Advertisement

ಮದರ್‌ ಇಂಡಿಯಾ ಹೈಸ್ಕೂಲ್‌ : ಸ್ಕೌಟ್‌ ಉತ್ಸವ

01:57 PM Nov 07, 2017 | |

ಮುಂಬಯಿ: ಮದರ್‌ ಇಂಡಿಯಾ ಫ್ರೀ ನೈಟ್‌ ಹೈಸ್ಕೂಲ್‌ ಹಳೆ ವಿದ್ಯಾರ್ಥಿ ಸಂಘ ಮತ್ತು ಜನತಾ ಶಿಕ್ಷಣ ಸಂಘದ ಜಂಟಿ ಆಯೋಜನೆಯಲ್ಲಿ 19ನೇ ಈಸ್ಟ್‌ ಬೋಂಬೆ ಸ್ಕೌಟ್‌ ಉತ್ಸವವು ನ. 5ರಂದು ಬೆಳಗ್ಗೆ 9ರಿಂದ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಮದರ್‌ ಇಂಡಿಯಾ ರಾತ್ರಿ ಶಾಲೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ, ಸಾಯಿಕೇರ್‌ ಲಾಜಿಸ್ಟಿಕ್ಸ್‌ ಲಿಮಿಟೆಡ್‌ ಇದರ ಮುಖ್ಯ ಆಡಳಿತ ನಿರ್ದೇಶಕ,  ಸುರೇಂದ್ರ ಎ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಗೌರವ ಅತಿಥಿಗಳಾಗಿ ಹರೇ ಕೃಷ್ಣ ಫೌಂಡೇಷನ್‌ ಮುಂಬಯಿ ಇದರ ಟ್ರಸ್ಟಿ ಕರುಣಾಕರ ಜಿ. ಪುತ್ರನ್‌, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಇದರ ಅಧ್ಯಕ್ಷ ಎನ್‌. ಟಿ. ಪೂಜಾರಿ, ಸಾನ್ವಿ ಸ್ಟಾರ್‌ ಹಾಸ್ಪಿಟಾಲಿಟಿ ಪ್ರೈವೇಟ್‌ ಲಿಮಿಟೆಡ್‌ ಇದರ ಆಡಳಿತ ನಿರ್ದೇಶಕ ಸಂತೋಷ್‌ ಕುಮಾರ್‌ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಹೊಟೇಲ್‌ ಉದ್ಯಮಿ ಸದಾಶಿವ ಶೆಟ್ಟಿ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸ್ಕೌಟ್‌ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ಸ್ಕೌಟರ್‌ ರಾಮದಾಸ್‌ ಎಚ್‌. ನಾಯಕ್‌, ಸ್ಕೌಟರ್‌ ಮಂದಾರ ಎನ್‌. ಹೆಗ್ಡೆ, ಸ್ಕೌಟರ್‌ ಮುದ್ದು ಕೆ. ಪೂಜಾರಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್‌ ಜಿ. ಮೈಂದನ್‌, ಗೌರವ ಕೋಶಾಧಿಕಾರಿ ಪ್ರೊ| ಮಂದಾರ ಎನ್‌. ಹೆಗ್ಡೆ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್‌ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ದೇವಾಡಿಗ, ಸ್ಮರಣ ಸಂಚಿಕೆ ಸಮಿತಿಯ ಕಾರ್ಯದರ್ಶಿ ಯಶವಂತ್‌ ಪೂಜಾರಿ, ಸ್ಕೌಟ್‌ ಮಾಸ್ಟರ್‌ ರಾಮದಾಸ್‌ ನೈಕ್‌, ಸಂಯೋಜನ ಸಮಿತಿಯ ಜಯ ಸಿ. ಪೂಜಾರಿ, ಸಂಯೋಜನ ಸಮಿತಿಯ ಕಾರ್ಯದರ್ಶಿ ಜಯರಾಮ ಕೆ. ಪೂಜಾರಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಳೆವಿದ್ಯಾರ್ಥಿಗಳ ನೇತೃತ್ವದಲ್ಲಿ ಸಮಾರಂಭವು ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಾಜಲ್‌ ಕುಂದರ್‌ ಮತ್ತುತಂಡದವರಿಂದ ಸ್ವಾಗತ ನೃತ್ಯ, ಪ್ರತಿಭಾವಂತರಿಂದ ಭರತನಾಟ್ಯ, ಸಾಕ್ಷ್ಯಚಿತ್ರ ಪ್ರದರ್ಶನ, ಗಣ್ಯರಿಂದ  ಸ್ಮರಣ ಸಂಚಿಕೆ ಬಿಡುಗಡೆ, ಹಾಗೂ ಮುದರಂಗಡಿ ಶ್ರೀ ಗುರುಕುಲ ತಂಡದ ಕಲಾವಿದರಿಂದ, ರೋಹನ್‌ ಕುಮಾರ್‌ ನಿರ್ದೇಶನದಲ್ಲಿ, ರಮಾನಂದ ನಾಯಕ್‌ ಅವರ ಸಂಗೀತ ನಿರ್ದೇಶನದಲ್ಲಿ ನಸೀಬು ತುಳು ನಾಟಕ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next