೇಶಗಳಿಗೆ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 73ನೇ ವರ್ಷದ ಜೀವನದ ಅವಧಿಯಲ್ಲಿ 150ಕ್ಕೂ ಅಧಿಕ ಧಾರ್ಮಿಕ ಮತ್ತು ಸಾಮಾಜಿಕ ಪುಸ್ತಕ ಬರೆದಿದ್ದಾರೆ. 350ಕ್ಕೂ ಅಧಿಕ ಭಕ್ತಿಗೀತೆ ರಚಿಸಿದ್ದಾರೆ. ಅವರ ನಿರ್ಭೀತ ನಿಲುವು, ತತ್ವ ನಿಷ್ಠೆ, ಸತ್ಯಪ್ರಿಯತೆ, ಸಮಾಜೋದ್ಧಾರಕ ಕಳಕಳಿ ಹಾಗೂ ವೈಶಿಷ್ಟಪೂರ್ಣ ಅಮೋಘ ವಾಣಿಯಿಂದ ಅಪಾರ ಭಕ್ತರನ್ನು ಹೊಂದಿದ್ದಾರೆ. ಅವರ ಅಗಲಿಕೆ ನಾಡಿನ ಸಮಸ್ತ ಭಕ್ತ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಹೇಳಿದರು.
 
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಸಮಾಜದ ಹಿತ ಹಾಗೂ ಬೆಳವಣಿಗೆ ದೃಷ್ಟಿಯಿಂದ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬುದು ಅವರ ಆಸೆಯಾಗಿತ್ತು. ಅಲ್ಲದೇ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಆಗುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಆದರೆ ಅವರು ಇನ್ನಿಲ್ಲ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ
ಸ್ವತಂತ್ರ ಧರ್ಮವಾಗುವತನಕ ಹೋರಾಟ ಮಾಡಿ ಅವರ ಕನಸು ನನಸು ಮಾಡಲು ಅವಿರತ ಪ್ರಯತ್ನ ಮಾಡುತ್ತೆವೆ ಎಂದು ಹೇಳಿದರು. 

ಜಾಗತಿಕ ಲಿಂಗಾಯತ ಮಹಾಸಭಾದ ಶ್ರೀಶೈಲಪ್ಪ ಬೆಳಮಗಿ, ಶಿವುಗೌಡ, ಶರಣಗೌಡ ಪಾಟೀಲ, ಬಸವರಾಜ ಪಾಟೀಲ, ಕುಪೇಂದ್ರ ತುಪ್ಪದ, ನೀಲಕಂಠ ಹಡಪದ, ಮಹಾನಂದಿ ಪಾರಾ, ಮಲ್ಲಿಕಾರ್ಜುನ ಪಟ್ಟಣಕರ್‌, ನಾಗರಾಜ ತುಪ್ಪದ, ದೊಡ್ಡಪ್ಪ ಪೂಜಾರಿ, ಶರಣಪ್ಪ ಪೂಜಾರಿ, ರಾಯಣ್ಣ ಭಂಡಾರಿ, ನಾಗರಾಜ ಹಳ್ಳಿ, ಶಾಂತಪ್ಪ ಮಾಡ್ಯಾಳ, ತುಕರಾಮ, ವಿಶ್ವನಾಥ ಹಡಪದ, ಸಂತೋಷ ಪಾಟೀಲ, ಪಿಂಟು ಕುಂಬಾರ, ಶರಣಪ್ಪ ಸೂರಾ ಇದ್ದರು.

ಸಂತಾಪ: ಪ್ರಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಗರದ ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ್‌, ಶಿವಶರಣಪ್ಪ ಜೆಟ್ಟೂರ, ಬಸಯ್ಯ ಪೂಜಾರಿ, ರೇವಣಸಿದ್ದಪ್ಪ ಮುಸ್ತಾರಿ, ಮೇಟಿ ಪಂಪಾಪತಿ, ಗುರಲಿಂಗಪ್ಪ ಪಾಟೀಲ, ಶಾಂತಪ್ಪ ಬಸಪಟ್ಟಣ, ನೀಲಕಂಠ ಮುಧೋಳಕರ್‌, ಶಿವಪುತ್ರ ಕುಂಬಾರ, ವೀರಭದ್ರಪ್ಪ ಕಲಶೆಟ್ಟಿ ಶೋಕ ವ್ಯಕ್ತಪಡಿಸಿದ್ದಾರೆ.

Advertisement

ಗಣ್ಯರ ಸಂತಾಪ
ಕಲಬುರಗಿ: ಬಸವಧರ್ಮದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಲಿಂಗೈಕ್ಯ ಹಿನ್ನೆಲೆಯಲ್ಲಿ ಕಲಬುರಗಿಯ
ಮಠಾಧೀಶರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಜಗದ್ಗುರು ಶ್ರೀಶೈಲ ಸಾರಂಗಧರ ಮಠದ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ಬಿ.ಆರ್‌.ಪಾಟೀಲ, ಮುಖಂಡರಾದ ರವೀಂದ್ರ ಶಾಬಾದಿ, ಆರ್‌.ಜಿ.ಶೆಟಗಾರ ಹಾಗೂ ಇತರು ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next